ಆಯ್ಕೆ ಆಶ್ಚರ್ಯ ತಂದಿದೆ: ಕೆ. ನಾರಾಯಣ
Team Udayavani, Nov 18, 2020, 6:01 AM IST
ಬೆಂಗಳೂರು: ನಮ್ಮ ಇಡೀ ಕುಟುಂಬದಲ್ಲಿ ಯಾರೂ ರಾಜಕೀಯ ನಾಯಕರಿಲ್ಲ. ವೈಯಕ್ತಿಕವಾಗಿ ಯಾವುದೇ ರಾಜಕೀಯ ನಾಯಕರ ಜತೆ ಸಹವಾಸವಿಲ್ಲ. ನನ್ನ ಸಮಾಜ ಸೇವೆಯನ್ನೇ ಗುರುತಿಸಿ ಆಯ್ಕೆ ಮಾಡಿರುವುದು ಅಚ್ಚರಿ ತಂದಿದೆ. ಫಲಾಪೇಕ್ಷೆ ಬಯಸದೆ ಸೇವೆ ಮಾಡಿದರೆ ಸಮಾಜವೇ ಫಲ ನೀಡುತ್ತದೆ ಎನ್ನುವುದಕ್ಕೆ ಇದು ನಿದರ್ಶನ – ಇವು ರಾಜ್ಯಸಭೆಗೆ ಬಿಜೆಪಿಯಿಂದ ಅಭ್ಯರ್ಥಿಯಾಗಿರುವ ಡಾ| ಕೆ. ನಾರಾಯಣ ಅವರ ಮಾತುಗಳು.
ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಬಿಜೆಪಿಯು ಅವರನ್ನು ಅಭ್ಯರ್ಥಿಯಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಅವರೊಂದಿಗೆ “ಉದಯವಾಣಿ’ ನಡೆಸಿದ ಕಿರು ಸಂದರ್ಶನದ ಸಂಕ್ಷಿಪ್ತ ರೂಪ ಇಲ್ಲಿದೆ.
– ಬಿಜೆಪಿಯಲ್ಲಿ ಯಾವಾಗಿನಿಂದ ಗುರುತಿಸಿಕೊಂಡಿದ್ದಿರಿ?
ನಾನು ಮೂಲತಃ ಮಂಗಳೂರಿನ ಅಶೋಕ ನಗರದವನಾಗಿದ್ದು, ಅಲ್ಲಿಯೇ ಓದಿ, ಬೆಳೆದವನು. ಈ ವರೆಗೆ ಯಾವುದೇ ರಾಜಕೀಯ ಪಕ್ಷದಲ್ಲೂ ಗುರುತಿಸಿಕೊಂಡಿರಲಿಲ್ಲ. ತಿಂಗಳ ಹಿಂದಷ್ಟೇ ಬಿಜೆಪಿ ನೇಕಾರ ಪ್ರಕೋಷ್ಠದ ಸಹ ಸಂಚಾಲಕನಾಗಿ ಆಯ್ಕೆಯಾಗಿದ್ದೆ. ಬೆಂಗಳೂರಿನಲ್ಲಿ ಸ್ಪಾನ್ ಮುದ್ರಣಾಲಯ ನಡೆಸುತ್ತಿದ್ದೇನೆ.
– ಸಮಾಜ ಸೇವೆಗೆ ಸ್ಫೂರ್ತಿ ಏನು?
ಸಮಾಜದ ಸಮಗ್ರ ಅಭಿವೃದ್ಧಿಯೇ ಸ್ಫೂರ್ತಿ. ಮಂಗ ಳೂರಿನ ಅಶೋಕನಗರದಲ್ಲಿ ಬಡವರಿಗಾಗಿ ಸಭಾಂಗಣ ನಿರ್ಮಿಸಿದ್ದೇನೆ. ಬಡವರಿಗೆ ಭೂದಾನ ಮಾಡಿ, ಅಲ್ಲಿ ಮನೆಗಳನ್ನು ನಿರ್ಮಿಸಿದ್ದು, ದೇವಸ್ಥಾನ ಮತ್ತು ಆಶ್ರಮಗಳ ಅಭಿವೃದ್ಧಿಗೆ ಶ್ರಮಿಸಿರುವ ಜತೆಗೆ ಬಡ ಮಕ್ಕಳ ಶಿಕ್ಷಣಕ್ಕಾಗಿಯೂ ದುಡಿಯುತ್ತಿದ್ದೇನೆ.
