ಜೆಡಿಎಸ್ ಕಚೇರಿಗೆ ಬಂತು ಹೈಟೆಕ್ ಲುಕ್
Team Udayavani, Feb 21, 2017, 3:45 AM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣಗೊಂಡಿರುವ ಪ್ರಾದೇಶಿಕ ಪಕ್ಷ ತೆನೆ ಹೊತ್ತ ಮಹಿಳೆ ಗುರುತಿನ ಜೆಡಿಎಸ್ ಕಚೇರಿಗೆ “ಹೈಟೆಕ್ ಲುಕ್’.
ಹೌದು. ಶೇಷಾದ್ರಿಪುರಂನ ಕೃಷ್ಣ ಪ್ಲೋರ್ ಮಿಲ್ ಸಮೀಪ ನಿರ್ಮಾಣಗೊಂಡಿರುವ ಜೆಡಿಎಸ್ ಕಚೇರಿ ಯಾವುದೇ ಐಟಿ, ಬಿಟಿ ಕಂಪನಿ ಕಟ್ಟಡಕ್ಕೆ ಕಡಿಮೆ ಇಲ್ಲದಂತೆ ಸಂಪೂರ್ಣ ಹೈಟೆಕ್‌ಮಯವಾಗಿದೆ. ಎಚ್.ಡಿ. ದೇವೇಗೌಡರು ತೀವ್ರ “ಹೋರಾಟ’ ನಡೆಸಿ ರಾಜ್ಯ ಸರ್ಕಾರದಿಂದ ಜಾಗ ಪಡೆದುಕೊಂಡು ಶಾಸಕರು, ಸಂಸದರು, ಪಕ್ಷದ ಕಾರ್ಯ ಕರ್ತರು, ಮುಖಂಡರಿಂದ ದೇಣಿಗೆ ಸಂಗ್ರಹಿಸಿ
ನಿರ್ಮಾಣಗೊಂಡಿರುವ ಈ ಕಟ್ಟಡದ ಒಳಗಿನ ಪೀಠೊಪಕರಣಗಳು “ಮೇಡ್ ಇನ್ ಚೀನಾಮಯ’ ಮಾಜಿ ಸಚಿವ ಎಚ್.ಡಿ.ರೇವಣ್ಣ ಖುದ್ದು ಆಸಕ್ತಿ ವಹಿಸಿ ಚೀನಾಗೆ ತೆರಳಿ ಕಚೇರಿಯ ಯಾವ ಜಾಗಕ್ಕೆ ಯಾವ ಪೀಠೊಪಕರಣ ಬೇಕು ಎಂಬುದರ ಮಾಹಿತಿ
ತೆಗೆದುಕೊಂಡು ಹೋಗಿ ಪೀಠೊಪಕರಣಗಳನ್ನು ತಂದು ಮುಂದೆ ನಿಂತು ಒಳಾಂಗಣ ವಿನ್ಯಾಸ ಮಾಡಿಸುತ್ತಿದ್ದಾರೆ. ತಮಿಳು ನಾಡಿನ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ರಿಯಾಯಿತಿ ದರದಲ್ಲಿ ತಿಂಡಿ-ಊಟ ಒದಗಿಸುವ ಕ್ಯಾಂಟೀನ್ ಸಹ ಪ್ರಾರಂಭವಾಗಲಿದೆ. ಹೈಟೆಕ್ ಕಟ್ಟಡದ ಪಕ್ಕದಲ್ಲೇ ಸುಸಜ್ಜಿತ ಕ್ಯಾಂಟೀನ್ ನಿರ್ಮಿಸಿಕೊಟ್ಟು ಅದರ ನಿರ್ವಹಣೆ ಹೊರಗುತ್ತಿಗೆಗೆ
