Karnataka By election; ವಿರೋಧಿಗಳಿಂದ ನನ್ನ ಹಣೆಬರಹ ಬದಲಿಸಲು ಆಗದು: ನಿಖಿಲ್‌


Team Udayavani, Oct 29, 2024, 1:38 AM IST

1-jd-nikhil

ಚನ್ನಪಟ್ಟಣ: ನನ್ನ ಹಣೆಯ ಬರಹ ನಿರ್ಧಾರ ಮಾಡುವುದು ಒಂದು ದೇವರು, ಇನ್ನೊಂದು ಈ ಕ್ಷೇತ್ರದ ಜನ. ವಿರೋಧಿಗಳಿಂದ ನಮ್ಮ ಹಣೆ ಬರಹವನ್ನು ಬದಲಿಸಲು ಆಗದು ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಕೋಡಂಬಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ ಅವರು, ಚನ್ನಪಟ್ಟಣ ಕ್ಷೇತ್ರಕ್ಕೆ ಕುಮಾರಣ್ಣ 1,500 ಕೋಟಿ ರೂ. ಅನುದಾನ ತಂದಿದ್ದಾರೆ. ಇದು ಕೇವಲ ನಿಖಿಲ್‌ ಕುಮಾರಸ್ವಾಮಿ ಗೆಲುವು, ಸೋಲಿನ ವಿಚಾರ ಅಲ್ಲ. ಪ್ರಾದೇಶಿಕ ಪಕ್ಷಗಳ ಅಳಿವು, ಉಳಿವಿನ ಪ್ರಶ್ನೆ. ಪಕ್ಷ ಉಳಿಯಬೇಕು ಅಂದ್ರೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು.

ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣಗಳಲ್ಲಿ ಚುನಾವಣೆ ಪ್ರಚಾರದ ಅಬ್ಬರ ತಾರಕಕ್ಕೆ

ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಣ ರಂಗೇರಿದ್ದು ಅಖಾಡದಲ್ಲಿ ಕಾಂಗ್ರೆಸ್‌ ಹಾಗೂ ಮೈತ್ರಿ ಪಕ್ಷಗಳ ನಾಯಕರ ವಾಕ್ಸಮರ ಮುಗಿಲು ಮುಟ್ಟಿದೆ.

ಮಂಗಳವಾರ ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಪರ ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮೈಸೂರು-ಕೊಡಗು ಸಂಸದ, ಯದುವೀರ್‌ ಒಡೆಯರ್‌ ಸಾಥ್‌ ನೀಡಿದರು. ಚನ್ನಪಟ್ಟಣದ ದೇವರಹೊಸಹಳ್ಳಿ ಗ್ರಾಮಕ್ಕೆ ಆಗಮಿಸಿದ ಕುಮಾರಸ್ವಾಮಿ, ಐತಿಹಾಸಿಕ ಸಂಜೀವರಾಯ ಸ್ವಾಮಿ ದೇಗುಲದಲ್ಲಿ ಪೂಜಿ ಸಲ್ಲಿಸಿ ಕಾರ್ಯಕರ್ತರನ್ನುದ್ದೇಶಿ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಚನ್ನಪಟ್ಟಣ ತಾಲೂಕಿನ ಕೋಡಂಬಹಳ್ಳಿ ಜಿ.ಪಂ. ವ್ಯಾಪ್ತಿಯ 26 ಗ್ರಾಮಗಳಲ್ಲಿ ನಿಖೀಲ್‌ ಕುಮಾರಸ್ವಾಮಿ ಪ್ರಚಾರ ನಡೆಸಿದರು.

ಕಾಂಗ್ರೆಸ್‌ ನಾಯಕರೂ ಚುರುಕು
ಕೈ ಪಡೆ ಕ್ಷೇತ್ರದಲ್ಲಿ ಇದುವರೆಗೆ ಪ್ರಚಾರ ಆರಂಭಿಸಿಲ್ಲವಾದರೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಮುಸ್ಲಿಂ ವಾರ್ಡುಗಳಲ್ಲಿ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಹುರಿದುಂಬಿಸಿದರೆ, ಇತ್ತ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯರೆಡ್ಡಿ ಭಾನುವಾರ ರಾತ್ರಿ ಮಹಿಳಾ ಮುಖಂಡರ ಸಭೆ ನಡೆಸಿದರು.

