June 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫಲಿತಾಂಶ
ಲೋಕಸಭೆ, 6 ಪರಿಷತ್ ಚುನಾವಣೆ ಬೆನ್ನಲ್ಲೇ ಮತ್ತೆ ಚುನಾವಣೆ; ವಿಧಾನಸಭೆ ಮೂಲಕ ವಿಧಾನ ಪರಿಷತ್‌ಗೆ 11 ಸದಸ್ಯರ ಆಯ್ಕೆ
Team Udayavani, May 21, 2024, 7:05 AM IST
ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆಯಲಿರುವ ಚುನಾ ವಣೆಯ ವೇಳಾಪಟ್ಟಿಯನ್ನು ಚುನಾವಣ ಆಯೋಗ ಪ್ರಕಟಿಸಿದೆ. ಜೂ. 3 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಜೂ. 13ರಂದು ಮತದಾನ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ಮೇ 27ರಂದು ಅಧಿಸೂಚನೆ
ಪ್ರಕಟ, ಜೂ. 3 ನಾಮಪತ್ರ ಸಲ್ಲಿಸಲು ಕೊನೆಯ ದಿನ, ಜೂ. 4 ನಾಮಪತ್ರಗಳ ಪರಿಶೀಲನೆ, ಜೂ. 6 ನಾಮಪತ್ರ ಹಿಂಪಡೆಯಲು ಕೊನೆಯ ದಿನ, ಜೂ. 13ರಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ಮತ್ತು ಅಂದು ಸಂಜೆ 5ರಿಂದ ಮತ ಎಣಿಕೆ ನಡೆಯಲಿದೆ. ಜೂ. 15ರೊಳಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕು ಎಂದು ಆಯೋಗ ಹೇಳಿದೆ.
ಜೂ. 17ರಂದು ವಿಧಾನ ಪರಿಷತ್ ಸದಸ್ಯರಾದ ಸಚಿವ ಎನ್.ಎಸ್. ಭೋಸರಾಜು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಮತ್ತು ಸದಸ್ಯರಾದ ಅರವಿಂದ ಕುಮಾರ್ ಅರಳಿ, ಡಾ| ತೇಜಸ್ವಿನಿ ಗೌಡ, ಮುನಿರಾಜು ಗೌಡ ಪಿ.ಎಂ., ಕೆ.ಪಿ. ನಂಜುಂಡಿ ವಿಶ್ವಕರ್ಮ, ಬಿ.ಎಂ. ಫಾರೂಖ್, ರಘುನಾಥ್ ಎಂ. ಮಲ್ಕಾಪುರೆ, ಎನ್. ರವಿಕುಮಾರ್, ಎಸ್. ರುದ್ರೇಗೌಡ ಮತ್ತು ಕೆ. ಹರೀಶ್ ಕುಮಾರ್ ಅವರ ಸ್ಥಾನಗಳು ಖಾಲಿಯಾಗಲಿದ್ದು, ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಯಾರ ಸ್ಥಾನ ತೆರವು?
ಎನ್.ಎಸ್. ಭೋಸರಾಜು- ಕಾಂಗ್ರೆಸ್
ಕೆ. ಗೋವಿಂದರಾಜು- ಕಾಂಗ್ರೆಸ್
ಅರವಿಂದ ಕುಮಾರ್ ಅರಳಿ- ಕಾಂಗ್ರೆಸ್
ಡಾ| ತೇಜಸ್ವಿನಿ ಗೌಡ- ಬಿಜೆಪಿ
ಪಿ.ಎಂ. ಮುನಿರಾಜು ಗೌಡ- ಬಿಜೆಪಿ
ಕೆ.ಪಿ. ನಂಜುಂಡಿ- ಬಿಜೆಪಿ
ಬಿ.ಎಂ. ಫಾರೂಖ್- ಜೆಡಿಎಸ್
ರಘುನಾಥ್ ಎಂ. ಮಲ್ಕಾಪುರೆ- ಬಿಜೆಪಿ
ಎನ್. ರವಿಕುಮಾರ್- ಬಿಜೆಪಿ
ಎಸ್. ರುದ್ರೇಗೌಡ- ಬಿಜೆಪಿ
ಕೆ. ಹರೀಶ್ ಕುಮಾರ್- ಕಾಂಗ್ರೆಸ್
ಮೂರೂ ಪಕ್ಷಗಳ ಸಂಭಾವ್ಯರು
ಬಿಜೆಪಿ
ಎನ್. ರವಿಕುಮಾರ್, ನಳಿನ್ ಕುಮಾರ್ ಕಟೀಲು, ಸಿ.ಟಿ. ರವಿ, ರಘುನಾಥ್ ಮಲ್ಕಾಪುರೆ, ರಘು ಕೌಟಿಲ್ಯ, ಮಾಧುಸ್ವಾಮಿ, ಮಾಳವಿಕಾ ಅವಿನಾಶ್, ತಾರಾ ಅನುರಾಧಾ, ಶ್ರುತಿ, ಮಂಜುಳಾ
ಜೆಡಿಎಸ್
ಬಿ.ಎಂ. ಫಾರೂಖ್, ಜವ ರಾಯಿಗೌಡ, ಕುಪೇಂದ್ರ ರೆಡ್ಡಿ
ಕಾಂಗ್ರೆಸ್
ಅರವಿಂದ ಕುಮಾರ ಅರಳಿ, ಎನ್.ಎಸ್. ಬೋಸರಾಜು, ಕೆ.ಗೋವಿಂದರಾಜು, ಹರೀಶ್ ಕುಮಾರ್, ಯತೀಂದ್ರ ಸಿದ್ದರಾಮಯ್ಯ, ಎಲ್. ನಾರಾಯಣ, ವಿಜಯ ಮುಳಗುಂದ, ರಮೇಶ್ ಬಾಬು, ವಿನಯ್ ಕಾರ್ತಿಕ್, ಸಿ.ಎಸ್. ದ್ವಾರಕಾನಾಥ್, ಎ.ಎನ್. ನಟರಾಜ್ ಗೌಡ, ಐಶ್ವರ್ಯಾ ಮಹದೇವ್, ಕವಿತಾ ರೆಡ್ಡಿ, ಕಮಲಾಕ್ಷಿ ರಾಜಣ್ಣ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.