ಸೋಲಿನ ಭೀತಿಯಿರುವ ಶಾಸಕರಿಗೆ ಜನವರಿ ಗಡುವು
Team Udayavani, Oct 31, 2017, 7:05 AM IST
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಹುಮ್ಮಸ್ಸಿದ್ದರೂ 30 ರಿಂದ 35 ಹಾಲಿ ಶಾಸಕರು
ಸೋಲುವ ಭೀತಿ ಎದುರಿಸುತ್ತಿರುವುದು ಪಕ್ಷದ ನಾಯಕರ ಚಿಂತೆಗೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ದೆಹಲಿ ಮೂಲದ ಸಂಸ್ಥೆ ಮೂಲಕ 224 ಕ್ಷೇತ್ರಗಳಲ್ಲಿ ಆಂತರಿಕ ಮಾಹಿತಿ ಸಂಗ್ರಹಿಸಿದ್ದು, ಆಡಳಿತ ಪಕ್ಷದ 30 ರಿಂದ 35 ಹಾಲಿ ಶಾಸಕರು 2018 ರ ಚುನಾವಣೆಯಲ್ಲಿ ಸೋಲುವ ಸಾಧ್ಯತೆ ಇದೆ ಎಂಬ ವರದಿ ನೀಡಿದೆ ಎಂದು ತಿಳಿದು ಬಂದಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗಿಂತ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಸಲಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂಚೂಣಿಯಲ್ಲಿದೆ ಎಂಬ ವರದಿ ನೀಡಿದೆ ಎನ್ನಲಾಗಿದೆ.
ಸೋಲುವ ಭೀತಿ ಇರುವ ಶಾಸಕರಿಗೆ ಎಚ್ಚರಿಕೆ: ಆಡಳಿತ ಪಕ್ಷಕ್ಕೆ ಹಾಲಿ ಶಾಸಕರು ಸೋಲುತ್ತಾರೆ ಎಂಬ ಮಾಹಿತಿ ಆತಂಕ ಉಂಟು ಮಾಡಿದ್ದು, ಚುನಾವಣೆಯಲ್ಲಿ ಸೋಲುತ್ತಾರೆ ಎಂಬ ಮಾಹಿತಿ ಇರುವ ಕ್ಷೇತ್ರಗಳ ಶಾಸಕರನ್ನು ಪರಮೇಶ್ವರ್ ಪ್ರತ್ಯೇಕವಾಗಿ ಮಾತನಾಡಿಸಿ, ಅವರ ಕ್ಷೇತ್ರದ ವಸ್ತು ಸ್ಥಿತಿ ಮನವರಿಕೆ ಮಾಡಿ, ಜ.15ರೊಳಗೆ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿ, ಈಗಿರುವ ಸೋಲುವ ಭೀತಿಯ ವಾತಾವರಣವನ್ನು ಬದಲಾಯಿಸುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಪಕ್ಷ ಜಾರಿಗೊಳಿಸಿರುವ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನರ ಜೊತೆಗೆ ಉತ್ತಮ ಬಾಂಧವ್ಯ ಬೆಸೆಯುವುದು. ನವೆಂಬರ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆಸುತ್ತಿರುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವಂತೆ ಶಾಸಕರಿಗೆ ಪರಮೇಶ್ವರ್ ಸೂಚಿಸಿದ್ದಾರೆ ಎನ್ನಲಾಗಿದೆ.
