ಕಾಣಿಯೂರು ಕಾರು ಹೊಳೆಗೆ ಬಿದ್ದ ಪ್ರಕರಣ: ಕ್ಷಣಕ್ಕೊಂದು ತಿರುವು; ಎಲ್ಲಿದ್ದಾರೆ ಯುವಕರಿಬ್ಬರು?
ಯುವಕರು ಕಾರಿನಲ್ಲೂ ಇಲ್ಲ, ಹೊಳೆಯಲ್ಲೂ ಇಲ್ಲ!
Team Udayavani, Jul 10, 2022, 4:36 PM IST
ಕಾಣಿಯೂರು: ಮಂಜೇಶ್ವರ-ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಬೈತಡ್ಕ ಮಸೀದಿಯ ಸಿಸಿ ಕೆಮರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದ್ದು, ಇದನ್ನು ಆಧರಿಸಿ, ಸ್ಥಳೀಯ ಪೊಲೀಸರು, ಸಾರ್ವಜನಿಕರು, ಅಗ್ನಿಶಾಮಕ ದಳ ಮತ್ತು ಸವಣೂರಿನ ನಾಲ್ವರು ಡೈವರ್‌ಗಳಿಂದ ಶೋಧ ಕಾರ್ಯ ನಡೆಸಿ, ಮಧ್ಯಾಹ್ನ ಕಾರನ್ನು ಹೊರ ತೆಗೆಯಲಾಗಿದೆ.
ಇದೀಗ ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಯುವಕರಿಬ್ಬರು ಹೊಳೆಯಲ್ಲೂ ಸಿಗದೇ, ಕಾರಿನಲ್ಲೂ ಪತ್ತೆಯಾಗಿಲ್ಲ. ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂಬ ಅನುಮಾನ ಒಂದೆಡೆಯಾದರೆ ಅಪಘಾತದ ಬಳಿಕ ಮನೆಯವರಿಗೆ ಕರೆ ಮಾಡಿದ್ದಾರೆ ಎಂಬ ಮಾಹಿತಿ ಇನ್ನಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಪ್ರಕರಣದ ಬೆನ್ನತ್ತಿರುವ ಪೊಲೀಸರಿಗೆ ಅಪಘಾತದ ಬಳಿಕ ಈ ಯುವಕರು ಅವರ ಮನೆಯವರಿಗೆ ಕರೆ ಮಾಡಿರುವುದು ತಿಳಿದುಬಂದಿದೆ. ಕರೆ ಮಾಡಿದ್ದ ಆ ನಂಬರ್ ಟ್ರೇಸ್ ಮಾಡುತ್ತಿರುವ ಪೊಲೀಸರಿಗೆ ಈ ಇಬ್ಬರು ಇಲ್ಲೇ ಎಲ್ಲೋ ಇರಬಹುದು ಎಂದು ಶಂಕಿಸಿದ್ದಾರೆ.
ಅಂದರೆ ಇಬ್ಬರು ಅಪಘಾತದ ವೇಳೆ ಕಾರಿನಲ್ಲಿದ್ದಾರಾ ಅಥವಾ ನಂತರ ತಪ್ಪಿಸಿಕೊಂಡು ಹೊರ ಬಂದಿದ್ದಾರೆಯೇ ಎಂಬುದು ಮಾತ್ರ ಯುವಕರು ಸಿಕ್ಕ ಬಳಿಕವೇ ಉತ್ತರ ಸಿಗಲಿದೆ. ಆದರೆ ಈ ಇಬ್ಬರು ಭಯದಿಂದ ಎಲ್ಲಾದರೂ ಅಡಗಿಕೊಂಡಿರಬಹುದು ಎಂದೂ ಹೇಳಲಾಗುತ್ತಿದ್ದು, ಸದ್ಯ ನಂಬರ್ ಟ್ರೇಸ್ ಮಾಡಿರುವ ಪೊಲೀಸರಿಗೆ ಸ್ಥಳದ ಕುರಿತು ಮಾಹಿತಿ ಸಿಕ್ಕಿದೆ ಎಂದು ತಿಳಿದುಬಂದಿದೆ. ಸದ್ಯ ತನಿಖೆ ಚುರುಕುಗೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.