JDS ಹಾಸನದಲ್ಲಿ ಜೆಡಿಎಸ್ ಒಗ್ಗಟ್ಟಿನ ಮಂತ್ರ: 19 ಶಾಸಕರ ಜತೆ ಎಚ್‌ಡಿಕೆ ಬಿರುಸಿನ ಸಭೆ
Team Udayavani, Nov 8, 2023, 1:16 AM IST
ಹಾಸನ: ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ಮುಂದಾಗಿ ದ್ದಾರೆ ಎಂಬ ವರದಿಗಳ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ನ 19 ಶಾಸಕರು ಹಾಸನದಲ್ಲಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನಾಂಬೆ ದರ್ಶನ ಪಡೆದ ದಿನ ಮಂಗಳವಾರವೇ ಕುಮಾರಸ್ವಾಮಿ ಅವರು ಎಲ್ಲ ಶಾಸಕರೊಂದಿಗೆ ಹಾಸನಾಂಬಾ ದೇಗುಲಕ್ಕೆ ಭೇಟಿ ನೀಡಿ, ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ. “ನಮ್ಮ ಶಾಸಕರಿಗೆ ಇಲ್ಲಸಲ್ಲದ ಆಮಿಷ ವೊಡ್ಡಿ ಅವರ ಬಗ್ಗೆ ರಾಜ್ಯದ ಜನ ರಲ್ಲಿ ಅನುಮಾನ ಬರುವಂತೆ ಮಾಡುವ ಪ್ರಯತ್ನ ನಡೆದಿದೆ. ಈ ಎಲ್ಲ ಊಹಾ ಪೋಹ ಗಳಿಗೆ ತೆರೆ ಎಳೆ ಯುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ದ್ದೇವೆ ಎಂಬ ಸಂದೇಶ ರವಾ ನಿ ಸಲು ಉದ್ದೇಶಿಸಿದ್ದೇವೆ’ ಎಂದು ಕುಮಾರಸ್ವಾಮಿ ಹೇಳಿದರು.
ಅನಂತರ ಹಾಸನದಲ್ಲಿ ವಾಸ್ತವ್ಯ ಹೂಡಿ, ಸಮಾಲೋಚನೆ ಸಭೆ ನಡೆಸಿ ದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ, ಬರಗಾಲ ಪರಿಸ್ಥಿತಿ, ಕಾಂಗ್ರೆಸ್ ನಾಯಕರು ನಮ್ಮ ಶಾಸಕರನ್ನು ಸೆಳೆಯಲು ನಡೆ ಸು ತ್ತಿರುವ ಪ್ರಯತ್ನದಿಂದ ಕಂಗೆಟ್ಟಿ ರುವ ಮುಖಂಡರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಹಾಸನದಲ್ಲಿ ಸಭೆ ನಡೆಸ ಲಾಗಿದೆ ಎಂದರು.
ತಂದೆಯವರನ್ನು ಬೆಳೆಸಿದ ಮಣ್ಣು
ಹಾಸನ ನೆಲದ ಮಣ್ಣು ನಮ್ಮ ತಂದೆ ಯವರನ್ನು ದಿಲ್ಲಿಯವರೆಗೂ ಬೆಳೆಸಿದೆ ಎಂದು ಕುಮಾರಸ್ವಾಮಿ ಹೇಳಿದರು. ಅದರಿಂದಲೇ ನಾವೆಲ್ಲರೂ ಒಂದಾಗಿದ್ದೇವೆ. ನಮ್ಮನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಪ್ರತಿಸ್ಪರ್ಧಿಗಳಿಗೆ ಮನವರಿಕೆ ಮಾಡ ಲಾಗುವುದು ಎಂದರು
ಸಂಕಷ್ಟ ಪರಿಹಾರಕ್ಕೆ ಪ್ರಾರ್ಥನೆ
ನಾಡಿನ ಜನರ ಸಮಸ್ಯೆ ನಿವಾರಣೆ ಯಾಗಲಿ ಎಂದು ಹಾಸನಾಂಬೆ ದೇವಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ರೈತರು, ನಾಡಿನ ಜನರು ಆತ್ಮ ವಿಶ್ವಾಸದಿಂದ ಬದುಕಬೇಕು. ನಮ್ಮಲ್ಲಿ ಸಂಪತ್ತಿನ ಕೊರತೆ ಇಲ್ಲ. ಆದರೆ ಅದು ಸಮಾನ ಹಂಚಿಕೆಯಾಗಿ, ಸದ್ಬಳಕೆ ಆಗಬೇಕು. ಈ ಹಿನ್ನೆಲೆಯಲ್ಲಿ ಆಳು ವವ ರಿಗೆ ಜ್ಞಾನೋದಯ ಮಾಡಿಸು. ಎಲ್ಲರ ಬದುಕು ಹಸನಾಗಲಿ ಎಂದು ದೇವರಲ್ಲಿ ಬೇಡಿದ್ದೇನೆ ಎಂದರು.
ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ: ಸಿದ್ದರಾಮಯ್ಯ
ಒಂದೆಡೆ ತಮ್ಮ ಪಕ್ಷದ ಶಾಸಕ ರನ್ನು ಹಿಡಿದಿಟ್ಟುಕೊಳ್ಳಲು ಹಾಸನ ದಲ್ಲಿ ಜೆಡಿಎಸ್ ಕಸ ರತ್ತು ನಡೆಸುತ್ತಿರುವ ಬೆನ್ನಲ್ಲೇ, ಹಾಸನ ದಲ್ಲಿಯೇ ಮಾತ ನಾಡಿದ ಮುಖ್ಯಮಂತ್ರಿ ಸಿದ್ದ ರಾಮಯ್ಯ, “ಕಾಂಗ್ರೆಸ್‌ನ ಸಿದ್ಧಾಂತ, ನಾಯಕತ್ವ, ನಮ್ಮ ಪಕ್ಷದ ವ್ಯವಸ್ಥೆಯನ್ನು ಒಪ್ಪಿ ಅನುಸರಿಸಲು ಬಯಸುವವರಿಗೆ ಸ್ವಾಗತ’ ಎಂದು ಹೇಳಿದ್ದಾರೆ. ಜೆಡಿಎಸ್ ಸಹಿತ ಯಾವುದೇ ಪಕ್ಷದ ಮುಖಂಡರಿಗೆ ನಾನು ಆಹ್ವಾನ ನೀಡಿಲ್ಲ . ಆದರೆ ನಮ್ಮನ್ನು ಒಪ್ಪಿಕೊಂಡು ಬರು ವವ ರಿಗೆ ಸ್ವಾಗತ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.