ಕನ್ನಡ ಕಲಿತ ತಮಿಳುನಾಡಿನ ಚಿನ್ನಮ್ಮ, 3ನೇ ಕ್ಲಾಸ್ ಪಾಸ್
ಜಯಲಲಿತಾ ಅತ್ಯಾಪ್ತೆ ಶಶಿಕಲಾ ನಟರಾಜನ್ ಶಿಕ್ಷಾವಧಿ ಜನವರಿ ಅಂತ್ಯಕ್ಕೆ ಮುಕ್ತಾಯ ,ನಿತ್ಯಕನ್ನಡ ಪತ್ರಿಕೆ ಓದುವ ಅಭ್ಯಾಸ
Team Udayavani, Dec 9, 2020, 12:32 PM IST
ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಜೈಲು ವಾಸ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ. ಜಯಲಲಿತಾ ಅತ್ಯಾಪ್ತೆ ಶಶಿಕಲಾ ನಟರಾಜನ್(ಚಿನ್ನಮ್ಮ)ಅವರ ಶಿಕ್ಷಾವಧಿ ಜನವರಿ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ.
ಈ ನಡುವೆ ಸಜಾ ಬಂಧಿಯಾಗಿ ನಾಲ್ಕು ವರ್ಷಗಳ ಜೈಲಿನಲ್ಲಿದ್ದ “ಚಿನ್ನಮ್ಮ’ ಸುಮ್ಮನೆ ಕೂತಿರಲಿಲ್ಲ. ಬದಲಿಗೆ ಕನ್ನಡ ಕಲಿತಿದ್ದಾರೆ. ತೋಟಗಾರಿಕೆ, ಕರಕುಶಲ ಕಲೆಗಳನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಮೂರನೇ ತರಗತಿ ಉತ್ತೀರ್ಣ: ಜೈಲಿನಲ್ಲಿ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಉದ್ದೇಶದಿಂದ ನಲಿ-ಕಲಿ ಯೋಜನೆ ಅಡಿಯಲ್ಲಿ ನಿತ್ಯ ಶಿಕ್ಷಕರು ಬರುತ್ತಾರೆ. ಅವರ ಮೂಲಕ ಕನ್ನಡ ಭಾಷೆಕಲಿತಿರುವ ಚಿನ್ನಮ್ಮ, ಕನ್ನಡ ಬರೆಯುವುದು, ಓದುವುದನ್ನು ಅಭ್ಯಸಿಕೊಂಡಿದ್ದಾರೆ. ಕನ್ನಡದಲ್ಲಿ ಯಾರೇ ಮಾತನಾಡಿದರೂ ಅದನ್ನು ಅರ್ಥೈಸಿಕೊಂಡುಕನ್ನಡದಲ್ಲೇ ಉತ್ತರ ನೀಡುತ್ತಾರೆ. ಈ ಮೂಲಕ ಕನ್ನಡದ ಮೂರನೇ ತರಗತಿ ಉತ್ತೀರ್ಣರಾಗಿದ್ದಾರೆ.
ಪ್ರತಿಭಾ ಪ್ರದರ್ಶನ: ಇದರೊಂದಿಗೆ ಅವರ ಸಂಬಂಧಿ ಜೆ.ಇಳವರಸಿ ಕೂಡ ಕನ್ನಡ ಭಾಷೆಯನ್ನು ಕರಗತ ಮಾಡಿಕೊಂಡು, ಸ್ಪಷ್ಟವಾಗಿ ಮಾತನಾಡುತ್ತಾರೆ ಹಾಗೂ ನಿತ್ಯ ದೇವರ ಹಾಡುಗಳನ್ನು ಹಾಡುತ್ತಾರೆ. ವಿಶೇಷ ಕಾರ್ಯಕ್ರಮಗಳಲ್ಲೂ ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಾರೆ. ಕನ್ನಡ ಬರೆಯುವುದನ್ನು ಕಲಿತುಕೊಂಡಿದ್ದಾರೆ.
ಇದನ್ನೂ ಓದಿ : ಭೂಸುಧಾರಣ ಕಾಯ್ದೆಯಲ್ಲಿ ಮಾರಕವಾದ ಅಂಶವಾದರೂ ಯಾವುದು? ಪ್ರತಿಭಟನಾಕಾರರಿಗೆ HDK ಪ್ರಶ್ನೆ
ತರಕಾರಿ ಬೆಳೆದ ಶಶಿಕಲಾ: ಅಲ್ಲದೆ, ಒಂದು ಕಾಲದಲ್ಲಿ ಚಿನ್ನಮ್ಮ ಕೈಗೊಬ್ಬ, ಕಾಲಿಗೊಬ್ಬ ಆಳುಕಾಳು ಇಟ್ಟುಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರುಆದರೆ ಈಗ ಸಾಮಾನ್ಯ ಮಹಿಳೆಯಂತೆ ಟೈಲರಿಂಗ್, ಎಂಬ್ರಾಯಿಡರಿ, ಕಂಪ್ಯೂಟರ್, ಕನ್ನಡ ಕಲಿಯುತ್ತ, ಆಕರ್ಷಕವಾದ ಬಳೆಗಳು, ಕಿವಿಯೋಲೆತಯಾರಿಸಿದ್ದಾರೆ. ತೋಟದಲ್ಲಿ ಸಹ ಕೈದಿಗಳ ಜತೆ ಸೇರಿ ಕಲ್ಲಂಗಡಿ, ಅಣಬೆ, ಸೊಪ್ಪು, ತರಕಾರಿ ಬೆಳೆದಿದ್ದಾರೆ.
