ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಪ್ರಕಟಿಸಿದ ಬಿಜೆಪಿ: ದೇವಾಂಗ ಸಮುದಾಯದ ಕೆ ನಾರಾಯಣ ಆಯ್ಕೆ
Team Udayavani, Nov 17, 2020, 3:36 PM IST
ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿ ಘೋಷಣೆ ಮಾಡಿದ್ದು, ಮತ್ತೊಮ್ಮೆ ಅಚ್ಚರಿಯ ಆಯ್ಕೆ ಮಾಡಿದೆ. ಮಂಗಳೂರು ಮೂಲದವರಾದ ಕೆ ನಾರಾಯಣ ಅವರನ್ನು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಅಶೋಕ್ ಗಸ್ತಿ ಅಕಾಲಿಕ ನಿಧನದಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದ, ಡಿಸೆಂಬರ್ 1ರಂದು ಮತದಾನ ನಡೆಯಲಿದೆ.
ಕಳೆದ ಕೆಲವು ದಶಕಗಳಿಂದ ಆರ್ ಎಸ್ಎಸ್ ನಲ್ಲಿ ಸಕ್ರೀಯ ಕಾರ್ಯಕರ್ತರಾಗಿರುವ ಕೆ.ನಾರಾಯಣ್ ಅವರು ಬೆಂಗಳೂರಿನಲ್ಲಿ ಸ್ವಾನ್ ಪ್ರಿಂಟರ್ಸ್ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ‘ಸಂಭಾಷಣಾ ಸಂದೇಶ’ ಎಂಬ ಸಂಸ್ಕೃತ ಭಾಷೆಯ ಮಾಸಿಕ ಪತ್ರಿಕೆಯನ್ನು ಇವರು ಹೊರತರುತ್ತಿದ್ದು, ‘ತುಳುವೆರೆ ಕೇದಿಗೆ’ ಎಂಬ ತುಳು ಮ್ಯಾಗಜಿನ್ ನ ಸಂಪಾದಕರಾಗಿದ್ದಾರೆ.
ರಾಜ್ಯ ಬಿಜೆಪಿ ಘಟಕವು ರಾಜ್ಯಸಭಾ ಚುನಾವಣೆಗೆ ಮೂವರ ಹೆಸರನ್ನು ಶಿಫಾರಸು ಮಾಡಿತ್ತು. ಅಶೋಕ್ ಗಸ್ತಿ ಪತ್ನಿ ಸುಮಾ ಗಸ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಂಕರಪ್ಪ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಹೆಸರನ್ನು ಸೂಚಿಸಿತ್ತು. ಆದರೆ ರಾಜ್ಯದ ಶಿಫಾರಸ್ಸನ್ನು ತಿರಸ್ಕರಿಸಿರುವ ಕೇಂದ್ರದ ನಾಯಕರು ಮತ್ತೊಮ್ಮೆ ಹೊಸ ಮುಖಕ್ಕೆ ಮಣೆ ಹಾಕಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.