Kalaburagi;ಅಕ್ರಮ ಮರಳುಗಾರಿಕೆ ಪ್ರಕರಣ: ಸಿಪಿಐ, ಪಿಎಸ್ಐ, ಪೇದೆ ಅಮಾನತು
ಸುಮ್ಮನೆ ಬಿಡುವುದಿಲ್ಲ, ಅಕ್ರಮ ಸಹಿಸಲ್ಲ: ಗುಡುಗಿದ ಶಾಸಕ ಡಾ.ಅಜಯಸಿಂಗ್
Team Udayavani, Jun 17, 2023, 8:59 PM IST
ಕಲಬುರಗಿ: ಜೇವರ್ಗಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳಗಾರಿಕೆ ಸಂಬಂಧ ನಿರ್ಲಕ್ಷ್ಯ ವಹಿಸಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಮೊದಲ ಕ್ರಮವಾಗಿದೆ. ಈ ಘಟನೆಯ ಹಿಂದೆ ಇರುವ ವರು ಯಾರೇ ಆಗಿರಲಿ, ಎಷ್ಟೇ ಬಲಾಢ್ಯವಾಗಿರಲಿ ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.ಶೀಘ್ರವೇ ಇಡೀ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಯೂ ನಡೆಸಲಾಗುವುದು ಎಂದು ಶಾಸಕ ಡಾ. ಅಜಯ ಸಿಂಗ್ ಉದಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಮರಳುಗಾರಿಕೆಗೆ ಪೇದೆ ಬಲಿ ಪ್ರಕರಣ: ಪ್ರಮುಖ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು
ಜೇವರ್ಗಿ ತಾಲೂಕಿನ ಹುಲ್ಲೂರು ಕ್ರಾಸ್ ಬಳಿಯಲ್ಲಿ ಗುರುವಾರ ಮರಳಿನ ಟ್ಯಾಕ್ಟರ್ ಹಾಯಿಸಿ ಪೇದೆ ಮಯೂರ್ ಬಲಿ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇವರ್ಗಿ ಸಿಪಿಐ, ನೇಲೋಗಿ ಪಿಎಸ್ಐ, ಎಸ್ಪಿ ಕರ್ತವ್ಯ ನಿರ್ವಹಿಸುವ ಪೇದೆಯೊಬರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಇಶಾಪಂತ್ ಹೇಳಿದ್ದಾರೆ.
ಮುಖ್ಯ ಪೇದೆ ಮಯೂರ್ ಬಲಿಯಾಗಿರುವ ಪ್ರಕರಣದಲ್ಲಿ ಜೇವರ್ಗಿ ಸಿಪಿಐ ಭೀಮನಗೌಡ ಬಿರಾದಾರ, ನೆಲೋಗಿ ಪಿಎಸ್ ಐ ಗೌತಮ್ ಹಾಗೂ ನೆಲೋಗಿ ಠಾಣೆಯಲ್ಲಿ ಎಸ್ಪಿ ಕರ್ತವ್ಯ ನಿರ್ವಹಿಸುವ ಪೇದೆ ರಾಜಶೇಖರ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.