Jigani:ಪೊಲೀಸರಿಂದ ಕಾರ್ಯಾಚರಣೆ: ಹಿಂದೂ ಹೆಸರಲ್ಲಿ ವಾಸವಿದ್ದ ಮತ್ತೆ 3 ಪಾಕ್‌ ಪ್ರಜೆಗಳ ಸೆರೆ

ಜಿಗಣಿ ಪೊಲೀಸರಿಂದ ಕಾರ್ಯಾಚರಣೆ ; ನಕಲಿ ದಾಖಲೆ ಸೃಷ್ಟಿಸಿ ಪೀಣ್ಯದಲ್ಲಿ ನೆಲೆಸಿದ್ದರು

Team Udayavani, Oct 4, 2024, 12:43 AM IST

Jigani:ಪೊಲೀಸರಿಂದ ಕಾರ್ಯಾಚರಣೆ: ಹಿಂದೂ ಹೆಸರಲ್ಲಿ ವಾಸವಿದ್ದ ಮತ್ತೆ 3 ಪಾಕ್‌ ಪ್ರಜೆಗಳ ಸೆರೆ

ಆನೇಕಲ್‌: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗ ನೆಲೆಸಿದ್ದ ಪಾಕಿಸ್ಥಾನಿ ಪ್ರಜೆಗಳ ಬಂಧನ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಜಿಗಣಿ ಪೊಲೀಸರು ಗುರುವಾರ ಮತ್ತೆ ಮೂವರು ಪಾಕ್‌ ಪ್ರಜೆಗಳನ್ನು ಬಂಧಿಸಿದ್ದಾರೆ. ಇವರೂ ಸಹ ನಕಲಿ ದಾಖಲೆ ಸೃಷ್ಟಿಸಿ ಹಿಂದೂಗಳ ಹೆಸರಿನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಪಾಕ್‌ ಮೂಲದ ತಾರಿಖ್‌ ಸಯೀದ್‌, ಈತನ ಪತ್ನಿ ಅನಿಲ ಸಯೀದ್‌, ಇಶ್ರತ್‌ ಸಯೀದ್‌ (ಅಪ್ರಾಪ್ತ ವಯಸ್ಕ ಬಾಲಕಿ) ಬಂಧಿತ ಕುಟುಂಬ. ಇವರು ಸಹ ನಕಲಿ ದಾಖಲೆ ಸೃಷ್ಟಿಸಿಕೊಂಡು ಅಕ್ರಮವಾಗಿ ಬೆಂಗಳೂರಿನ ಪೀಣ್ಯದಲ್ಲಿ ವಾಸವಾಗಿದ್ದರು. ಜಿಗಣಿ¿ಲ್ಲಿ ವಾಸವಾಗಿದ್ದ ಪಾಕ್‌ ಕುಟುಂಬವನ್ನು 4 ದಿನಗಳ ಹಿಂದೆ ಬಂಧನ ಮಾಡಲಾಗಿತ್ತು. ಈ ಬಂಧಿತರು ನೀಡಿದ ಮಾಹಿತಿ ಮೇರೆಗೆ ಜಿಗಣಿ ಪೊಲೀಸರು ಮೂವರನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ನಂತರ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ತನಿಖೆ ನಡೆಸಬೇಕಿದ್ದರಿಂದ ಆನೇಕಲ್‌ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದಿದ್ದಾರೆ. 10 ವರ್ಷಗಳಿಂದ ಪಾಕ್‌ ಪ್ರಜೆಗಳು ಭಾರತದಲ್ಲಿ ನೆಲೆಸಿದ್ದವರನ್ನು ಬಂಧಿಸಿದ ಕೂಡಲೇ ಕೇಂದ್ರೀಯ ಗುಪ್ತಚರ ಸಂಸ್ಥೆ, ರಾಷ್ಟ್ರೀಯ ತನಿಖಾ ದಳ ಆಗಮಿಸಿ ಮಾಹಿತಿ ಕಲೆ ಹಾಕಿದೆ. ಹಾಗೆಯೇ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್‌. ಜಿತೇಂದ್ರ ಭೇಟಿ ನೀಡಿ ತನಿಖೆ ಬಗ್ಗೆ ಚರ್ಚೆ ನಡೆಸಿದ್ದು, ಸಲಹೆ ಸೂಚನೆ ನೀಡಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?
ಬಂಧನದಲ್ಲಿದ್ದ ಪಾಕಿಸ್ಥಾನದ ರಶೀದ್‌ ಅಲಿ ಸಿದ್ಧಕಿ ಕುಟುಂಬವನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ತಮ್ಮಂತೆಯೇ ಪೀಣ್ಯದಲ್ಲಿ ನೆಲೆಸಿರುವುದಾಗಿ ಹೇಳಿದ್ದಾರೆ. ಬಳಿಕ ಜಿಗಣಿ ಪೊಲೀಸರು ಬೆಂಗಳೂರಿನ ಪೀಣ್ಯಕ್ಕೆ ತೆರಳಿ ಒಂದೇ ಕುಟುಂಬದ ಮೂವರನ್ನು ಬಂಧಿಸಿದ್ದಾರೆ. ರಶೀದ್‌ ಸಿದ್ದಕಿ ಕುಟುಂಬದೊಂದಿಗೆ ಈ ಕುಟುಂಬವು ಪಾಕಿಸ್ಥಾನದಿಂದ ಬಾಂಗ್ಲದೇಶ ಅಲ್ಲಿಂದ ಪಶ್ಚಿಮ ಬಂಗಾಳ ಮಾರ್ಗವಾಗಿ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದರು. ವೆಸ್ಟ್‌ ಬೆಂಗಾಲ್‌ನಿಂದ ದಿಲ್ಲಿಗೆ ಬಂದವರೇ ನಕಲಿ ದಾಖಲೆ ಮಾಡಿಸಿಕೊಂಡಿದ್ದಾರೆ. ತಾರಿಕ್‌ ಸಯೀದ್‌ ಬದಲಾಗಿ ಸನ್ನಿ ಚೌಹಾಣ್‌, ಅನಿಲ್‌ ಸಯೀದ್‌ ಬದಲಾಗಿ ದೂಪಾ ಚೌಹಾಣ್‌ಎಂದು ಹೆಸರು ಬದಲಾಯಿಸಿಕೊಂಡು ನಕಲಿ ಆಧಾರ್‌ ಕಾರ್ಡ್‌, ಡ್ರೆçವಿಂಗ್‌ ಲೈಸೆನ್ಸ್‌, ಪಾಸ್‌ಪೋರ್ಟ್‌ ಮಾಡಿಸಿಕೊಳ್ಳಲಾಗಿತ್ತು. ಸಿದ್ದಕಿ ಕುಟುಂಬ ಜಿಗಣಿಗೆ ಬಂದರೆ ಇವರು ಕೇರಳಕ್ಕೆ ಹೋಗಿದ್ದರು. ಇದೇ ಸಮಯದಲ್ಲಿ ರಶೀದ್‌ ಅಲಿ ಸಿದ್ದಕಿ ಹೆಂಡತಿಯ ತಂಗಿ ಗಂಡನ ಸಹಾಯದಿಂದ ದಾವಣಗೆರೆಯಲ್ಲಿ ಆಶ್ರಯ ಪಡೆದಿದ್ದ ಎನ್ನಲಾಗಿದೆ. ಅಲ್ಲಿ ಒಂದು ವರ್ಷ ವಾಸವಿದ್ದು ಅಲ್ಲಿಂದ ಪೀಣ್ಯಕ್ಕೆ ಬಂದು ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ. ಇವರೆಲ್ಲರೂ ನಿರಂತರ ಸಂಪರ್ಕದಲ್ಲಿದ್ದು, ಮೆಹದಿ ಪೌಂಡೇಷನ್‌ನ ಸದಸ್ಯರಾಗಿದ್ದಾರೆ. ಇವರು ಯೂನಸ್‌ ಅಲ್ಗೊàರ್‌ ಧರ್ಮ ಗುರುಗಳ ಬಗ್ಗೆ ಪ್ರಚಾರ ನಡೆಸುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