– ರಾಜ್ಯಸಭೆ ಸದಸ್ಯರಾಗುತ್ತೀರಿ ಎಂದೆಣಿಸಿಕೊಂಡಿದ್ದಿರೇ?
ಇಲ್ಲ. ಮಂಗಳವಾರ ನಳಿನ್ ಕುಮಾರ್ ಕಟೀಲು ಅವರು ದೂರವಾಣಿ ಕರೆ ಮಾಡಿ, ನಾಮಪತ್ರ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸುವಂತೆ ಹೇಳಿದರು. ಅನಂತರ ದಿಲ್ಲಿಯಿಂದಲೂ ಕರೆ ಬಂತು. ಆಗ ಆಶ್ಚರ್ಯವಾಗಿತ್ತು.
– ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದೀರಾ?
ಸಂಘ ಪರಿವಾರದ ಸಂಘಟನೆಗಳಲ್ಲಿ 25 ವರ್ಷ ಗಳಿಂದಲೂ ಸಕ್ರಿಯನಾಗಿದ್ದೇನೆ. ಮಂಗಳೂರಿನ ದಿಗಂತ ಮುದ್ರಣಾಲಯದಲ್ಲಿ 25 ವರ್ಷಗಳಿಂದ ತಾಂತ್ರಿಕ ನಿರ್ದೇಶಕನಾಗಿದ್ದೇನೆ. ಹಿಂದೂ ಸೇವಾ ಪ್ರತಿಷ್ಠಾನದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದೇನೆ. ಪರಿವಾರದ ಸಂಸ್ಕೃತ ಪತ್ರಿಕೆ “ಸಂಭಾಷಣಾ ಸಂದೇಶ’ದ ಪ್ರಕಾಶಕನಾಗಿದ್ದೇನೆ.
– ಬಿಜೆಪಿ ಹಾಗೂ ರಾಜಕಾರಣಿಗಳೊಂದಿಗಿನ ಒಡನಾಟ?
ಬೆಂಗಳೂರಿನಲ್ಲೇ ಇದ್ದರೂ ಬಿಜೆಪಿ ಕಚೇರಿಗೆ ಹೋಗದೆ ಒಂದು ವರ್ಷ ಕಳೆದಿದೆ. ಯಾರನ್ನೂ ಭೇಟಿ ಮಾಡಿಲ್ಲ. ನಮ್ಮ ಇಡೀ ಕುಟುಂಬದಲ್ಲಿ ರಾಜಕೀಯವಾಗಿ ಗುರುತಿಸಿ ಕೊಂಡವರ್ಯಾರೂ ಇಲ್ಲ. ನನಗೂ ಯಾವುದೇ ರಾಜಕೀಯ ನಾಯಕರ ಸಹವಾಸವೂ ಇಲ್ಲ. ಸಮಾಜ ಸೇವೆಯೇ ಈ ಆಯ್ಕೆಗೆ ಮಾನದಂಡವಾದಂತಿದೆ.
– ಪಕ್ಷ ಗುರುತಿಸಿರುವ ಬಗ್ಗೆ ಏನೆನ್ನುತ್ತಿರಿ?
ಫಲಾಪೇಕ್ಷೆ ಇಲ್ಲದೆ ಸಮಾಜದ ಸೇವೆ ಮಾಡುತ್ತಿದ್ದರೆ ಒಂದು ದಿನ ಸಮಾಜ ನಮ್ಮನ್ನು ಗುರುತಿಸುತ್ತದೆ ಎನ್ನುವುದಕ್ಕೆ ಇದು ನಿದರ್ಶನ. ನಾವು ಮಾಡಿದ ಸಮಾಜ ಸೇವೆ ಒಂದಲ್ಲೊಂದು ದಿನ ಫಲ ಕೊಟ್ಟೇ ಕೊಡುತ್ತದೆ.
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.