land ಖರೀದಿಸಿದ್ದು ನಿಜ, ತಪ್ಪೇನು? ಪ್ರಿಯಾಂಕ್ ಖರ್ಗೆ
ನಾವು ಕೌಶಲಾಭಿವೃದ್ಧಿ ಕೇಂದ್ರ ಮಾಡಬಾರದೇ: ಪ್ರಿಯಾಂಕ್ ಪ್ರಶ್ನೆ
Team Udayavani, Aug 28, 2024, 6:38 AM IST
ಬೆಂಗಳೂರು: ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ ನಮ್ಮ ಕುಟುಂಬದವರು ಟ್ರಸ್ಟಿ ಗಳಾ ಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ನಾಗರಿಕ ಬಳಕೆ (ಸಿಎ) ನಿವೇಶನ ಖರೀದಿ ಮಾಡಿರು ವುದು ನಿಜ. ಇದರಲ್ಲಿ ತಪ್ಪೇನಿದೆ? ನಾವು ಕಾನೂನು ಬದ್ಧ ವಾಗಿಯೇ ಖರೀದಿಸಿದ್ದೇವೆ. ನಾವು ಕೌಶಲಾಭಿವೃದ್ಧಿ ಕೇಂದ್ರ ಮಾಡಬಾರದೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ವಿಕಾಸಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ಸಿದ್ಧಾರ್ಥ ವಿಹಾರ ಟ್ರಸ್ಟ್ ಎರಡು ದಶಕದಿಂದ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿದೆ. ನಾವು ಲಾಭದ ವ್ಯವಹಾರ ಮಾಡಲು ಟ್ರಸ್ಟ್ ನಡೆಸುತ್ತಿಲ್ಲ. ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ 193 ಸಿಎ ನಿವೇಶನಗಳಿಗೆ ಅರ್ಜಿ ಆಹ್ವಾನಿಸಿದಾಗ ಕೇವಲ 43 ಸಂಸ್ಥೆಗಳು ಅರ್ಜಿ ಹಾಕಿದ್ದವು. ಅದರಲ್ಲಿ ನಮ್ಮದೂ ಒಂದು. ಸಿಎ ನಿವೇಶನವನ್ನು ಹಣ ಕೊಟ್ಟು ಖರೀದಿ ಮಾಡಿದ್ದೇವೆ. ಯಾವುದೇ ಸಬ್ಸಿಡಿ ಕೇಳಿಲ್ಲ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಟ್ರಸ್ಟ್ ನಡೆಸುತ್ತಿರುವ ರಾಹುಲ್ ಖರ್ಗೆ ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದವರು. ವಿಟಿಯು ಎಂಜಿನಿಯರಿಂಗ್‌ನಲ್ಲಿ ಟಾಪರ್. ಐಐಎಸ್‌ಸಿಯಲ್ಲಿ ತರಬೇತಿ ಪಡೆದು ಸೂಪರ್ ಕಂಪ್ಯೂಟರ್ ಶಾಖೆಯಲ್ಲಿ ಕೆಲಸ ಮಾಡಿದವರು. ಕೇಂದ್ರ ಏಜೆನ್ಸಿಗಳಿಂದ ಹಲವು ಪ್ರಶಸ್ತಿಗಳು ಬಂದಿವೆ. ಇದಕ್ಕಿಂತ ಇನ್ನೇನು ಬೇಕು? ನಮ್ಮ ಕುಟುಂಬದವರು ಉದ್ಯಮಿ ಆಗಬಾರದೇ ಎಂದು ಅವರು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.