ಆರ್ ಎಸ್ಎಸ್ ನವರು ಹಿಟ್ಲರನ್ನು ಹಾಡಿ ಹೊಗಳಿದ್ದು ಇತಿಹಾಸದಲ್ಲಿದೆ : ಸಿದ್ದರಾಮಯ್ಯ
ನಾವು ಯಾರು ಕೂಡ ಕಾನೂನನ್ನು ಮೀರಿದವರಲ್ಲ...ಆದರೆ...
Team Udayavani, Jul 21, 2022, 2:33 PM IST
ಬೆಂಗಳೂರು: ಜನರಿಗೆ ತಪ್ಪು ಮಾಹಿತಿ ಕೊಡುವ ಕೆಲಸ ಬಿಜೆಪಿ ಮಾಡುತ್ತಿದೆ. ನಾವು ಯಾರು ಕೂಡ ಕಾನೂನನ್ನು ಮೀರಿದವರಲ್ಲ. ಆದರೆ ತನಿಖಾ ಸಂಸ್ಥೆಗಳ ಮೋದಿ ಅವರು ಬಂದ ಮೇಲೆ ಕಾನೂನಿನ ಪ್ರಕಾರ ನಡೆಯುತ್ತಿಲ್ಲ. ಇ.ಡಿ., ಐಟಿ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ ಫ್ರೀಂಡಂ ಪಾರ್ಕ್‌ನಿಂದ ರಾಜಭವನದವರೆಗೆ ಗುರುವಾರ ನಡೆದ ಪ್ರತಿಭಟನಾ ಮೆರವಣಿಗೆಯ ಕಾರ್ಯಕ್ರಮದ ಅಂಗವಾಗಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆದ ಇಡಿ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ. ಬಿಜೆಪಿಗೆ ಪರ್ಯಾಯ ಕಾಂಗ್ರೆಸ್, ಹಾಗಾಗಿ ಕಾಂಗ್ರೆಸ್ ಅನ್ನ ಮುಗಿಸಬೇಕು ಎಂದು ಹೊರಟಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಎಂದು ಅನೇಕ ಬಾರಿ ಮೋದಿ,ಅಮಿತ್ ಶಾ ಹೇಳಿದ್ದಾರೆ. ಕಾಂಗ್ರೆಸ್ ಬಗ್ಗೆ ಬಿಜೆಪಿಗೆ ಭಯವಿದೆ.ಅನೇಕ ಜನ ಹೇಳಿದ್ದಾರೆ. ಸೋನಿಯಾ, ರಾಹುಲ್ ಗಾಂಧಿ ಅವರ ಮೇಲೆ ಕೇಸ್ ಇಲ್ಲ. ಎಫ್ ಐ ಆರ್ ಇಲ್ಲದೆ, ಕೋರ್ಟ್ ಸಮನ್ಸ್ ವಾರೆಂಟ್, ವಿಚಾರಣೆ ಮಾಡಲು ಆಗುವುದಿಲ್ಲ.ಸುಮ್ಮನೆ ಮಾಡಲು ಆಗುವುದಿಲ್ಲ ಎಂದು ಕಾನೂನು ತಿಳಿದಿವರಿಗೆ ಗೊತ್ತಿದೆ.ನಾನು ವಕೀಲರಲ್ಲಿ ಮನವಿ ಮಾಡುತ್ತೇನೆ. ಇಂತಹ ಸುಳ್ಳು ಕೇಸ್ ಗಳನ್ನು ಬಯಲು ಮಾಡಬೇಕು ಎಂದು ಮನವಿ ಮಾಡುತ್ತೇನೆ. ಈ ದೇಶಕ್ಕೆ ಚರ್ಚೆ ಮಾಡಿ, ಸಂವಿಧಾನ ಕೊಟ್ಟವರು ಕಾಂಗ್ರೆಸ್ ನವರು ಎಂದರು.
ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇದೆಯಾ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ, ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟುಕೊಂಡವರು, ಹಾಗಾಗಿ ಆರ್ ಎಸ್ ಎಸ್ ನವರು ಹಿಟ್ಲರ್ ಅನ್ನು ಹಾಡಿ ಹೊಗಳಿದ್ದು ಇತಿಹಾಸದಲ್ಲಿದೆ.ಸ್ವಾತಂತ್ರ್ಯಕ್ಕಾಗಿ ಇವರು ಹೋರಾಟ ಮಾಡಿಲ್ಲ. ಒಂದು ದಿನವಾದರೂ ಸಾರ್ವಕರ್, ಹೆಡ್ಗೆವಾರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರಾ.ಸಾರ್ವಕರ್ ದೇಶ ಪ್ರೇಮಿ ಎಂದು ಹೇಳುತ್ತಾರೆ. ಆದರೆ ಸಾರ್ವಕರ್ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ, ನನ್ನನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದರು ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿ ತೋರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.