ಕೊಡಲು ನಿರ್ಧರಿಸಲಾಗಿದೆ. ಪಕ್ಷದ ಕಚೇರಿಗೆ ಬರುವ ಕಾರ್ಯಕರ್ತರು ಮತ್ತು ಮುಖಂಡರಿಗೆ ರಿಯಾಯಿತಿ ದರದಲ್ಲಿ 15 ರೂ.ಗೆ ತಿಂಡಿ, 20 ರೂ. ಗೆ ಊಟ, 10 ರೂ.ಗೆ ಕಾμ ಒದಗಿಸುವ ಷರತ್ತು ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶದೊಂದಿಗೆ ಜೆಡಿಎಸ್‌ನ ಹೈಟೆಕ್ ಕಟ್ಟಡ ಮಾರ್ಚ್ 15ಕ್ಕೆ ಉದ್ಘಾಟಿಸಲು ಸಿದಟಛಿತೆಗಳು ನಡೆದಿದ್ದು, ಕಚೇರಿ ಒಳಾಂಗಣ ವಿನ್ಯಾಸ ಭರದಿಂದ ಸಾಗಿದೆ. ಕಚೇರಿ ಉದ್ಘಾಟನೆಗೆ ಬಿಜೆಪಿಯ ಹಿರಿಯ
ಮುಖಂಡ ಲಾಲ್ ಕೃಷ್ಣ ಅಡ್ವಾಣಿ, ಜನತಾಪರಿವಾರದ ನಾಯಕರಾದ ಮುಲಾಯಂ, ಲಾಲೂ ಮತ್ತಿತರ ನಾಯಕರಿಗೆ ಆಹ್ವಾನ ನೀಡಲು ತೀರ್ಮಾನಿಸಲಾಗಿದೆ. ದೇವೇಗೌಡರ ಆಸೆಯಂತೆ ಜನತಾಪಕ್ಷದ ಸಂಸ್ಥಾಪಕ ಜಯಪ್ರಕಾಶ್ ನಾರಾಯಣ ಅವರ ಹೆಸರನ್ನೇ
ಕಚೇರಿ ಕಟ್ಟಡಕ್ಕೆ ಇಡಲು ನಿರ್ಧರಿಸಲಾಗಿದ್ದು, ಕಚೇರಿ ಆವರಣದಲ್ಲಿ ಜೆಪಿ ಪುತ್ಥಳಿ ಸಹ ಸ್ಥಾಪಿಸುವ ಚಿಂತನೆಯಿದೆ ಎಂದು ಹೇಳಲಾಗಿದೆ.
ದೈವ ಮೂಲೆ ಮಹಿಮೆ
ಜೆಡಿಎಸ್ ಕಚೇರಿಗೆ ದೊರೆತಿರುವ ಜಾಗ ದೈವ ಮೂಲೆಯಲ್ಲಿರುವುದರಿಂದ ಪಕ್ಷಕ್ಕೆ ಅದೃಷ್ಟ ಖುಲಾಯಿಸಿದೆ. ಈ ಕಚೇರಿಯಿಂದಲೇ ಮುಂದಿನ ಚುನಾವಣೆಗೆ ಬಿ ಫಾರಂ ವಿತರಿಸಿದರೆ ಹೆಚ್ಚು ಸ್ಥಾನ ಗೆಲ್ಲಬಹುದು ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ. ಅಭ್ಯರ್ಥಿಗಳ ಜಾತಕ ನೋಡಿಯೇ ಟಿಕೆಟ್ ಕೊಡಲಾಗುತ್ತಿದೆ. ಎಚ್.ಡಿ.ದೇವೇಗೌಡ ಹಾಗೂ ರೇವಣ್ಣ ಅವರು ಪಕ್ಷದ ಸಂಭವನೀಯ ಅಭ್ಯರ್ಥಿಗಳ ಜಾತಕ ತರಿಸಿಕೊಂಡು ನೋಡಿದ್ದಾರೆಂದು ಹೇಳಲಾಗಿದೆ. ಅಲ್ಲಿ ಕಟ್ಟಡ ಕಟ್ಟಲು ಪ್ರಾರಂಭಿಸಿದ ನಂತರ ಪಕ್ಷವು ಬೆಳವಣಿಗೆ ಕಂಡಿದೆ ಎಂಬುದು ದೇವೇಗೌಡರ ನಂಬಿಕೆ.