ತುರುಸಿನ ಪ್ರಚಾರ: ಸಂಡೂರು ಹಾಗೂ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ-ಜೆಡಿಎಸ್‌ ಪ್ರಚಾರ ಜೋರಾಗಿದೆ. ಕುರಗೋಡಿನಲ್ಲಿ ಭೈರತಿ ಬಸವರಾಜ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಪ್ರಚಾರ ನಡೆಸಿದರು. ಕಾಂಗ್ರೆಸ್ಸಿನೊಳಗಿನ ಅಸಮಾಧಾನದ ಪ್ರತಿಫಲವಾಗಿ ಬಿಜೆಪಿ ಗೆಲ್ಲುವ ಎಲ್ಲ ಲಕ್ಷಣ ಇವೆ ಎಂದರು. ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನೀಲ್‌ ಕುಮಾರ್‌ ಸೇರಿದಂತೆ ಇತರರು ಸಾಥ್‌ ನೀಡಿದರು.

ಶಿಗ್ಗಾವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ಖಾನ್‌ ಪಠಾಣ ಪರ ರಾಜ್ಯ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಪ್ರಚಾರ ನಡೆಸಿದ್ದಾರೆ.

ಟಾಪ್ ನ್ಯೂಸ್

DMK-AIDM

TVK Party: ವಿಜಯ್‌ ಪಕ್ಷದ ಸಿದ್ಧಾಂತಗಳು ನಕಲು: ಡಿಎಂಕೆ, ಎಐಡಿಎಂಕೆ

SDM-Gradute

SDM Ujire: ರಚನಾತ್ಮಕ ಚಿಂತನೆಯಿಂದ ನವ ಮನ್ವಂತರ: ಡಾ.ಡಿ.ವೀರೇಂದ್ರ ಹೆಗ್ಗಡೆ

Harish-Poonja

Cast Census: ಬಿ.ಕೆ.ಹರಿಪ್ರಸಾದರಿಂದ ಹಿಂದೂ ಭಾವನೆಗೆ ಧಕ್ಕೆ: ಶಾಸಕ ಹರೀಶ್‌ ಪೂಂಜ

1-weewq

Ranji; ಅಗರ್ವಾಲ್‌ ಶತಕ: 144 ರನ್‌ ಮುನ್ನಡೆಯಲ್ಲಿ ಕರ್ನಾಟಕ

1-salima

Asian Champions Trophy Hockey; ವನಿತಾ ತಂಡಕ್ಕೆ ಸಲೀಮಾ ಟೇಟೆ ನಾಯಕಿ

Wenlock

Wenlock Hospital: 50 ಹಾಸಿಗೆಗಳ ತೀವ್ರ ನಿಗಾ ಘಟಕಕ್ಕೆ ಇಂದು ಶಿಲಾನ್ಯಾಸ

1-kabba

Pro Kabaddi; ಡೆಲ್ಲಿಯನ್ನು ಕೆಡವಿದ ಹರಿಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sdads

Selfie ತಂದ ಆಪತ್ತು; ಕೆರೆ ನೀರಲ್ಲಿ ಕೊಚ್ಚಿಹೋದ ಯುವತಿ: 12 ತಾಸುಗಳ ಬಳಿಕ ರಕ್ಷಣೆ!

1-ree

Aadhaar ವಿರುದ್ಧ ಸಮರ ಸಾರಿದ್ದ ನ್ಯಾ| ಪುಟ್ಟಸ್ವಾಮಿ ನಿಧನ

1-wewqe

Hasan; ಹಾಸನಾಂಬೆಗೆ 4 ದಿನದಲ್ಲಿ 3 ಕೋಟಿ ರೂ. ಆದಾಯ

Khandre

Bidar;ವಿಮಾನಯಾನ ಪುನರಾರಂಭಕ್ಕೆ ಸಂಪುಟದ ಸಮ್ಮತಿ: ಸಚಿವ ಖಂಡ್ರೆ

BYV-yathnal

Waqf Property: ಶಾಸಕ ಯತ್ನಾಳ್‌ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

DMK-AIDM

TVK Party: ವಿಜಯ್‌ ಪಕ್ಷದ ಸಿದ್ಧಾಂತಗಳು ನಕಲು: ಡಿಎಂಕೆ, ಎಐಡಿಎಂಕೆ

puttige-2

Udupi; ಗೀತಾರ್ಥ ಚಿಂತನೆ 78: ಕಷ್ಟನಿವಾರಣೆಯೂ ಪುಣ್ಯ ಸಂಪಾದನೆಯೂ…

Rajahamsa

Deepavali Festival: ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್‌

SDM-Gradute

SDM Ujire: ರಚನಾತ್ಮಕ ಚಿಂತನೆಯಿಂದ ನವ ಮನ್ವಂತರ: ಡಾ.ಡಿ.ವೀರೇಂದ್ರ ಹೆಗ್ಗಡೆ

Harish-Poonja

Cast Census: ಬಿ.ಕೆ.ಹರಿಪ್ರಸಾದರಿಂದ ಹಿಂದೂ ಭಾವನೆಗೆ ಧಕ್ಕೆ: ಶಾಸಕ ಹರೀಶ್‌ ಪೂಂಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.