ಕನ್ನಡ ಭಾಷೆಯ ಮೇಲೆ ಸಾಧಕರ ಒಲವು
Team Udayavani, Nov 1, 2018, 9:02 AM IST
ವೈವಿಧ್ಯದಿಂದಾಗಿ ಕನ್ನಡ ಅಂದರೆ ಇಷ್ಟ
ತಾಂತ್ರಿಕ ಯುಗದಲ್ಲಿ ಕನ್ನಡದ ಜತೆಗೆ ಇಂಗ್ಲಿಷ್ ಭಾಷೆ ಹೆಚ್ಚು ಬಳಕೆ ಮಾಡುತ್ತೇವೆ. ದಿನ ಬಳಕೆ ಭಾಷೆಯಲ್ಲಿ ಬಳಸುವ ಇಂಗ್ಲಿಷ್ ಹಾಗೂ ಇತರೆ ಪದಗಳ ಬದಲಾಗಿ, ಕನ್ನಡವನ್ನೇ ಪ್ರಧಾನವಾಗಿ ಬಳಸುವಂತಾದರೆ, ಕನ್ನಡ ಇನ್ನಷ್ಟು ಗಟ್ಟಿಯಾಗುತ್ತದೆ. ರಾಜ್ಯದ ಖಾಸಗಿ ಶಾಲೆಗಳಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಕಲಿಸುವಂತಾಗಬೇಕಿತ್ತು. ದುರದೃಷ್ಟವಶಾತ್ ಆ ಅವಕಾಶ ಕಲ್ಪಿಸಿಲ್ಲ ಎಂದು ಬೆಂಗಳೂರಿನ ದಕ್ಷಿಣ ವಲಯ ಉಪ ಪೊಲೀಸ್ ಆಯುಕ್ತ. ಅಣ್ಣಾಮಲೈ ಹೇಳಿದರು. ಶಿವಮೊಗ್ಗದಲ್ಲಿ ಮೂರು ತಿಂಗಳ ಕಾಲ ಪ್ರೊಬೆಷನರಿ ಅವಧಿಯಲ್ಲಿ ಶಾರದಾಪ್ರಸಾದ್ ಎಂಬವರ ಬಳಿ ಕನ್ನಡ ಕಲಿಯುತ್ತಿದ್ದೆ. ರಾಜ್ಯ ಸರಕಾರದ “ತಿಳಿ ಕನ್ನಡ’ ಪುಸ್ತಕ ಕೊಟ್ಟು ಕಲಿಯಲು ಸೂಚಿಸುತ್ತಿದ್ದರು. ಆರಂಭದಲ್ಲಿ ಕನ್ನಡದ ವ್ಯಾಕರಣ, ಪದಗಳ ಕಲಿಕೆ ಕಬ್ಬಿಣದ ಕಡಲೆ ಎಂಬಂತಾಗಿತ್ತು. ಈಗ ಕನ್ನಡ ಮಾತನಾಡಲು, ಓದಲು, ಬರೆಯಲು ಬರುತ್ತದೆ. ಈಗಲೂ ಕನ್ನಡ ಕಲಿಯುತ್ತಿದ್ದೇನೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕದಲ್ಲಿ ಕನ್ನಡ ಭಾಷೆ ಬಳಕೆಯಲ್ಲಿ ವ್ಯತ್ಯಾಸವಿದೆ. ಅದೇ ನನಗೆ ಕನ್ನಡ ಭಾಷೆಯ ಮೇಲಿನ ಪ್ರೀತಿ ಹೆಚ್ಚಾಗಲು ಕಾರಣ.
