ಪತ್ರಕರ್ತರ ಮನಸ್ಸು ತಟಸ್ಥವಾಗಿರಬೇಕು
Team Udayavani, Jan 3, 2018, 11:00 AM IST
ಬೆಂಗಳೂರು: “ಪತ್ರಕರ್ತರ ಮನಸ್ಸು ತಟಸ್ಥವಾಗಿರಬೇಕು. ಅವರ ಆಲೋ ಚನೆಗಳು ಲೇಪಿತವಾಗಿರಬಾರದು’ -ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ಮಾಧ್ಯಮಕ್ಕೆ ಹೇಳಿದ ಕಿವಿಮಾತು ಇದು. ಮಂಗಳವಾರ “ಉದಯವಾಣಿ’ ಪತ್ರಿಕೆಯ ಬೆಂಗಳೂರು ಕಚೇರಿಗೆ ಸೌಹಾರ್ದ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಅವರು, ಮಾಹಿತಿ ತಂತ್ರಜ್ಞಾನದ ಭರಾಟೆಯಲ್ಲಿ ತೇಲಿ ಬರುವ ಊಹಾಪೋಹಗಳಿಗೆ ಕಡಿವಾಣ ಹಾಕುವ ಮೊದಲೇ
ಅದರಿಂದಾಗುವ ನಷ್ಟ ಸಂಭವಿಸಿ ಬಿಟ್ಟಿರುತ್ತದೆ ಎಂದರು. ಹಾಗಾಗಿ ಪತ್ರಕರ್ತರ ಮನಸ್ಸು ತಟಸ್ಥವಾಗಿರಬೇಕು ಮತ್ತು ಅವರ ಆಲೋಚನೆಗಳು ಲೇಪಿತವಾಗಿರಬಾರದು ಎಂದರು.
ತಂತ್ರಜ್ಞಾನದ ಬೆಳವಣಿಗೆ ನಂತರ ಮಾಹಿತಿ ಮತ್ತು ಜ್ಞಾನದ ಮೇಲಿನ ನಿಯಂತ್ರಣ ತಪ್ಪಿ ಹೋಗಿದೆ. ನಿಜ ಯಾವುದು ಸುಳ್ಳು ಯಾವುದು ಎಂದು ಪೊಲೀಸರು ಮತ್ತು ಸರ್ಕಾರಕ್ಕೆ ತೀರ್ಮಾನಿಸುವುದು ಕಷ್ಟವಾಗಿ ಬಿಡುತ್ತದೆ. ಹಾಗಾಗಿ, ಸಮಾಜಕ್ಕಾಗಿ ಪತ್ರಕರ್ತರ ಪಾತ್ರ ಮುಖ್ಯವಾಗಿರುತ್ತದೆ ಎಂದರು. ವೇದಗಳ ಕಾಲದಲ್ಲಿ ಮಾಹಿತಿ ಮತ್ತು ಜ್ಞಾನ ಮೌಖೀಕವಾಗಿ ಪಸರಿಸಲ್ಪಡುತ್ತಿತ್ತು. ಆಗ ಅದರ ವ್ಯಾಪ್ತಿ ತುಂಬಾ ಕಡಿಮೆ ಆಗಿತ್ತು. ಮುದ್ರಣ ಮಾಧ್ಯಮ ಬಂದಾಗ ವ್ಯಾಪ್ತಿ ವಿಸ್ತಾರಗೊಂಡಿತು. ಆದರೆ, ಎಂಭತ್ತರ ದಶಕದಲ್ಲಿ ಇಂಟರ್‌ನೆಟ್ ಬಂದ ಬಳಿಕ ಪುಸ್ತಕದಲ್ಲಿದ್ದ ಮಾಹಿತಿ ಗಾಳಿಯಲ್ಲಿ ತೇಲಾಡಲಾರಂಭಿಸಿದೆ. ಏಳು ಸಾವಿರ ವರ್ಷಗಳಲ್ಲಿ ಗಳಿಸಿರುವ ಮಾಹಿತಿ ಇಂದು ಗಾಳಿಯಲ್ಲಿ ಸಿಗುತ್ತದೆ. ಒಂದು ಚಿಕ್ಕ ಮೊಬೈಲ್ ಇದ್ದರೆ ಸಾಕು, ಅದನ್ನು ನಾವು ನಮ್ಮದಾಗಿಸಿಕೊಳ್ಳಬಹುದು
ಎಂದು ಅವರು ತಂತ್ರಜ್ಞಾನದ ಬೆಳವಣಿಗೆಯನ್ನು ವಿವರಿಸಿದರು.
ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಹೋಲಿಸಿದರೆ ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಹೆಚ್ಚು. ಟಿವಿ, ಇಂಟರ್ ನೆಟ್, ಫೇಸ್‌ಬುಕ್ ಇವೆಲ್ಲ ವೀಕ್ಷಕರ ನಿಯಂತ್ರಣದಲ್ಲಿಲ್ಲ. ಆದರೆ, ಮುದ್ರಣ ಮಾಧ್ಯಮ ಓದುಗರ ನಿಯಂತ್ರಣ ದಲ್ಲಿದೆ. ಓದುಗರಿಗೆ ಮುದ್ರಣ ಮಾಧ್ಯಮ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ನೀಡುತ್ತದೆ ಎಂದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಎಚ್.ಬಿ. ದಿನೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.