ಸೋಲುವ ಭೀತಿ ಎದುರಿಸುತ್ತಿರುವ ಶಾಸಕರು ಜ.15ರೊಳಗೆ ಕ್ಷೇತ್ರದಲ್ಲಿ ಗೆಲ್ಲುವ ವಾತಾವರಣ ನಿರ್ಮಾಣ ಮಾಡದೇ ಹೋದರೆ, ಪರ್ಯಾಯ ಅಭ್ಯರ್ಥಿಗಳ ಆಯ್ಕೆಯ ಬಗ್ಗೆಯೂ ಶಾಸಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಹಾಲಿ ಶಾಸಕರು ಜ.15ರೊಳಗೆ ತಮ್ಮ ಕ್ಷೇತ್ರಗಳಲ್ಲಿ ಗೆಲುವಿನ ಹತ್ತಿರ ಬರುವಂತಹ ವಾತಾವರಣ ನಿರ್ಮಾಣ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಹಾಗೂ ಜೆಡಿಎಸ್‌ನಿಂದ ಪಕ್ಷಕ್ಕೆ ಬರುವವರ ಪಟ್ಟಿಯೂ ಅಧ್ಯಕ್ಷರ ಬಳಿ ಇದ್ದು, ಬೇರೆ ಪಕ್ಷಗಳಿಂದ ಆಗಮಿಸುವ ನಾಯಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಲಿ ಶಾಸಕರ ಗೆಲ್ಲುವ ಸಾಧ್ಯತೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಸ್ಥಿತಿ ಗತಿ ಅರಿತು ಫೆಬ್ರವರಿ ನಂತರ ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಗೆಲ್ಲುವ ಗುರಿ: 2018 ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಸರಳ ಬಹುಮತಕಷ್ಟೇ ಸೀಮಿತವಾಗದೇ 150 ಕ್ಷೇತ್ರಗಳನ್ನು ಗಂಭೀರವಾಗಿ ತೆಗೆದುಕೊಂಡು ಗೆಲ್ಲುವ ಗುರಿ ಇಟ್ಟುಕೊಂಡಿದೆ. ಅದರಂತೆ ನವೆಂಬರ್ ಮೊದಲ ವಾರದಲ್ಲಿ 100 ಕ್ಷೇತ್ರಗಳು ಹಾಗೂ ಡಿಸೆಂಬರ್ 50 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿಕೊಂಡು ಅಭ್ಯರ್ಥಿಗಳಿಗೆ ಚುನಾವಣಾ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
150 ಕ್ಷೇತ್ರಗಳಲ್ಲಿ ಪಕ್ಷದ ನಾಯಕರ ನಡುವಿನ ಮುಸುಕಿನ ಗುದ್ದಾಟ, ಬೇರೆ ಪಕ್ಷಗಳಿಂದ ಆಗಮಿಸುವ ನಾಯಕರನ್ನು ಸೇರಿಸಿಕೊಳ್ಳುವುದು. ಜಾತಿ ಗೊಂದಲ ನಿವಾರಣೆ ಮಾಡಿ, ಗೆಲುವಿಗೆ ಬೇಕಾದ ಅಗತ್ಯ ಸಹಾಯ ಸೌಕರ್ಯವನ್ನು ಪಕ್ಷದ ವತಿಯಿಂದ ನೀಡಿ ಜ.20ರೊಳಗೆ 150 ಗೆಲ್ಲುವ ಅಭ್ಯರ್ಥಿಗಳನ್ನು μಕ್ಸ್ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು
ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇನ್ನು ಮಾಲಿಕಯ್ಯ ಗುತ್ತೇದಾರ, ವಸಂತ ಬಂಗೇರ, ಎ.ಬಿ.ಮಾಲಕರೆಡ್ಡಿ ಮತ್ತಿತರರು ಪಕ್ಷ ತೊರೆಯುತ್ತಾರೆ ಎಂಬ ಬಗ್ಗೆಯೂ ಪರಮೇಶ್ವರ್ ಮಾಹಿತಿ ಸಂಗ್ರಹಿಸಿದ್ದು, ಅಂತಹ ಶಾಸಕರು ಮತ್ತು ನಾಯಕರ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ. ಕೆಲ ಹಿರಿಯ ನಾಯಕರಿಗೂ ಟಿಕೆಟ್ ಕೊಡುವ ಆಲೋಚನೆಯನ್ನು ಪರಮೇಶ್ವರ್ ಮಾಡಿದ್ದಾರೆ ಎನ್ನಲಾಗಿದೆ.
ವೆಬ್‌ಸೈಟ್‌ಗೆ ಚಾಲನೆ
ಬೆಂಗಳೂರು: “ನವಕರ್ನಾಟಕ್ಕಾಗಿ ಮತ್ತೂಮ್ಮೆ ಸಿದ್ದರಾಮಯ್ಯ’ ಎಂಬ ಅಭಿಯಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಆರಂಭಿಸಿದ್ದಾರೆ. ಈ ಸಂಬಂಧ ಪ್ರತ್ಯೇಕ ವೆಬ್‌ಸೈಟ್: ಡಿಡಿಡಿ.
