ಮತಾಂತರಕ್ಕೆ ಐಸಿಸ್ ಕುಮ್ಮಕ್ಕು
Team Udayavani, Aug 11, 2021, 9:00 AM IST
ಬೆಂಗಳೂರು: ಸಾಮಾಜಿಕ ಜಾಲತಾಣ, ಆ್ಯಪ್ ಮೂಲಕ ರಾಜ್ಯದ ವಿವಿಧೆಡೆ ಯುವಕರನ್ನು ಪ್ರಚೋದಿಸಿ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದ ಐಸಿಸ್ ಉಗ್ರರು ಈಗ ಕೆಲವರ ಮತಾಂತರಕ್ಕೂ ಕೈ ಹಾಕುತ್ತಿದ್ದಾರೆ. ಈ ಮೂಲಕ ವಿಧ್ವಂಸಕ ಕೃತ್ಯಗಳನ್ನು ಎಸಗಲು ಪ್ರೇರೇಪಿಸುತ್ತಿದ್ದಾರೆ ಎಂಬ ಸ್ಫೋಟಕ ವಿಚಾರ ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರ್ಥಿಕ ಸಮಸ್ಯೆ ಮತ್ತು ಪ್ರಸಕ್ತ ವಿದ್ಯಮಾನಗಳಿಂದ ಬೇಸತ್ತಿರುವ ಯುವಕರನ್ನೇ ಗುರಿ ಮಾಡಿ, ತಮ್ಮ ತತ್ತ್ವ ಸಿದ್ಧಾಂತಗಳು ಮತ್ತು ಮಹಿಳೆಯರ ಮೂಲಕ ಪ್ರಚೋದಿಸಿ ಮತಾಂತರಿಸುತ್ತಿದ್ದಾರೆ. ಇತ್ತೀಚೆಗೆ ಅಫ್ಘಾನ್‌ನ ಐಎಸ್-ಕೆಪಿ ಉಗ್ರ ಸಂಘಟನೆ ಸೇರಲು ಮುಂದಾಗಿದ್ದ, ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಮಾದೇಶ್ ಪೆರುಮಾಳ್ ಹೀಗೆ ಮತಾಂತರಗೊಂಡಿದ್ದಾನೆ ಎಂದು ಮೂಲಗಳು ಖಚಿತಪಡಿಸಿವೆ.
ಇದಕ್ಕೆ ಮೊದಲು ಕೊಡಗು ಮೂಲದ ಮಹಿಳೆಯೊಬ್ಬರು ಮತಾಂ ತರಗೊಂಡು ಮಂಗಳೂರಿನಲ್ಲಿ ವಾಸವಾಗಿದ್ದು, ಈಕೆಯ ಪ್ರೇರಣೆ ಯಿಂದಲೇ ಮಾದೇಶ್ ಮತಾಂತರಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾದೇಶ್ ಯಾರು?
ಮಾದೇಶ್ ಪೆರುಮಳ್ ಪಿಯುಸಿ ಅನುತ್ತೀರ್ಣಗೊಂಡು ಮನೆಯಲ್ಲೇ ಇರುತ್ತಿದ್ದ. ಕೆಲವು ವರ್ಷಗಳ ಹಿಂದೆ ಆತನ ತಾಯಿ ಪತಿ ಮತ್ತು ಮಗ ಮಾದೇಶ್‌ನನ್ನು ಬಿಟ್ಟು ವಿದೇಶಕ್ಕೆ ಹೋಗಿದ್ದರು. ಈ ಮಧ್ಯೆ ಆತನ ತಂದೆ ಬೇರೊಂದು ಮತದ ಮಹಿಳೆಯನ್ನು ಎರಡನೇ ಮದುವೆಯಾಗಿದ್ದರು. ಮಲತಾಯಿ ಮತ್ತು ತಂದೆ ಮಾದೇಶ್ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಈ ವಿಚಾರವಾಗಿ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಇದರಿಂದ ಮಾನಸಿಕವಾಗಿ ನೊಂದಿದ್ದ ಮಾದೇಶ್ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಯಾವಾಗಲೂ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದ. ಈ ಮಧ್ಯೆ ಐಸಿಸ್ ಸದಸ್ಯರ ಕೆಲವು ಸಾಮಾಜಿಕ ಜಾಲತಾಣ ಖಾತೆಗಳಿಗೆ ಕುತೂಹಲಕ್ಕಾಗಿ ಫ್ರೆಂಡ್ ರಿಕ್ವೆಸ್ಟ್ ಮಾಡಿ ಸೇರ್ಪಡೆಯಾಗಿದ್ದ. ಆ ಕಡೆಯಿಂದ ಪ್ರತಿಕ್ರಿಯೆ ಬಂದಿದ್ದು, ಅವರೊಂದಿಗೆ ನಿರಂತರವಾಗಿ ಚಾಟ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮಹಿಳೆಯಿಂದ ಮತಾಂತರ
ಮಂಗಳೂರಿನಲ್ಲಿ ವಾಸವಿದ್ದ ಕೊಡಗು ಮೂಲದ ಮಹಿಳೆಯ ಪ್ರೇರಣೆಯಿಂದಲೇ ಮಾದೇಶ್ ಪೆರುಮಾಳ್ ಮತಾಂತರಗೊಂಡಿದ್ದಾನೆ ಎನ್ನಲಾಗಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು ಅಮರ್ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಆಕೆಯ ಸಂಬಂಧಿ ಮಹಿಳೆಯೊಬ್ಬರನ್ನು ವಿಚಾರಣೆಗೊಳಪಡಿಸಿದ್ದರು. ಕ್ರೋನಿಕಲ್ ಫೌಂಡೇಶನ್ ಎಂಬ ಇನ್‌ಸ್ಟ್ರಾಗ್ರಾಂ ಪೇಜ್‌ನಲ್ಲಿ ಐಸಿಸ್ ಪರವಾಗಿ ಕೆಲಸ ಮಾಡುತ್ತಿದ್ದ ಮಹಿಳೆ, ಅಮರ್ ಸೂಚನೆ ಮೇರೆಗೆ ರಾಜ್ಯದಲ್ಲಿ ಯುವಕರ ನೇಮಕ ಪ್ರಕ್ರಿಯೆಯಲ್ಲಿ ತೊಡಗಿದ್ದಳು ಎನ್ನಲಾಗಿದೆ.
