ಗ್ರಾಹಕರ ಕೂಟದ ಕನ್ನಡ ಜಾಗೃತಿ ಪಾಠ
Team Udayavani, Nov 7, 2017, 12:33 PM IST
ಕನ್ನಡವನ್ನು ವ್ಯಾವಹಾರಿಕವಾಗಿ ಜೀವಂತವಾಗಿರಿಸುವಲ್ಲಿ ಕನ್ನಡ ಗ್ರಾಹಕರ ಕೂಟದ ಉಪಕಾರ ದೊಡ್ಡದು. ಯಾವುದೇ ಗ್ರಾಹಕ ಒಂದು ವಸ್ತುವನ್ನು ದುಡ್ಡು ಕೊಟ್ಟು ಖರೀದಿಸುತ್ತಾನೆ ಅಂದ್ರೆ, ಆ ಸಂಸ್ಥೆ ಆತನಿಗೆ ಪ್ರಾದೇಶಿಕ ಭಾಷೆಯಲ್ಲಿ ಸೇವೆ ಒದಗಿಸಬೇಕು. ಆದರೆ, ಅನೇಕ ಸಂಸ್ಥೆಗಳು ಹಾಗೆ ಮಾಡುವುದಿಲ್ಲ. ಇಂಥ ವೇಳೆ ಆ ಸಂಸ್ಥೆಗೂ,
ಕನ್ನಡ ಗ್ರಾಹಕನಿಗೂ ಕೊಂಡಿಯಾಗಿ ಕೆಲಸ ಮಾಡುತ್ತಾ, ಸಂಸ್ಥೆಗೆ ಕನ್ನಡದ ಮಾರುಕಟ್ಟೆಯನ್ನು ತಿಳಿಸುತ್ತಾ, ಆದಷ್ಟು ಕನ್ನಡದಲ್ಲಿಯೇ ವ್ಯವಹರಿಸುವಂತೆ ಜಾಗೃತಿ ಮೂಡಿಸುವ ಕೆಲಸವನ್ನು ಈ ಕೂಟ ಮಾಡುತ್ತಿದೆ. ಇದರ ಸಂಚಾಲಕರಲ್ಲಿ ಒಬ್ಬರಾದ ಜಯಂತ್ ಸಿದ್ಮಲ್ಲಪ್ಪ, ಕನ್ನಡ ಗ್ರಾಹಕ ಸೇವೆಗಾಗಿ ಹಲವು ಮಹತ್ವದ ಹೆಜ್ಜೆ ಇಟ್ಟವರು. ಇವರು ಶಿವಮೊಗ್ಗ ಮೂಲದವರು.
ಎಚ್‌ಡಿಎಫ್ಸಿ, ಸಿಟಿ ಬ್ಯಾಂಕಿನ ಎಟಿಎಂನಲ್ಲಿ ಇಂದೇನಾದರೂ ಕನ್ನಡ ಕಾಣಿಸಿಕೊಳ್ಳುತ್ತಿದೆಯೆಂದಾದರೆ, ಅದು ಇದೇ ಕೂಟದ ಹೋರಾಟದ ಫಲ. “ಕನ್ನಡದಲ್ಲಿಯೇ ಸೇವೆ ಕೊಡಿ ಎಂದು ಅಭಿಯಾನ ಶುರುಮಾಡಿದಾಗ, ಆ ಸಂಸ್ಥೆಯವರು ಗ್ರಾಹಕ ಸೇವಾ ಕೇಂದ್ರ ತೆರೆದು, ಕನ್ನಡದವರನ್ನೇ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ’ ಎನ್ನುತ್ತಾರೆ ಜಯಂತ್.
ಕೂಟದ ಈ ಪ್ರಯತ್ನದಿಂದ ಅಮೇಜಾನ್.ಇನ್‌ಗೂ ಕನ್ನಡ ಪ್ರವೇಶಿಸಿದೆ. ಇಂಥ ಕನ್ನಡೀಕರಣ ಕೆಲಸಕ್ಕಾಗಿ ನಾಡಿನಾದ್ಯಂತ ಸಹಿ ಚಳವಳಿಗಳೂ ನಡೆಯುತ್ತವೆ. ಜಯಂತ್ ಈ ಕೂಟದ ಅಭಿಯಾನವಾಗಿ “ಕಲಿ ಕನ್ನಡ’ವನ್ನು ಆರಂಭಿಸಿದವರು. ಟ್ವಿಟ್ಟರಿನಲ್ಲಿ ನಡೆದ ಈ ಅಭಿಯಾನ ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಗೊತ್ತಿದ್ದವರು ನೆರವಾಗುತ್ತಿದ್ದರು. ಅಂದರೆ, ಈ ಕೂಟದಿಂದ ಯಾವುದೇ ತರಗತಿಗಳು ಆಯೋಜಿಸುವುದಿಲ್ಲ.
ಆದರೆ, ಭಾಷೆ ಗೊತ್ತಿಲ್ಲದವರಿಗೆ, ಕನ್ನಡ ತರಗತಿ ಎಲ್ಲಿ ನಡೆಯುತ್ತೆ, ಯಾರು ನಡೆಸುತ್ತಾರೆ ಎನ್ನುವ ಸಂಗತಿಯನ್ನು ಈ ಕೂಟ ತಲುಪಿಸುತ್ತದೆ. “ಅಂಗಡಿಗಳಲ್ಲಿ ಕನ್ನಡ ನುಡಿ’ ಎಂಬ ಫೇಸ್‌ಬುಕ್ ಪುಟವನ್ನೂ ತೆರೆಯಲಾಯಿತು. ಅದು ಕೂಡ ಗ್ರಾಹಕರಿಗೆ ಹಲವು ರೀತಿಯಲ್ಲಿ ಉಪಯೋಗವಾಯಿತು. ಈ ಕೂಟದಲ್ಲಿ ಹಲವು ಚಳವಳಿಗಳನ್ನು ಹುಟ್ಟುಹಾಕಿದ ವ್ಯಕ್ತಿಗಳು ಬಹಳಷ್ಟು ಮಂದಿಯಿದ್ದಾರೆ.
* ಕೀರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.