ಕನ್ನಡ ಕವಿಗೆ ಶರಣಾದ ಹಿಂದಿ ಕವಿ
ಕರ್ನಾಟಕದಲ್ಲಿ ಕನ್ನಡ ಇನ್ನಷ್ಟು ಅಭಿವೃದ್ಧಿ ಹೊಂದಲು ರಾಜ್ಯದ ಎಲ್ಲ ಮಾದರಿಯ ಶಾಲೆಗಳಲ್ಲಿ 5ನೇ ತರಗತಿವರೆಗೆ ಕನ್ನಡ ಕಲಿಕೆ ಕಡ್ಡಾಯ ಮಾಡಬೇಕು. ಜತೆಗೆ ಕನ್ನಡದಿಂದ ಬೇರೆ ಭಾಷೆಗೆ, ಬೇರೆ ಭಾಷೆಯಿಂದ ಕನ್ನಡಕ್ಕೆ ಸಾಹಿತ್ಯಗಳು ಹಾಗೂ ಇತರ ಪುಸ್ತಕಗಳ ಅನುವಾದ ದೊಡ್ಡ ಮಟ್ಟದಲ್ಲಿ ಆಗಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ| ಅಜಯ್ ಕುಮಾರ್ ಸಿಂಗ್ ಹೇಳಿದರು. ರಾಜ್ಯ ಸರಕಾರದ ಅಧೀನದಲ್ಲಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಕುರಿತು ಉತ್ತಮ ಕೆಲಸ ಮಾಡುತ್ತಿವೆ. ಇದು ಇನ್ನಷ್ಟು ಹೆಚ್ಚಬೇಕು. ಜತೆಗೆ ಬೆಂಗಳೂರಿನಲ್ಲಿರುವ ಪರಭಾಷಿಕರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಹೆಚ್ಚು ಅಭಿಮಾನ, ಪ್ರೀತಿ ಹೆಚ್ಚಿಸುವ ಕುರಿತು ಕೆಲ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕನ್ನಡ ಭಾಷೆಯನ್ನು ಇನ್ನಷ್ಟು ಬೆಳೆಸಬೇಕು.
ಮಕ್ಕಳಿಗೂ ಕನ್ನಡ ಕಲಿಸಿದ ಅಧಿಕಾರಿಣಿ
ಕನ್ನಡ ಭಾಷೆಯ ಅಧ್ಯಯನ ಜತೆಗೆ ಕನ್ನಡ ಪದಬಳಕೆಗೆ ಪೂರಕವಾಗುವಂತೆ ವರನಟ ಡಾ| ರಾಜ್‌ಕುಮಾರ್ ಅಭಿನಯದ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಿದ್ದರಿಂದ ಅಲ್ಪಾವಧಿಯಲ್ಲಿ ಕನ್ನಡ ಕಲಿಯಲು ಸಾಧ್ಯವಾಯಿತು. ಈಗ ಮನೆಯಲ್ಲಿ ಮಕ್ಕಳಿಗೂ ಕನ್ನಡ ಕಲಿಸುತ್ತಿದ್ದೇವೆ. ಅವರು ಕೂಡ ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಮನೆಯ ವ್ಯವಹಾರದ ಭಾಷೆಯೇ ಕನ್ನಡವಾಗಿಬಿಟ್ಟಿದೆ. ಮಕ್ಕಳಿಗೆ ತಂತ್ರಾಂಶದಿಂದ ಮಾತ್ರವಲ್ಲದೆ, ಸ್ನೇಹಿತರ ಮೂಲಕವೂ ಕನ್ನಡ ಬಹುಬೇಗ ಕಲಿಸಬಹುದು. ಅಧಿಕಾರಿಗಳು ಜನರೊಂದಿಗೆ ಹೆಚ್ಚು ವ್ಯವಹರಿಸುವುದರಿಂದ ಕನ್ನಡ ಕಲಿಯುವುದು ಅನಿವಾರ್ಯ ಎನ್ನುತ್ತಾರೆ ಐಎಎಸ್ ಅಧಿಕಾರಿ ಸಿ. ಶಿಖಾ. ಮಧ್ಯಪ್ರದೇಶದ ಭೋಪಾಲ ಮೂಲದವರಾದ ಶಿಖಾ ಅವರು 2004 ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಸದ್ಯ ಪಿಯು ಇಲಾಖೆ ನಿರ್ದೇಶಕಿ ಹಾಗೂ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶುಭಾಶಯ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಹಿರಿಯ ವಿಜ್ಞಾನಿ ಪ್ರೊ| ಸಿ.ಎನ್.ಆರ್.ರಾವ್ ಅವರು ಕನ್ನಡಿಗರು ಎಂಬುದು ಹೆಮ್ಮೆಯ ವಿಚಾರ. ಅವರು ಮೂಲತಃ ಚಿಕ್ಕಬಳ್ಳಾಪುರದ ಚಿಂತಾಮಣಿಯವರು. ರಾಜ್ಯೋತ್ಸವ ಸಮಯದಲ್ಲಿ ಅವರೇ ಮಾತನಾಡಿದ್ದಾರೆ.