ನಾಲ್ಕೈದು ಹೆಸರು ಬಳಕೆ :
ಯುವಕ-ಯುವತಿಯರನ್ನು ಸೆಳೆಯಲು ಆ ಮಹಿಳೆ ಟೆಲಿಗ್ರಾಂ, ಇನ್‌ಸ್ಟಾಗ್ರಾಂಗಳಲ್ಲಿ ನಾಲ್ಕೈದು ಹೆಸರುಗಳಲ್ಲಿ ಖಾತೆ ತೆರೆದಿದ್ದಳು. ಈ ಮೂಲಕ ತನ್ನನ್ನು ಸಂಪರ್ಕಿಸುತ್ತಿದ್ದವರಿಗೆ ಜೆಹಾದಿ ಬಗ್ಗೆ ಪ್ರಚೋದಿಸುತ್ತಿದ್ದಳು. ಹೀಗೆಯೇ ಇನ್‌ಸ್ಟಾಗ್ರಾಂ ಖಾತೆ ಮೂಲಕ ಮಾದೇಶ್‌ನನ್ನು ಸಂಪರ್ಕಿಸಿ ಪ್ರೇರೇಪಿಸಿದ್ದಾಳೆ. ಇದರಿಂದ ಪ್ರೇರಣೆಗೊಂಡ ಮಾದೇಶ್, ಅಬ್ದುಲ… ಆಗಿ ಮತಾಂತರಗೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಐಸಿಸ್ ಆನ್‌ಲೈನ್ ನಿಯತಕಾಲಿಕ :
ಕೆಲವು ದಿನಗಳ ಹಿಂದೆ ಎನ್‌ಐಎ ಅಧಿಕಾರಿಗಳಿಂದ ಬಂಧಿತನಾದ ಭಟ್ಕಳ ಮೂಲದ ಝುಫ್ರಿ ಜವ್ಹಾರ್ ದಾಮುದಿ “ವಾಯ್ಸ ಆಫ್ ಹಿಂದ್’ ಎಂಬ ಆನ್‌ಲೈನ್ ನಿಯಕಾಲಿಕವನ್ನು ತೆರೆದಿದ್ದು, ಅದರಲ್ಲಿ ಐಸಿಸ್ ಪರ ಪ್ರಚಾರ, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ಖರೀದಿ, ನೇಮಕಾತಿ ಬಗ್ಗೆ ಮಾಹಿತಿ ನೀಡುತ್ತಿದ್ದ. ಚಂದಾದಾರರಿಗೆ ಮಾತ್ರ ಈ ನಿಯತಕಾಲಿಕ ತೆರೆಯಲು ಅವಕಾಶವಿತ್ತು. ಉಗ್ರ ಸಂಘಟನೆ ಆ್ಯಪ್‌ಗಳ ಅಭಿವೃದ್ಧಿಯಲ್ಲೂ ಈತನ ಪಾತ್ರವಿದೆ ಎನ್ನಲಾಗಿದೆ.
ವಿಧ್ವಂಸಕ ಕೃತ್ಯಕ್ಕೆ ಸಿದ್ಧತೆ :
ಭಟ್ಕಳದಲ್ಲಿ “ಅಬು ಹಜಿರ್ ಅಲ್ ಬದ್ರಿ’ ಎಂಬ ಹೆಸರಿನ ಪ್ರತ್ಯೇಕ ಸೈಬರ್ ಘಟಕ ಸ್ಥಾಪನೆ ಮಾಡಿಕೊಂಡಿದ್ದ ಝುಫ್ರಿ, ಆಯ್ದ ಪೊಲೀಸ್ ಸಿಬಂದಿ, ಪತ್ರಕರ್ತರು, ದೇವಸ್ಥಾನಗಳು, ಸರಕಾರಿ ಆಸ್ತಿಪಾಸ್ತಿ ಮೇಲೆ ಹಾನಿಯುಂಟು ಮಾಡಲು ತನ್ನ ಘಟಕವನ್ನು ಬಳಸಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.