ಜನಸ್ಪಂದನ ಸಮಾವೇಶ ಅಂದರೆ ಕಾಂಗ್ರೆಸ್‌ಗೇ ಕೆ ಭಯ? ಸಚಿವ ಡಾ| ಕೆ. ಸುಧಾಕರ್‌


Team Udayavani, Sep 10, 2022, 7:10 AM IST

ಜನಸ್ಪಂದನ ಸಮಾವೇಶ ಅಂದರೆ ಕಾಂಗ್ರೆಸ್‌ಗೇ ಕೆ ಭಯ? ಸಚಿವ ಡಾ| ಕೆ. ಸುಧಾಕರ್‌

ಬೆಂಗಳೂರು: “ಜನ ಸ್ಪಂದನ ಸಮಾವೇಶ ಅಂದರೆ ಕಾಂಗ್ರೆಸ್‌ಗೆàಕೆ ಭಯ? ರಾಜ್ಯ ದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲಾಗದು’. ಜನಸ್ಪಂದನ ಸಮಾವೇಶದ ಉಸ್ತುವಾರಿಗಳಲ್ಲಿ ಒಬ್ಬರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಕೆ. ಸುಧಾಕರ್‌ “ಉದಯವಾಣಿ’ ಯೊಂದಿಗೆ ಮಾತನಾಡಿ, ಈ ಸಮಾವೇಶ ಮುಂದಿನ ವಿಧಾನ ಸಭೆ ಚುನಾವಣೆಗೆ ಮುನ್ನುಡಿ ಬರೆಯು ವುದರೊಂದಿಗೆ ರಾಜ್ಯ ರಾಜಕೀಯ ವಲಯಕ್ಕೆ ಸಂದೇಶ ರವಾನಿಸಲಿದೆ ಎಂದು ಹೇಳಿದರು.

ಸಮಾವೇಶದ ಮೂಲ ಉದ್ದೇಶ ಏನು?
ಮೂರು ವರ್ಷಗಳ ಜನಸ್ನೇಹಿ ಆಡಳಿತ ನೀಡಿದ ಬಿಜೆಪಿ ಸರಕಾರ, ಸವಾಲುಗಳನ್ನು ಮೀರಿದ ಸಾಧನೆಯನ್ನು ಮಾಡಿ ಮುನ್ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವಿಶ್ವಾಸಾರ್ಹ, ಜವಾಬ್ದಾರಿಯುತ, ಪಾರದರ್ಶಕ ಹಾಗೂ ದಕ್ಷ ಆಡಳಿತಕ್ಕೆ ಒಂದು ವರ್ಷ. ಈ ಮಹತ್ತರ ಸಾಧನೆಯನ್ನು ರಾಜ್ಯದ ಜನತೆಯೊಂದಿಗೆ ಹಂಚಿಕೊಳ್ಳುವುದೇ ಕಾರ್ಯಕ್ರಮದ ಉದ್ದೇಶ.

ನೀವು ಪೂರ್ವಭಾವಿ ಸಭೆಗಳಲ್ಲಿ ಸರಕಾರದ ಸಾಧನೆಗಳ ರಿಪೋರ್ಟ್‌ ಕಾರ್ಡ್‌ ಇಡುತ್ತೇವೆ ಎಂದಿದ್ದಿರಿ?
ಕೇಂದ್ರ ಹಾಗೂ ರಾಜ್ಯ ಸರಕಾರ ಅನೇಕ ಜನಪರ ಯೋಜನೆಗಳ ಮೂಲಕ ಅಭಿವೃದ್ಧಿಯ ಪಥವನ್ನೇ ಬದಲಿಸಿದೆ. ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ, ಕೋವಿಡ್‌ ಮೊದಲ ಅಲೆಯಲ್ಲಿ 391.26 ಕೋಟಿ ರೂ., 2ನೇ ಅಲೆಯಲ್ಲಿ 376.76 ಕೋಟಿ ರೂ. ಹಾಗೂ 3ನೇ ಅಲೆಯ ವೇಳೆ 11.80 ಕೋಟಿ ರೂ. ಮೊತ್ತವನ್ನು ರೋಗಿಗಳ ಚಿಕಿತ್ಸೆಗೆ ಪಾವತಿಸಲಾಗಿದೆ. 3,000 ಕೋಟಿ ರೂ. ವೆಚ್ಚದಲ್ಲಿ 2,275 ಕಿ.ಮೀ ರಾಜ್ಯ ಹೆದ್ದಾರಿ ನಿರ್ಮಾಣ, 5 ಲಕ್ಷಕ್ಕೂ ಹೆಚ್ಚು ಬಸವ ವಸತಿ ಮನೆಗಳಿಗೆ ಮಂಜೂರಾತಿ, 6 ಎಂಜಿನಿಯರಿಂಗ್‌ ಕಾಲೇಜುಗಳನ್ನು ಐಐಟಿ ಮಟ್ಟಕ್ಕೆ ಉನ್ನತೀಕರಿಸಲು ಕ್ರಮ ಸೇರಿದಂತೆ ಅನೇಕ ಜನಹಿತ ಕಾರ್ಯಗಳನ್ನು ಮಾಡಿದೆ.

