ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!
ಮಹಾತ್ಮನ ನೆನಪಿಗೆ ಸಂಗ್ರಹದ ಉಡುಗೊರೆ , ಪ್ರತಿ ಜಯಂತಿ, ರಾಷ್ಟ್ರೀಯ ಹಬ್ಬಗಳಂದು ಶಾಲಾ-ಕಾಲೇಜಿಗೆ ತೆರಳಿ ವಿದ್ಯಾರ್ಥಿ, ಯುವಜನರಿಗೆ ಪ್ರದರ್ಶನ
Team Udayavani, Oct 2, 2024, 5:40 PM IST
ಗಂಗಾವತಿ: ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಹವ್ಯಾಸಗಳನ್ನು ಬೆಳೆಸಿಕೊಂಡಿರುತ್ತಾರೆ. ಕಾಲ ಬದಲಾದಂತೆ ಜನರೂ ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಅವರವರ ಹವ್ಯಾಸಗಳೂ ಬದಲಾಗುತ್ತಿವೆ.
ಇಂದಿನ ಯುವ ಪೀಳಿಗೆ ಸಿನೆಮಾ, ಕ್ರಿಕೆಟ್ ತಾರೆಯರ ಭಾವಚಿತ್ರ ಸಂಗ್ರಹಿಸುವ ಹವ್ಯಾಸ ಇಟ್ಟುಕೊಳ್ಳುತ್ತಾರೆಯೇ ಹೊರತು, ಐತಿಹಾಸಿಕ ಚಿತ್ರಗಳನ್ನಲ್ಲ. ಅವುಗಳನ್ನು ಸಂಗ್ರಹಿಸುವ, ಜೋಪಾನವಾಗಿ ಎತ್ತಿಡುವ ಕೆಲಸ ಮಾಡುವ ಯುವಕರ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ.
ಗಂಗಾವತಿ ತಾಲೂಕಿನ ರಾಂಪುರ ಗ್ರಾಮದ ಕ್ರೀಡಾಪಟು ಜಯಂತ್ ಕುಮಾರ್ ಶಾಲಾ ದಿನಗಳಲ್ಲಿ ರಾಷ್ಟ್ರಪೀತ ಮಹಾತ್ಮ ಗಾಂಧೀಜಿಯವರ ಭಾಷಣದ ಪ್ರೇರಣೆಯಿಂದ ಪ್ರೇರೆಪಿತರಾಗಿ ಮಹಾತ್ಮ ಗಾಂಧೀಜಿಯವರ ಅಮೂಲ್ಯವಾದ ನಾಣ್ಯ, ನೋಟ್, ಸ್ಟ್ಯಾಂಪ್‌ಗಳು ಹಾಗೂ ವಿಶೇಷವಾದ ಲೇಖನಗಳ ಸಂಗ್ರಹ ಅವರಲ್ಲಿ ಭದ್ರವಾಗಿ ಸಂರಕ್ಷಿಸಿ ಇಟ್ಟಿರುವುದು ಇಂದಿನ ಪೀಳಿಗೆಗೆ ಒಂದು ಮಾದರಿ ಎಂದು ಹೇಳಬಹುದು.
ಅವರ ಸಂಗ್ರಹದ ಒಂದು ನೋಟ
ನಾಣ್ಯಗಳು: ಗಾಂಧೀಜಿ ಶತಮಾನೋತ್ಸವ ಅಂಗಾವಾಗಿ 1969ರಲ್ಲಿ ಆರ್.ಬಿ.ಐ. ಬಿಡುಗಡೆ ಮಾಡಿರುವ ಅಪರೂಪದ 20 ಪೈಸೆ, 50 ಪೈಸೆ, 1 ರೂಪಾಯಿ, 10 ರೂಪಾಯಿ ಬೆಳ್ಳಿ ನಾಣ್ಯ ಹಾಗೂ ಇತ್ತೀಚೆಗೆ ದಂಡಿ ಯಾತ್ರೆಯ 75 ವರ್ಷದ ನೆನಪಿನ ಅಂಗವಾಗಿ ಬಿಡುಗಡೆಯಾದ 5 ರೂಪಾಯಿಯ ನಾಣ್ಯ, 50 ವರ್ಷದ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಬಿಡುಗಡೆಗೊಂಡ 50 ಪೈಸೆಯ ನಾಣ್ಯಗಳ ಸಂಗ್ರಹ.
ನೋಟ್‌ಗಳು: ಅತ್ಯಂತ ಅಮೂಲ್ಯವಾದ ಗಾಂಧೀಜೀ ಅವರ ಶತಮಾನೋತ್ಸವದಲ್ಲಿ ಬಿಡುಗಡೆಗೊಂಡ ಕುಳಿತುಕೊಂಡು ಭಗವದ್ಗೀತೆ ಓದುತ್ತಿರುವ ಗಾಂಧೀಜಿಯ 2, 5 , 10 ರೂಪಾಯಿ ಮತ್ತು 1 ರೂಪಾಯಿ ನೋಟ್‌ಗಳು ಹಾಗೂ 1996ರಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿರುವ 5, 10, 20, 50, 100, 500, 1000 ಮುಖ ಬೆಲೆಯ ರೂಪಾಯಿ ಚಿತ್ರಗಳು ಇರುವ ನೋಟ್ ಗುಚ್ಚಗಳ ಸಂಗ್ರಹ.
