Hubli: ಮುಖ್ಯಮಂತ್ರಿ ನೀತಿ ಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗುತ್ತಿರುವುದು ನಾಚಿಗೇಡಿನ ಸಂಗತಿ
ಓರ್ವ ಅಪರಾಧಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ತನಿಖೆಗೆ ಹೋದರೆ ನ್ಯಾಯಯುತ ತನಿಖೆ ನಡೆಯಲು ಹೇಗೆ ಸಾಧ್ಯ?
Team Udayavani, Nov 6, 2024, 2:32 PM IST
ಹುಬ್ಬಳ್ಳಿ: ವಕ್ಫ್ ಬೋರ್ಡ್ ಹೆಸರಿನಲ್ಲಿ ಸಚಿವ ಜಮೀರ್ ಅಹ್ಮದ್ ರೈತರು ಮತ್ತು ಜನಸಾಮಾನ್ಯರ ಆಸ್ತಿ ಕಬಳಿಸುವ ಮೂಲಕ ದೇಶದ್ರೋಹಿ ಕೆಲಸ ಮಾಡುತ್ತಿದ್ದು, ಅವರನ್ನು ಗಲ್ಲಿಗೇರಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ನ.6ರ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್ ರಾಜ್ಯಾದ್ಯಂತ ವಕ್ಫ್ ಅದಾಲತ್ ನಡೆಸುತ್ತಿದ್ದು, ಇದು ಅತ್ಯಂತ ಗಂಭೀರವಾದ ವಿಷಯ. ಇವರಿಗೆ ಅಧಿಕಾರದ ಮದ ಏರಿದೆ. ತನ್ನ ಚಾಮರಾಜಪೇಟೆ ಕ್ಷೇತ್ರದಲ್ಲಿ 25 ಸಾವಿರಕ್ಕೂ ಅಧಿಕ ದೇಶದ್ರೋಹಿ ಬಾಂಗ್ಲಾ ಮುಸ್ಲಿಮರನ್ನು ಸಲಹುತ್ತಿದ್ದಾರೆ. ಈತನಿಂದಲೇ ರಾಜ್ಯದಲ್ಲಿ ಧಂಗೆ, ಗಲಭೆ ನಡೆಯುತ್ತಿವೆ. ಈ ಕಾರಣ ಈತನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.
ಇಡೀ ದೇಶದಲ್ಲಿ ರೈತರ ಭೂಮಿಗಳು, ಮನೆ, ಮಠ, ಸರ್ಕಾರಿ ಆಸ್ಪತ್ರೆ, ಕಚೇರಿ, ರಸ್ತೆಗಳು ವಕ್ಫ್‌ಗೆ ಹೋಗುತ್ತಿವೆ. ಇದು ದೇಶಾದ್ಯಂತ ವೈರಸ್ ರೀತಿ ಹರಡುತ್ತಿದೆ. ಗೂಳಿಯಂತೆ ನುಗ್ಗುತ್ತಿರುವುದು ನೋಡಿದರೆ ದೇಶಕ್ಕೆ ಗಂಡಾಂತರ ಸೃಷ್ಟಿಯಾಗಿದೆ. ದೇಶವನ್ನು ಇಸ್ಲಾಂ ದೇಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿನ ಕೆಲ ಮುಸ್ಲಿಂ ಜಿಲ್ಲಾಧಿಕಾರಿ, ತಹಶಿಲ್ದಾರ, ನೋಂದಣಾಧಿಕಾರಿ, ಪಿಡಿಒಗಳು ತಾವು ಸಲ್ಲಿಸುತ್ತಿರುವ ಪ್ರದೇಶಗಳಲ್ಲಿ ವಕ್ಫ್ ಬೋರ್ಡ್ ಹೆಸರಲ್ಲಿ ಆಸ್ತಿ ಕಬಳಿಸುವ ಹುನ್ನಾರ ನಡೆದಿದ್ದು, ಈ ಕುರಿತು ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 32 ಸಾವಿರಕ್ಕೂ ಅಧಿಕ ಮಠ-ಮಂದಿರಗಳಿವೆ. ದೇಶವೇ ಇಂದು ಅಸುರಕ್ಷತೆಯ ಸಂಕಷ್ಟದಲ್ಲಿದ್ದು, ಎಲ್ಲಾ ಮಠಾಧೀಶರು ಪ್ರವಚನಕ್ಕೆ ಮಾತ್ರ ಸೀಮಿತರಾಗದೆ ದೇಶ ಮತ್ತು ಧರ್ಮ ರಕ್ಷಣೆಗಾಗಿ ಬೀದಿಗಿಳಿದು ಹೋರಾಟ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ನಿರ್ಧಾರಕ್ಕೆ ನಾವು ಸ್ವಾಗತಿಸುತ್ತೇವೆ. ವಿಜಯಪುರದ ಹೊನವಾಡದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಶ್ರೀರಾಮ ಸೇನೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.
ಮುಖ್ಯಮಂತ್ರಿ ನೀತಿ ಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗುತ್ತಿರುವುದು ನಾಚಿಗೇಡಿನ ಸಂಗತಿ. ಓರ್ವ ಅಪರಾಧಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ತನಿಖೆಗೆ ಹೋದರೆ ನ್ಯಾಯಯುತ ತನಿಖೆ ನಡೆಯಲು ಹೇಗೆ ಸಾಧ್ಯ? ವಿಚಾರಣೆಗೆ ಹೋಗುವ ಮುನ್ನ ರಾಜೀನಾಮೆ ಕೊಟ್ಟು ಶ್ರೀಸಾಮಾನ್ಯರಂತೆ ಹೋಗುವ ಮೂಲಕ ತಮ್ಮ ಘನತೆ ಉಳಿಸಿಕೊಳ್ಳಬೇಕಿತ್ತು ಎಂದು ಕಿಚಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R Ashok ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿರುವುದು ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನ
MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ
Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್
Hubballi: ಮುಖ್ಯಮಂತ್ರಿ ಸಿದ್ದರಾಮಯ್ಯ ಪೇ ಡಬಲ್ ಸಿಎಂ ಆಗಿದ್ದಾರೆ… :ಬೊಮ್ಮಾಯಿ
MUDA; ಕಾಂಗ್ರೆಸ್ ಗೊಂದು, ಬಿಜೆಪಿಗೊಂದು ಕಾನೂನು ಇದೆಯೇ?: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
R Ashok ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿರುವುದು ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನ
Kollegala: ಕಲುಷಿತ ನೀರು ಸೇವಿಸಿ ನಾಲ್ವರು ಆಸ್ಪತ್ರೆಗೆ ದಾಖಲು
BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್ ಸುರೇಶ್; ಬಿಗ್‌ಬಾಸ್ ಆಟದಲ್ಲಿ ರಾದ್ಧಾಂತ
Katpadi: ಅಂಚಿಗೆ ಬ್ಯಾರಿಕೇಡ್ ಇರಿಸಿ ರಿಬ್ಬನ್ ಅಳವಡಿಕೆ
MUDA; ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.