Prajwal Revanna case:ತನಿಖೆ ಹಾದಿ ತಪ್ಪಿಸುತ್ತಿರುವ ಜೆಡಿಎಸ್-ಬಿಜೆಪಿ: ಪ್ರಿಯಾಂಕ್ ಆರೋಪ
Team Udayavani, May 11, 2024, 11:17 PM IST
ಬೆಂಗಳೂರು: ತಪ್ಪು ಮಾಡಿರುವ ಮನೆ ಮಗನನ್ನು ಉಳಿಸಿಕೊಳ್ಳಲು ಜೆಡಿಎಸ್ ಒಂದು ರೀತಿ ದಾರಿ ತಪ್ಪಿಸಿದರೆ, ಮೈತ್ರಿ ಪಕ್ಷದ ಪರ ನಿಂತು ಬಿಜೆಪಿ ಇನ್ನೊಂದು ರೀತಿ ತನಿಖೆಯ ಹಾದಿ ತಪ್ಪಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ವೀಡಿಯೋ ವೈರಲ್ ಮಾಡಿದ್ದು ತಪ್ಪೇ. ಆದರೆ ಅವರನ್ನು ಪತ್ತೆ ಮಾಡುವುದು ಕಷ್ಟ. ಮೊದಲು ಪ್ರಜ್ವಲ್ ವಿರುದ್ಧ ತನಿಖೆ ಆಗಲಿ. ಹೀನ ಕೃತ್ಯ ಮಾಡಿರುವ ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟನ್ನು ಕೇಂದ್ರ ಸರಕಾರ ಯಾಕೆ ರದ್ದುಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಹೀನ ಕೃತ್ಯ ಎಸಗಿದ್ದು ಹಾಗೂ ಅದನ್ನು ವೀಡಿಯೊ ಮಾಡಿಕೊಂಡು ಮೊಬೈಲ್‌ನಲ್ಲಿ ಇರಿಸಿಕೊಂಡದ್ದೂ ಪ್ರಜ್ವಲ್. ಅದನ್ನು ಕೊಟ್ಟಿದ್ದು ಬಿಜೆಪಿಯ ಅಧಿಕೃತ ವ್ಯಕ್ತಿಗೆ. ಅದನ್ನು ವರಿಷ್ಠರಿಗೆ ಕೊಟ್ಟಿದ್ದಾಗಿ ಅದೇ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ಇದರಲ್ಲಿ ಕಾಂಗ್ರೆಸ್ ಎಲ್ಲಿಂದ ಬಂತು? ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರನ್ನೇಕೆ ಪದೇಪದೆ ಎಳೆದು ತರಬೇಕು ಎಂದು ಪ್ರಶ್ನಿಸಿದರು.
ಮನೆ ಮಗ ಮಾಡಿದ್ದೆಲ್ಲವೂ ಸರಿಯೇ?
ಇಡೀ ಘಟನೆಯನ್ನು ಖಂಡಿಸಿ ಬಿಜೆಪಿ ವರಿಷ್ಠರಾಗಲೀ, ಜೆಡಿಎಸ್ ವರಿಷ್ಠರಾಗಲೀ ಒಂದೇ ಒಂದು ಹೇಳಿಕೆ ಕೊಡುತ್ತಿಲ್ಲ. ಸಂತ್ರಸ್ತರ ಪರವಾಗಿ ಮಾತನಾಡುತ್ತಿಲ್ಲ. ತನಿಖೆ ನಡೆಸುತ್ತಿರುವ ಸರಕಾರಕ್ಕೂ ಬೆಂಬಲ ಕೊಡುತ್ತಿಲ್ಲ. ಮನೆ ಮಗ ಮಾಡಿದ್ದೆಲ್ಲವೂ ಸರಿ ಎನ್ನುವಂತೆ ಮಾತನಾಡುತ್ತಿದ್ದಾರೆ. ಟಿಕೆಟ್ ಕೊಡುವುದಕ್ಕೆ ಅಮಿತ್ ಶಾ ಒಪ್ಪಿರಲಿಲ್ಲ ಎಂದು ಕುಮಾರಸ್ವಾಮಿ ಅವರೇ ಹೇಳಿಕೊಂಡಿದ್ದಾರೆ.
ಎಲ್ಲ ಮಾಹಿತಿಯನ್ನೂ ವರಿಷ್ಠರಿಗೆ ಕೊಟ್ಟಿದ್ದೆ. ಅವರ ಆಣತಿ ಯಂತೆಯೇ ವೀಡಿಯೋ ಬಿಡುಗಡೆ ಮಾಡಿದ್ದೇನೆ, ಪತ್ರಿಕಾಗೋಷ್ಠಿ ಮಾಡಿದ್ದೇನೆ ಎಂದೆಲ್ಲ ಬಿಜೆಪಿಯ ದೇವರಾಜೇಗೌಡ ಒಪ್ಪಿಕೊಂಡಿದ್ದಾರೆ. ಎಲ್ಲ ಗೊತ್ತಿದ್ದೂ ಪ್ರಜ್ವಲ್‌ಗೆ ಟಿಕೆಟ್ ಕೊಟ್ಟಿರಾ? ಪ್ರಜ್ವಲ್‌ರನ್ನು ಗೆಲ್ಲಿಸಿ ನನಗೆ ಶಕ್ತಿ ತುಂಬಿ ಎಂದು ಪ್ರಧಾನಿ ಮೋದಿ ಪ್ರಚಾರ ಮಾಡಿದರೆ ಎಂದು ಕೇಳಿದರು.
ಎಸ್‌ಐಟಿ ವರದಿ ಬಾರದೆ ಸಿಬಿಐ ತನಿಖೆ ಯಾಕೆ?
ಚುನಾವಣೆ ಬಳಿಕ ನಮ್ಮ ಸರಕಾರ ಪತನ ಆಗುತ್ತದೆ, ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದು ಪದೇಪದೆ ಹೇಳಲಾಗುತ್ತಿದೆ. ಎಸ್‌ಐಟಿ ಪ್ರಾಥಮಿಕ ವರದಿಯೇ ಬಾರದೆ ಸಿಬಿಐಗೆ ಕೇಳುತ್ತಿರುವುದೇಕೆ? ಸುರಕ್ಷಿತವಾಗಿರಲು ಕೇಳುತ್ತಿದ್ದೀರಾ ಎಂದು ಪ್ರಿಯಾಂಕ್ ಪ್ರಶ್ನಿಸಿದರು. ಸುಳ್ಳು ಪ್ರಕರಣದಲ್ಲಿ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ರನ್ನು ಬಂಧಿಸಿದಂತೆ ಡಿ.ಕೆ.ಶಿ.ಯರನ್ನೂ ಬಂಧಿಸಲಾಗುತ್ತದೆಯೇ? ಇದಕ್ಕಾಗಿ ಏನು ಸಂಚು ನಡೆಯುತ್ತಿದೆ? ಬ್ಲೂಕಾರ್ನರ್ ನೋಟಿಸ್ ಜಾರಿಯಾದರೂ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ಏನು ಸಮಸ್ಯೆ ಇದೆ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS ಕಚೇರಿ ಟೆಕ್ಕಿಗಳ ಬಳಸಿ ಇವಿಎಂ ಹ್ಯಾಕ್: ವಸಂತ
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.