ಮಣಿಪುರ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಮುಂದಾದ ಕನೇರಿ ಮಠ
ಖುದ್ದಾಗಿ ಮಣಿಪುರಕ್ಕೆ ತೆರಳಲಿರುವ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ
Team Udayavani, Aug 5, 2023, 7:55 PM IST
ಹುಬ್ಬಳ್ಳಿ: ಮಣಿಪುರದ ಗಲಭೆ ಹಿನ್ನೆಲೆಯಲ್ಲಿ ಸಂತ್ರಸ್ತರಾದ ಜನರಿಗೆ ಆಹಾರ ಸಾಮಗ್ರಿ ಇನ್ನಿತರ ನಿತ್ಯಾವಶ್ಯಕ ವಸ್ತುಗಳನ್ನು ಮನೆಮನೆಗೆ ತಲುಪಿಸಲು ಮಹಾರಾಷ್ಟ್ರದ ಕನೇರಿ ಮಠ ಮುಂದಾಗಿದ್ದು, ಇದಕ್ಕಾಗಿ ಕರ್ನಾಟಕದ ದಾನಿಗಳಿಂದ ಆರ್ಥಿಕ ನೆರವನ್ನು ಕೇಳಿದೆ.
ಕನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಆಗಸ್ಟ್ 9 ಇಲ್ಲವೇ 10 ಖುದ್ದಾಗಿ ಮಣಿಪುರಕ್ಕೆ ತೆರಳಲ್ಲಿದ್ದು ಅಲ್ಲಿನ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯ ಮಾಡಲಿದ್ದಾರೆ.
ಮಣಿಪುರದ ಗಲಭೆ ಹಿನ್ನೆಲೆಯಲ್ಲಿ ಸುಮಾರು 80 ಹಳ್ಳಿಗಳು ಸಂಪೂರ್ಣವಾಗಿ ಬೆಂಕಿಗೆಹುತಿಯಾಗಿದ್ದು ಅಲ್ಲಿನ ಸಾವಿರಾರು ಜನರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಕನಿಷ್ಠ ಊಟ ಮಾಡುವುದಕ್ಕೂ ಆಹಾರ ಧಾನ್ಯಗಳಿಲ್ಲದ ದಯನೀಯ ಸ್ಥಿತಿಯಲ್ಲಿ ದಿನದೊಡುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸ್ವಾಮೀಜಿಯವರು ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದ್ದಾರೆ.
ಮಣಿಪುರದ ಸಂತ್ರಸ್ತರಿಗೆ ಕನಿಷ್ಠ ಒಂದು ತಿಂಗಳ ಆಹಾರ ಧಾನ್ಯ ಹಾಗೂ ನಿತ್ಯಾವಶ್ಯಕ ವಸ್ತುಗಳನ್ನು ನೀಡಲು ನಿರ್ಧರಿಸಲಾಗಿದ್ದು ಆಹಾರಧಾನ್ಯಗಳನ್ನು ದೇಣಿಗೆ ಮೂಲಕ ಪಡೆದು ಇಲ್ಲಿಂದ ಅಲ್ಲಿಗೆ ತೆಗೆದುಕೊಂಡು ಹೋಗಲು ಕಷ್ಟದಾಯಕವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ದಾನಿಗಳು, ಶ್ರೀಮಠದ ಭಕ್ತರು ಕನಿಷ್ಠ 5 ರಿಂದ 6 ಸಾವಿರ ರೂಗಳನ್ನು ನೀಡಿದಲ್ಲಿ ಒಂದು ಕುಟುಂಬಕ್ಕೆ ಬೇಕಾದ ಆಹಾರ ಧಾನ್ಯಗಳನ್ನು ಕೊಡಿಸುವದಾಗಿ ಸ್ವಾಮೀಜಿಯವರು ತಿಳಿಸಿದ್ದಾರೆ.
ಮಣಿಪುರದಲ್ಲಿ ಸುಮಾರು 80 ಗ್ರಾಮಗಳು ಬಹುತೇಕವಾಗಿ ಸುತ್ತು ಹೋಗಿರುವ ಹಿನ್ನೆಲೆಯಲ್ಲಿ ಅಂದಾಜು 60,000ಕ್ಕೂ ಅಧಿಕ ಜನ ವಿವಿಧ ಕಡೆಯ ನಿರಾಶ್ರಿತ ಕ್ಯಾಂಪ್ ಗಳಲ್ಲಿ ಉಳಿದುಕೊಂಡಿದ್ದು ಇನ್ನೂ ಅನೇಕರಿಗೆ ಆ ಸೌಲಭ್ಯವು ಇಲ್ಲವಾಗಿದೆ.
