ಮೀಸಲಾತಿಗೆ ಸಿಎಂ ಸೂಕ್ತ ನಿರ್ಧಾರ : ಶೆಟ್ಟರ್
Team Udayavani, Feb 12, 2021, 10:10 PM IST
ಧಾರವಾಡ :ಮೀಸಲಾತಿ ಹೋರಾಟ ಇಂದು ನಿನ್ನೆಯದಲ್ಲ, ನಿರಂತರವಾಗಿ ನಡೆದುಕೊಂಡು ಬಂದಿವೆ. ಯೋಗ್ಯ ಸಮಯದಲ್ಲಿ ಯೋಗ್ಯ ನಿರ್ಧಾರವನ್ನು ಸಿಎಂ ಮತ್ತು ನಮ್ಮ ಸರಕಾರ ಕೈಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೀಸಲಾತಿ ವಿಚಾರದಲ್ಲಿ ಅವರವರ ಸಮಾಜದವರು ತಮ್ಮ ಬೇಡಿಕೆ ನ್ಯಾಯಯುತ ಎಂದು ಹೇಳಿಕೊಂಡು ಹೋರಾಟ ಮಾಡುತ್ತಿದ್ದಾರೆ. ಅದಕ್ಕೊಂದು ಕಾನೂನು, ಸಂವಿಧಾನದ ಒಂದು ವ್ಯವಸ್ಥೆ ಇದೆ. ಹಿಂದುಳಿದ ವರ್ಗಗಳ ಆಯೋಗವೂ ಇದೆ. ಎಲ್ಲವನ್ನೂ ವಿಚಾರ ಮಾಡಿ ಸಿಎಂ ಯೋಗ್ಯವಾದ ಸಮಯದಲ್ಲಿ ಯೋಗ್ಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ : ಮದ್ಯದಂಗಡಿಗೆ ಹೊಸ ಲೈಸೆನ್ಸ್ ನೀಡುವ ಪ್ರಸ್ತಾವವಿಲ್ಲ: ಅಬಕಾರಿ ಸಚಿವ ಕೆ. ಗೋಪಾಲಯ್ಯ
ಸಿಎಂ ಆಶ್ವಾಸನೆ ಬಳಿಕವೂ ಹೋರಾಟಗಳು ಮುಂದುವರೆದರೆ ಏನು ಮಾಡುತ್ತಿರಾ ? ಎಂಬ ಮಾಧ್ಯಮದವರ ಪ್ರಶ್ನೆಗೆ ಅದನ್ನು ಹೋರಾಟ ಮಾಡುವವರೇ ವಿಚಾರ ಮಾಡಬೇಕು. ಅದರ ಬಗ್ಗೆ ನಾನೇನು ಹೇಳಲಾರೆ ಎಂದರು.