15 ಮಂದಿ ಅಕ್ರಮ ಪ್ರವೇಶ
ಪಾಕ್‌ನಿಂದ ಒಟ್ಟು 15 ಮಂದಿ ಭಾರತಕ್ಕೆ ಬಂದಿದ್ದರು ಅವರಲ್ಲಿ 7 ಮಂದಿ ಕರ್ನಾಟಕಕ್ಕೆ ಬಂದರೆ, ಉಳಿದವರು ಅಸ್ಸಾಂ, ಒರಿಸ್ಸಾ ಮತ್ತು ಹೈದರಾಬಾದ್‌ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಜಿಗಣಿಯಲ್ಲಿ ಪಾಕ್‌ ಕುಟುಂಬವನ್ನು ಬಂಧಿಸಿದ ಬಳಿಕ ಹಲವು ಸ್ಫೋಟಕ ಮಾಹಿತಿ ಹೊರ ಬಂದಿದೆ. ತನಿಖೆ ಇನ್ನೂ ಮುಂದುವರಿದಿದ್ದು ಮತ್ತಷ್ಟು ಪಾಕ್‌ ಪ್ರಜೆಗಳ ಬಂಧನ ಸಾಧ್ಯತೆ ಇದೆ. ಇನ್ನಷ್ಟು ಸಂಗತಿಗಳು ಹೊರಬೀಳಲಿವೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

1-ausi

Australia; ‘ವನ್‌ ಡೇ ಕಪ್‌’ಗೆ ಡೀನ್‌ ಜೋನ್ಸ್‌  ಹೆಸರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

Ramalinga-reddy

Distribution: ಕೆಎಸ್ಸಾರ್ಟಿಸಿ ನಿವೃತ್ತ ಸಿಬಂದಿಗೆ 224 ಕೋಟಿ ರೂ. ಪಾವತಿ

R-Ashok

C.T.Ravi Case: ನಕ್ಸಲರು ರವಿಗೆ ಗುಂಡು ಹೊಡೆಯಲಿ ಎಂದು ಕರೆದೊಯ್ದರೇ?: ಆರ್‌.ಅಶೋಕ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.