ಸಂತ್ರಸ್ತರಿಗೆ ಕನಿಷ್ಠ ಒಂದು ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳು ಹಾಗೂ ನಿತ್ಯಾವಶ್ಯಕ ವಸ್ತುಗಳನ್ನು ನೀಡುವ ನಿಟ್ಟಿನಲ್ಲಿ ಶ್ರೀ ಅದೃಶ್ಯ ಕಾಣಿಸಿದ್ದೇಶ್ವರ ಸ್ವಾಮೀಜಿ ಅವರು ಸುಮಾರು ಏಳು ಎಂಟು ಜನ ಮಠಾಧೀಶರೊಂದಿಗೆ ಅಲ್ಲಿಗೆ ತೆರಳಲು ಮುಂದಾಗಿದ್ದಾರೆ.
ಮಣಿಪುರದ ಸಂತ್ರಸ್ತರಿಗೆ ನೆರವು ದೊರೆ ದೊರಕುವ ನಿಟ್ಟಿನಲ್ಲಿ ದಾನಿಗಳು ಶ್ರೀ ಮಠಕ್ಕೆ ಹಣದ ರೂಪದಲ್ಲಿ ಅದನ್ನು ಪೂರ್ಣ ಪ್ರಮಾಣದಲ್ಲಿ ಸಂತ್ರಸ್ತರಿಗೆ ತಲುಪಿಸಲಾಗುತ್ತದೆ.
ಈ ಹಿಂದೆ ನೇಪಾಳ,ಕೇರಳ, ಕರ್ನಾಟಕ, ಮಹಾರಾಷ್ಟ್ರ ಇನ್ನಿತರ ಕಡೆ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಶ್ರೀಮಠದಿಂದ ನೆರವು ಕಲ್ಪಿಸುವ ಕಾರ್ಯವನ್ನು ಖುದ್ದಾಗಿ ಕೈಗೊಂಡಿದ್ದರು ಇದೀಗ ಮಣಿಪುರದ ಸಂತ್ರಸ್ತರ ನೆರವಿಗೂ ಮುಂದಾಗಿದ್ದಾರೆ ದಾನಿಗಳು ಇದಕ್ಕೆ ಕೈಜೋಡಿಸಬೇಕಾಗಿದೆ.
ಮಣಿಪುರದ ಸಂತ್ರಸ್ತರ ಸಂಕಷ್ಟ ಸ್ಥಿತಿಯನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದ ಸ್ಥಿತಿ ಇದ್ದು ಅಲ್ಲಿಗೆ ತುರ್ತು ನೆರವಿನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನೆರವು ನೀಡುವ ಹಾಗೂ ಪರಿಹಾರ ಸಾಮಗ್ರಿಗಳು ಸಮರ್ಪಕವಾಗಿ ತಲುಪುವಂತಾಗುವ ನಿಟ್ಟಿನಲ್ಲಿ ಏಳೆಂಟು ಜನ ಮಠಾಧೀಶರು ಅಲ್ಲಿಗೆ ತೆರಳಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಸುತ್ತೂರು ಸ್ವಾಮೀಜಿಯವರು ಆದಿಚುಂಚನಗಿರಿ ಸ್ವಾಮೀಜಿಯವರು ಸೇರಿದಂತೆ ವಿವಿಧ ಮಠಾಧೀಶರ ಸಂಪರ್ಕ ಕಾರ್ಯವನ್ನು ಕೈಗೊಂಡಿರುವದಾಗಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ತಿಳಿಸಿದ್ದಾರೆ.
ದಾನಿಗಳು ಕನೇರಿಮಠದ ಖಾತೆಗೆ ಹಣ ನೀಡಬಹುದಾಗಿದೆ.
Account Name SIDDHAGIRI GURUKUL FOUNDATION
C/A NO – 6134137407
IFSC CODE IDIB000K737
BR – SHAHUPURI STATION ROAD KOLHAPUR
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.