ಸ್ಟ್ಯಾಂಪ್‌ಗಳು: ಭಾರತ ಅಂಚೆ ಇಲಾಖೆ 2011 ನಾಸಿಕ್‌ನಲ್ಲಿ ಮುದ್ರಿಸಿದ ಪ್ರಂಪಚದ ಮೊಟ್ಟ ಮೊದಲ 100 ರೂಪಾಯಿ ಮುಖ ಬೆಲೆಯ ಅಪರೂಪದ ಖಾದಿ ಗಾಂಧೀಜಿ ಸ್ಟ್ಯಾಂಪ್ ಹಾಗೂ 25, 50, 100 (ಕೆಂಪು, ಹಸಿರು ಬಣ್ಣದ) ಪೈಸೆಯ ಸ್ಟ್ಯಾಂಪ್, 250, 500 (ಕೆಂಪು, ನೀಲಿ ಬಣ್ಣದ), ಸತ್ಯಾಗ್ರಹ ನೆನಪಿನ ಅಂಗವಾಗಿ ಬಿಡುಗಡೆಗೊಂಡ 500 ಪೈಸೆ, 60 ವರ್ಷದ ಮಾನವ ಹಕ್ಕು ಅಯೋಗ ಅಧಿಕಾರಕ್ಕೆ ಬಂದ ನೆನಪಿನ ಅಂಗವಾಗಿ 500 ಪೈಸೆ ಒಳಗೊಂಡ ವಿವಿಧ ರೀತಿಯ 9 ಗಾಂಧೀಜಿ ಸ್ಟ್ಯಾಂಪ್‌ಗಳು ಇವರು ಸಂಗ್ರಹದಲ್ಲಿವೆ.
ಲೇಖನ ಹಾಗೂ ವ್ಯಂಗ್ಯಚಿತ್ರ: ಕೂತೂಹಲಕರವಾದ ಕನ್ನಡ, ತೆಲುಗು, ಇಂಗ್ಲೀಷ್ ಮೊದಲಾದ ದಿನಪತ್ರಿಕೆ, ಮ್ಯಾಗಜಿನ್‌ಗಳಲ್ಲಿ ಬಂದಿರುವ ಅಪರೂಪದ ಅಂಕಣ, ವ್ಯಂಗ್ಯಚಿತ್ರ, ಛಾಯಾಚಿತ್ರ, ಲೇಖನಗಳಾದ ಗಾಂಧೀಗೂ ಒಬ್ಬ ಪ್ರೇಯಿಸಿ ಇದ್ದಳೂ!, ಪಂಚಕೋನ ಕ್ರಿಕೆಟ್ ನಿಲ್ಲಿಸಿದ ಗಾಂಧೀಜಿ, ಗಾಂಧೀಜಿ ಚಿತೆಗೆ ಅಗ್ನಿಸ್ಪರ್ಶ ಮಾಡಲು ಅವರ ಮಗ ನಿರಾಕರಿಸಿದ್ಧ!, ಗಾಂಧೀಜಿ ವಂಶ ವೃಕ್ಷ, ಹೆಂಗಿದ್ರು ಹೆಂಗಾದ್ರು ಗೊತ್ತಾ(ವ್ಯಂಗ್ಯಚಿತ್ರ), ಗಾಂಧಿ ಹತ್ಯೆಗೆ ಐದು ಬಾರಿ ಯತ್ನ, ಗಾಂಧೀಜಿಯವರ ಹನ್ನೊಂದು ವ್ರತಗಳು, ಪತ್ರಕರ್ತರಾಗಿ ಗಾಂಧೀಜಿ, ʼಬೀದಿ ನಾಯಿಗಳನ್ನು ಕೊಲ್ಲಿ’ ಎಂದ್ದಿದರು ಗಾಂಧೀಜಿ ಹಾಗೂ ವಿವಿಧ ಲೇಖನಗಳ ಪರಿವಿಡಿಯನ್ನು ಪುಸ್ತಕದ ರೂಪದಲ್ಲಿ ಅಚ್ಚು ಕಟ್ಟಾಗಿ ಇಟ್ಟಿರುವುದು ನೋಡುಗರಿಗೆ ಕೂತುಹಲ ಮೂಡಿಸುತ್ತದೆ.
ಚಿಕ್ಕ ಹುಡುಗನಾಗಿದ್ದಾಗಲೇ ಹವ್ಯಾಸವನ್ನು ರೂಢಿಸಿಕೊಂಡಿರುವುದರಿಂದ ತಮ್ಮಲ್ಲಿ ಈಗ ದೊಡ್ಡ ಸಂಗ್ರಹವೇ ಇರುವುದರಿಂದ ಆಸಕ್ತರಿಗೆ ಇವುಗಳನ್ನು ತೋರಿಸಿ ಖುಷಿ ಪಡುತ್ತಾರೆ ಕ್ರೀಡಾಪಟು ಜಯಂತ್ ಕುಮಾರ್.
ಒಟ್ಟಾರೆ ಇತಿಹಾಸವನ್ನೇ ಮರೆಯುತ್ತಿರುವ ಈ ಕಾಲದಲ್ಲಿ ಗಾಂಧಿ ಜಯಂತಿ ದಿನದಂದಾದರೂ ನಾವು ದಿನನಿತ್ಯ ಉಪಯೋಗಿಸುವ ರೂಪಾಯಿ ನೋಟ್‌ಗಳಲ್ಲದೆ ಅಪರೂಪದ ಸಂಗ್ರಹ ನೋಟ್, ನಾಣ್ಯ, ಸ್ಟ್ಯಾಂಪ್, ಲೇಖನಗಳನ್ನು ನೋಡಿ ಬಾಪೂಜಿಯವರನ್ನು ಸ್ಮರಿಸೋಣ.
-ಕೆ.ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
Karnataka Rajyotsava; ಬಾಬು ಪಿಲಾರ್ ಬದಲು ಬಾಬು ಕಿಲಾರ್‌ಗೆ ಪ್ರಶಸ್ತಿ!!
MUST WATCH
ಹೊಸ ಸೇರ್ಪಡೆ
Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.