ಮಂಗಳೂರಿಗೆ ಬಂದಿದ್ದ ಮೋದಿಯವರು ಡಬಲ್‌ ಎಂಜಿನ್‌ ಸರಕಾರ ಎಂದು ಹೇಳಿದ್ದಾರೆ. ರಾಜ್ಯ ಸರಕಾರದ ಸಾಧನೆಗಳೇನು?
ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಇರುವುದರಿಂದ ಜನಕಲ್ಯಾಣದ ಆಶಯದ ಯೋಜನೆಗಳಿಗೆ ವೇಗ ದೊರೆತಿದೆ. ಡಬಲ್‌ ಎಂಜಿನ್‌ನ ವಾಹನದಂತೆಯೇ ಯೋಜನೆಗಳನ್ನೂ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ವಿಪಕ್ಷದವರು ಜನಸ್ಪಂದನ ಅಲ್ಲ ಭ್ರಷ್ಟ ಉತ್ಸವ ಮಾಡಲಿ, ಬೆಂಗಳೂರು ಮುಳುಗಿರುವಾಗ ಇದು ಬೇಕಿತ್ತಾ ಎನ್ನುತ್ತಿದ್ದಾರಲ್ಲ?
ಹಿಂದಿನ ಕಾಂಗ್ರೆಸ್‌ ಸರಕಾರ ತನ್ನ ಅವಧಿಯಲ್ಲಿ ಪ್ರತೀ ದಿನವೂ ಭ್ರಷ್ಟ ಉತ್ಸವವನ್ನು ನಡೆಸಿದೆ. ಕಳೆದ 60ಕ್ಕೂ ಹೆಚ್ಚು ವರ್ಷಗಳಲ್ಲಿ ಅದನ್ನೇ ಮಾಡಿದೆ. ಯಾವಾಗ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದರೋ, ಅಂದಿನಿಂದ ಈ ಉತ್ಸವ ಸಂಪೂರ್ಣ ಅಂತ್ಯ ಕಂಡಿದೆ. ಈಗೇನಿದ್ದರೂ ಅಭಿವೃದ್ಧಿಯ ಉತ್ಸವ ನಡೆಯುತ್ತಿದೆ. ಪ್ರವಾಹ ಸಂಕಷ್ಟದ ವಿಷಯದಲ್ಲಿ ಬಿಜೆಪಿ ಸರಕಾರ ಜನರಿಗೆ ನೆರವಾಗಿದೆ.

ಈ ಸಮಾವೇಶದಿಂದಲೇ ಮುಂದಿನ ಚುನಾವಣೆಯ ಪ್ರಚಾರ ಆರಂಭವೇ?
ಇದು ಚುನಾವಣ ಪ್ರಚಾರ ಕಾರ್ಯಕ್ಕಿಂತಲೂ ಹೆಚ್ಚಾಗಿ ನಮ್ಮ ಸರಕಾರದ ಸಾಧನೆಗಳನ್ನು ಹೇಳಿಕೊಳ್ಳುವ ಅವಕಾಶ. ವಿವಿಧ ಯೋಜನೆಗಳ ಫ‌ಲಾನುಭವಿಗಳು ಸರಕಾರಕ್ಕೆ ಧನ್ಯವಾದ ಸಲ್ಲಿಸಲು ಕಾಯುತ್ತಿದ್ದಾರೆ. ಆಡಳಿತ ಪಕ್ಷವಾಗಿ ರಿಪೋರ್ಟ್‌ ಕಾರ್ಡ್‌ ಜನರ ಮುಂದಿಡುವ ಕರ್ತವ್ಯವನ್ನು ಮಾಡುತ್ತಿದ್ದೇವೆ.

ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಇದರಿಂದ ಲಾಭವಾಗುತ್ತಾ?
ಜನರಿಗೆ, ಪಕ್ಷದ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಇದು ಸಂಭ್ರಮದ ಸಂಗತಿ. ದೊಡ್ಡಬಳ್ಳಾಪುರ ಸೇರಿದಂತೆ ಇಡೀ ಬಯಲು ಸೀಮೆಯಲ್ಲಿ ಬಿಜೆಪಿಯ ಹೊಸ ಅಲೆಯನ್ನು ಸೃಷ್ಟಿಸಿ ಜನಹಿತ ಆಡಳಿತದ ನವ ಪರ್ವ ಸೃಷ್ಟಿಸಲು ಅವಕಾಶ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆಲೆ ಇದೆಯಾ ?
ಬದಲಾವಣೆ ಜಗದ ನಿಯಮ. 2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಈ ಹಿಂದೆ ಇದ್ದ ಸನ್ನಿವೇಶ ಬದಲಾಗಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಅದೇ ರೀತಿ ಆ ಭಾಗದಲ್ಲೂ ಬಿಜೆಪಿ ಜನಪ್ರಿಯತೆ ಬೆಳೆಯುತ್ತಿದೆ. ದುರ್ಬಲವಾಗಿರುವಲ್ಲೆಲ್ಲ ಮತ್ತೆ ಬಳ ಪಡೆದುಕೊಳ್ಳಲಿದೆ.

 ಜನಸ್ಪಂದನ ಸಮಾವೇಶ ನಿಮ್ಮ ಶಕ್ತಿ ಪ್ರದರ್ಶನವೇ?
ಖಂಡಿತ ಅಲ್ಲ. ನನ್ನ ಕರ್ತವ್ಯ ನಿಷ್ಠೆಯ ಪ್ರದರ್ಶನ ಎನ್ನಬಹುದು. ಸಮಾವೇಶದ ಹೊಣೆಯನ್ನು ಸ್ವೀಕರಿಸಿ ಕೆಲಸ ಮಾಡುತ್ತಿದ್ದು, ಪಕ್ಷದ ವರಿಷ್ಠರಿಗೆ ಆಭಾರಿ. ಚಿಕ್ಕಬಳ್ಳಾಪುರ ಹಾಗೂ ಕೋಲಾರ ಮೊದಲಾದ ಭಾಗಗಳಲ್ಲಿ ಪಕ್ಷದ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪಕ್ಷ ಬಲಪಡಿಸುವ ಕೆಲಸ ಮಾಡುತ್ತಿದ್ದೇನೆ.

-ಎಸ್‌.ಲಕ್ಷ್ಮೀ ನಾರಾಯಣ

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.