ಞಚಠಿಠಿಟಞಞಛಿsಜಿಛಛಚrಚಞಜಿಚಜ.cಟಞ ಆರಂಭಿಸಿರುವ ಅಭಿಮಾನಿಗಳು, ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆಗಳು, ಯೋಜನೆಗಳು, ದೂರದೃಷ್ಟಿ ಮತ್ತಿತರ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಈ ನೂತನ ವೆಬ್‌ಸೈಟ್‌ಗೆ ಸೋಮವಾರ ನವಕರ್ನಾಟಕಕ್ಕಾಗಿ ಮತ್ತೂಮ್ಮೆ ಸಿದ್ದರಾಮಯ್ಯ ಪ್ರತಿಷ್ಠಾನ ಚಾಲನೆ
ನೀಡಿತು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಠಾನದ ಸಂಯೋಜಕ ಮನೋಜ್, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಗ್ರೂಪ್‌ವೊಂದನ್ನು ಸೃಷ್ಟಿಸಲಾಗಿದೆ. ಅದರಲ್ಲಿ 95 ಸಾವಿರಕ್ಕೂ ಅಧಿಕ ಬೆಂಬಲಿಗರಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ವೆಬ್‌ಸೈಟ್ ಆರಂಭಿಸಲಾಗುತ್ತಿದೆ ಎಂದರು. ಮೊ: 88826 54488ಗೆ ಮಿಸ್‌ಕಾಲ್ ನೀಡುವ ಮೂಲಕ ಯಾರು ಬೇಕಾದರೂ ಈ ಅಭಿಯಾನದಲ್ಲಿ ಭಾಗವಹಿಸಬಹುದು ಎಂದರು. ಸಂಚಾಲಕರಾದ ಮದನ್‌ಗೌಡ, ಹೇಮಂತ್ ಕುರುಬರಹಳ್ಳಿ, ಮೋಸೆಸ್ ಜಾನ್, ಅಭಿಷೇಕ್ ಶಿವಣ್ಣ, ನವೀನ್,
ನಾಗರಾಜ್‌ಮೂರ್ತಿ ಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
“ಮೀನು ಜೊತೆ ಕೋಳಿ ಮಾಂಸ ಕೂಡ ತಿಂದಿದ್ದೆ’
ಚಿಕ್ಕಬಳ್ಳಾಪುರ: “ಧರ್ಮಸ್ಥಳಕ್ಕೆ ನಾನು ಬರೀ ಮೀನು ತಿಂದು ಹೋಗಿರಲಿಲ್ಲ. ಕೋಳಿ ಮಾಂಸ ಕೂಡ ತಿಂದು ಹೋಗಿ¨ªೆ. ಆದರೆ, ನಾನು ಗರ್ಭಗುಡಿಯೊಳಗೆ ಹೋಗದೆ ಹೊರಗನಿಂದಲೇ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಬಂದಿದ್ದೇನೆ. ದೇವರ ಬಗ್ಗೆ ಸ್ಪಷ್ಟತೆ ಇಲ್ಲದವರು ಇಂದು ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ಬೆಂಕಿ ಇಡುವ ಕೆಲಸ ಮಾಡುತ್ತಿ¨ªಾರೆ’ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಮಂಚನಬಲೆಯಲ್ಲಿ ಸೋಮವಾರ ಮಾತನಾಡಿ, “ಧರ್ಮಸ್ಥಳಕ್ಕೆ ಹೋಗಿದ್ದ ವೇಳೆ ಧರ್ಮಾಧಿಕಾರಿಗಳು ದೇವರ ದರ್ಶನ ಮಾಡಿಕೊಂಡು ಹೋಗಿ ಎಂದರು. ಆದರೆ, ನಾನು ಗರ್ಭಗುಡಿಯೊಳಗೆ ಹೋಗದೆ ಹೊರಗಿನಿಂದಲೇ ದೇವರಿಗೆ ನಮಸ್ಕಾರ ಮಾಡಿಕೊಂಡು ಹೊರಟೆ. ಅಂದ ಮಾತ್ರಕ್ಕೆ ದೇಗುಲ ಹೇಗೆ ಅಪವಿತ್ರವಾಗುತ್ತದೆ?’ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.