ನಿತ್ಯ ಕನ್ನಡ ಪತ್ರಿಕೆ ಓದುವ ಅಭ್ಯಾಸ: 2016ರಲ್ಲಿ ಜಯಲಲಿತಾ ಅವರು ನಿಧನವಾದ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಅವರು, ನಿಧಾನವಾಗಿ ಚೇತರಿಸಿಕೊಂಡರು. ಎಲ್ಲರೊಂದಿಗೆ ಬೆರೆಯುತ್ತ ತೋಟಗಾರಿಕೆ, ಕರಕುಶಲ ಕಲೆಗಳಲ್ಲಿ ಆಸಕ್ತಿಹೊಂದಿದರು. ನಿತ್ಯ ಬೆಳಗ್ಗೆ 6.30ರ ಸುಮಾರಿಗೆಏಳುವ ಅವರು, ತಮ್ಮ ಕೊಠಡಿಯ ಮುಂಭಾಗದಲ್ಲಿರುವ ಪಡಸಾಲೆಯನ್ನು ಗುಡಿಸುತ್ತಾರೆ. ಬಳಿಕ ಬ್ಯಾರಕ್ ಕೊಠಡಿಯಲ್ಲಿನ ದೇವರ ಪೂಜೆ ನೆರವೇರಿಸುತ್ತಾರೆ. ನಂತರ ತಮ್ಮ ಸಂಬಂಧಿ ಇಳವರಸಿ ಹಾಗೂ ಇತರ ಜತೆ ಸೇರಿ ಉಪಾಹಾರ ಸೇವಿಸಿ ಬ್ಯಾರಕ್‌ಗೆ ಮರಳುತ್ತಾರೆ. ಈ ಮಧ್ಯೆ ಜೈಲಿನ ಶಾಲೆಗೆ ಹೋಗಿ ಕಂಪ್ಯೂಟರ್, ಕನ್ನಡ ಕಲಿಕೆ ಹಾಗೂ ದಿನಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ವಿಶೇಷ ಬಳೆ, ಕಿವಿಯೋಲೆ: ಶಶಿಕಲಾ ಅವರಿಗೆ ತೋಟಗಾರಿಕೆ ಜತೆಗೆ ಬಳೆಗಳು, ಕಿವಿಯೋಲೆತಯಾರಿಸುವುದೆಂದರೆ ಬಹಳ ಇಷ್ಟ. ಹೀಗಾಗಿ ವಿಭಿನ್ನ, ವಿಶೇಷ ರೀತಿಯ ಬಳೆಗಳು, ಕಿವಿಯೊಳೆ ತಯಾರಿಸುತ್ತಾರೆ. ಬೇರೆಯವರಿಗೂ ಕಲಿಸಿಕೊಡುತ್ತಿದ್ದಾರೆ. ಇದರೊಂದಿಗೆ ಸಜಾಬಂಧಿಗಳಿಗೆ ಟೈಲರಿಂಗ್ ಮತ್ತು ಇನ್ನಿತರ ಕೆಲಸಗಳ ಬಗ್ಗೆ ಕಾರಾಗೃಹದಲ್ಲಿ ತರಬೇತಿ ನೀಡಲಾಗುತ್ತದೆ. ಶಶಿಕಲಾ ಅವರು ಜೈಲಿನಲ್ಲಿ ನಿತ್ಯ ಎರಡು ತಾಸು ಟೈಲರಿಂಗ್ ಮತ್ತು ಕಸೂತಿ (ಎಂಬ್ರಾಯಿಡರಿ) ಮಾಡುವ ಬಗ್ಗೆ ತರಬೇತಿ ಪಡೆಯುತ್ತಿದ್ದರು. ಕೆಲವು ಬಟ್ಟೆಗಳಿಗೆ ಕಸೂತಿ ಹಾಕಿದ್ದಾರೆ. ಆಕರ್ಷಕ ಬಳೆಗಳು, ಕಿವಿಯೋಲೆ ತಯಾರು ಮಾಡಿ ಸಂಭ್ರಮ ಪಡುತ್ತಿದ್ದರು.
ಚಿಪ್ಪು ಅಣಬೆ ಬೇಸಾಯ : ಶಶಿಕಲಾ ಅವರಿಗೆಅಣಬೆ ಬೆಳೆಯುವುದು ಎಂದರೆ ಬಹಳ ಇಷ್ಟ. ಅವರೇ ಹೇಳಿಕೊಂಡಂತೆ ಮೊದಲಿನಿಂದಲೂ ಅಣಬೆ ಕೃಷಿಯಲ್ಲಿ ಬಹಳ ಆಸಕ್ತಿ. ಹೀಗಾಗಿ ತಾವೇಕೊಠಡಿಯೊಂದರಲ್ಲಿ ಸಣ್ಣ ಕುಂಡಗಳಲ್ಲಿ ಚಿಪ್ಪು ಅಣಬೆ ಬೆಳೆದಿದ್ದರು. ಜತೆಗೆ ಮಹಿಳಾ ಬ್ಯಾರಕ್ ಪಕ್ಕದಲ್ಲಿರುವ ತೋಟದಲ್ಲಿ ಪ್ರತ್ಯೇಕವಾಗಿ ಕಲ್ಲಂಗಡಿ ಬೆಳೆಯುತ್ತಿದ್ದರು. ಈ ಮೂಲಕ ಹಣ ಕೂಡ ಗಳಿಸಿದ್ದಾರೆ.
ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.