ಮೆಗಾ ಲಾಂಚ್: ಇಸ್ರೋದಿಂದ ಶತಕದ ಉಡ್ಡಯನ ದಾಖಲೆ
Team Udayavani, Feb 13, 2017, 3:45 AM IST
ಬೆಂಗಳೂರು: ಭಾರತೀಯರ ಪಾಲಿಗೆ ಬುಧವಾರ ಸಂತಸದ ದಿನ. ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ
ಬಾರಿಗೆ ಇಸ್ರೋ ಸಂಸ್ಥೆ ಒಂದೇ ಉಡಾವಣೆ ಮೂಲಕ 104 ಉಪಗ್ರಹಗಳನ್ನು ಒಮ್ಮೆಗೇ ಕಕ್ಷೆಗೆ ಸೇರಿಸಲಿದೆ. ಎಲ್ಲವೂ
ಅಂದುಕೊಂಡಂತೆ ನಡೆದರೆ, 2014ರಲ್ಲಿ 37 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾಯಿಸಿದ್ದ ರಷ್ಯಾದ ದಾಖಲೆಯನ್ನು ಭಾರತ ಮುರಿಯಲಿದೆ. ಫೆ.15ರ ಬೆಳಗ್ಗೆ ಇಸ್ರೋ ತನ್ನ ಬಾಹ್ಯಾಕಾಶ ನೌಕೆ ಪಿಎಸ್‌ಎಲ್‌ವಿ ಮೂಲಕ ಮೂರು ಭಾರತೀಯ ಹಾಗೂ 101 ವಿದೇಶಿ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.
ಬುಧವಾರ ಬೆಳಗ್ಗೆ 9.28ಕ್ಕೆ ಶ್ರೀಹರಿಕೋಟಾದ ಎಸ್‌ಡಿಎಸ್‌ಸಿ ಎಸ್‌ಎಚ್‌ಎಆರ್ ಕೇಂದ್ರದಿಂದ ಪಿಎಸ್‌ಎಲ್‌ವಿ37 ರಾಕೆಟ್‌ನಲ್ಲಿ ಈ ಎಲ್ಲಾ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗುತ್ತದೆ. ಇದರಲ್ಲಿ 101 ನ್ಯಾನೋ ಸೆಟಲೈಟ್‌ಗಳಿವೆ. ಇಸ್ರೇಲ್, ಕಜಕಿಸ್ತಾನ್, ನೆದರ್‌ಲೆಂಡ್, ಸ್ವಿಜರ್ಲೆಂಡ್, ಯುಎಇಯ ತಲಾ ಒಂದು ಹಾಗೂ ಅಮೆರಿಕದ 96 ಮತ್ತು ಭಾರತದ ಎರಡು ಉಪಗ್ರಹಗಳನ್ನು ಇಸ್ರೋ ರಾಕೆಟ್ ಹೊತ್ತೂಯ್ಯಲಿದೆ.
ಶುಕ್ರಗ್ರಹದ ಮೇಲೂ ಕಣ್ಣು: ಇದೇ ಮೊದಲ ಬಾರಿಗೆ ಶುಕ್ರ ಗ್ರಹದ ಮೇಲೆ ಹೆಜ್ಜೆಯಿಡುವ ಮೂಲಕ ಹಾಗೂ ಮಂಗಳನ ಅಂಗಳಕ್ಕೆ ಮತ್ತೂಮ್ಮೆ ಭೇಟಿ ನೀಡುವ ಮೂಲಕ ಇಸ್ರೋ ಹೊಸ ಮೈಲುಗಲ್ಲು ಸಾಧಿಸಲು ಸಜ್ಜಾಗಿದೆ. ಇದೇ ವಾರದಲ್ಲಿ ಮೆಗಾ ವಿಶ್ವದಾಖಲೆಗೆ ಸಿದ್ಧವಾಗುತ್ತಿರುವಂತೆಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ಸಿಹಿಸುದ್ದಿಯನ್ನು ಬಹಿರಂಗಪಡಿಸಿದೆ.
ಸೌರವ್ಯವಸ್ಥೆಯ ಎರಡನೇ ಗ್ರಹವಾದ ಶುಕ್ರದತ್ತ ಚೊಚ್ಚಲ ಪ್ರಯಾಣ ಕೈಗೊಳ್ಳುವುದು ಇಸ್ರೋದ ಮುಂದಿನ ಗುರಿ.
ಶುಕ್ರ ಗ್ರಹದ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದಿರದ ಕಾರಣ, ಭಾರತದ ಈ ಪ್ರಯತ್ನಕ್ಕೆ ನಾಸಾ ಖಂಡಿತಾ ಕೈಜೋಡಿಸಲಿದೆ ಎನ್ನುವುದು ನಾಸಾದ ಜೆಟ್ ಪ್ರಾಪಲ್ಶನ್ ಲ್ಯಾಬೊರೆಟರಿ ನಿರ್ದೇಶಕ ಮೈಕೆಲ್ ಎಂ ವಾಟಿRನ್ಸ್
ಅಭಿಪ್ರಾಯ. ಈಗಾಗಲೇ ಇಸ್ರೋ ಮತ್ತು ನಾಸಾ ಈ ಕುರಿತ ಮಾತುಕತೆಯನ್ನೂ ಆರಂಭಿಸಿವೆ. ಶುಕ್ರ ಮತ್ತು ಮಂಗಳನ ಬಗ್ಗೆ ಅಧ್ಯಯನ ನಡೆಸುವುದು ಬಹಳ ಮುಖ್ಯ. ಏಕೆಂದರೆ, ಮಾನವನಿಗೆ ಭೂಮಿ ಹೊರತುಪಡಿಸಿದ ವಾಸಯೋಗ್ಯ ಗ್ರಹವೊಂದರ ಅವಶ್ಯಕತೆಯಿದೆ ಎಂದಿದ್ದಾರೆ ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿರಂಗನ್.
ಪ್ರತಿಯೊಂದು ಉಡಾವಣೆ ವೇಳೆಯಲ್ಲೂ ನಾವು ಹೊತ್ತೂಯ್ಯುವ ಸಾಮರ್ಥ್ಯ ಹೆಚ್ಚು ಮಾಡಲು ನೋಡುತ್ತೇವೆಯೇ ಹೊರತು, ದಾಖಲೆಗಾಗಿ ಈ ಪ್ರಮಾಣದ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿಲ್ಲ. ಒಂದೇ ಉಡಾವಣೆ ವೇಳೆ ಹೆಚ್ಚು ಉಪಗ್ರಹ ಕಳುಹಿಸಿ, ಹೆಚ್ಚು ಉಪಯೋಗ ಪಡೆಯುವ ಚಿಂತನೆ ನಮ್ಮದು.
– ಕಿರಣ್‌ಕುಮಾರ್, ಇಸ್ರೋ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.