ರಾಜ್ಯದ ಜತೆಗೆ ಕನ್ನಡ ರಾಜ್ಯೋತ್ಸವ ಶುಭಾಶಯಗಳು. ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ನನಗೆ ಕನ್ನಡದಲ್ಲಿ ಮಾತನಾಡುವುದೆಂದರೆ ಅಚ್ಚುಮೆಚ್ಚು .ವಿಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರು ಅತ್ಯುತ್ತಮ ಸಾಧನೆ ಮಾಡಿದ್ದು, ಸರಕಾರದಿಂದಲೂ ವಿಜ್ಞಾನ ಕ್ಷೇತ್ರಕ್ಕೆ ಉತ್ತಮ ಬೆಂಬಲ ದೊರೆಯುತ್ತಿದೆ. ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಇದರೊಂದಿಗೆ ರಾಜ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಅನುಕೂಲವಾಗುವಂತೆ ವಿಷನ್ ಗ್ರೂಪ್ ಆನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆಯ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಜತೆಗೆ ರಾಜ್ಯ ಸರಕಾರ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಬೆಂಬಲ ನೀಡುತ್ತಿದೆ.
ಕನ್ನಡ ಕ್ರೀಡಾಳುಗಳಿಗೆ ಸಹನಾ ಕುಮಾರಿ ಬೆಂಬಲ
ಕರ್ನಾಟಕದಲ್ಲಿ ಹುಟ್ಟಿರುವುದಕ್ಕೆ ನಮಗೆ ಹೆಮ್ಮೆ ಇದೆ. ಆದರೆ ರಾಜ್ಯ ಸರಕಾರ ಕ್ರೀಡಾಪಟುಗಳನ್ನು ನಡೆಸಿಕೊಳ್ಳುವ ರೀತಿ ನೋಡಿದರೆ ತುಂಬಾ ಬೇಸರವಾಗುತ್ತದೆ ಎಂದು ಒಲಿಂಪಿಯನ್ ಹೈಜಂಪ್ ತಾರೆ ಸಹನಾ ಕುಮಾರಿ ಬೇಸರ ವ್ಯಕ್ತಪಡಿಸಿದ್ದಾರೆ. ಸರಕಾರ ಕ್ರೀಡಾಪಟುಗಳಿಗೆ ನೀಡಬೇಕಾಗಿರುವ ನಗದು ಪುರಸ್ಕಾರವನ್ನು ಇನ್ನೂ ಬಾಕಿ ಉಳಿಸಿಕೊಂಡಿರುವುದು ವಿಷಾದನೀಯ. ಅಲ್ಲದೆ ಸರಕಾರ ಪದಕ ಗೆದ್ದ ಕ್ರೀಡಾಪಟು ಗಳನ್ನು ಹುಡುಕಿ ಗುರುತಿಸಬೇಕು. ಕ್ರೀಡಾಪಟುಗಳೇ ಸಮ್ಮಾನಕ್ಕಾಗಿ ಅರ್ಜಿ ಸಲ್ಲಿಸುವ ನಿಯಮವನ್ನು ತೆಗೆದು ಹಾಕಬೇಕು ಎನ್ನುತ್ತಾರೆ.
ಕ್ರಿಕೆಟ್‌ನಲ್ಲಿ ಕನ್ನಡ ಪ್ರತಿಭೆ
ರಾಜ್ಯದ ಜನತೆಗೆ ರಾಜ್ಯೋತ್ಸವ ಹೊಸ ಹರುಷವನ್ನು ತರಲಿ. ರಾಜ್ಯ ಕ್ರಿಕೆಟಿಗರು ಅತ್ಯುತ್ತಮ ಪ್ರದರ್ಶನ ನೀಡುವಂತಾಗಲಿ. ಸದ್ಯ ರಣಜಿಗೆ ಸಿದ್ಧವಾಗುತ್ತಿರುವ ಆಟಗಾರರಿಗೆ ಒಳಿತಾಗಲಿ ಎಂದು ಕನ್ನಡದ ಖ್ಯಾತ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. ರಾಜ್ಯದಲ್ಲಿ ರಾಹುಲ್, ಕರುಣ್ ನಾಯರ್, ಮನೀಶ್ ಪಾಂಡೆ ಹಾಗೂ ಮಾಯಾಂಕ್ ಅಗರ್ವಾಲ್ ಪ್ರತಿಭಾವಂತರು. ಅವರಿಗೆ ಅವಕಾಶ ಸಿಕ್ಕಿಲ್ಲ. ಅದರ ಅರ್ಥ ಟೀಂ ಇಂಡಿಯಾ ಪ್ರವೇಶಿಸಲು ಪ್ರಬಲ ಪೈಪೋಟಿ ಇದೆ. ತಾಳ್ಮೆಯಿಂದ ಕಾದರೆ ರಾಜ್ಯ ಕ್ರಿಕೆಟಿಗರಿಗೆ ಅವಕಾಶ ಸಿಗಲಿದೆ. ಬ್ರಿಜೇಶ್ ಪಟೇಲ್ ರಾಜ್ಯ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್ ಮನ್‌ಗಳಲ್ಲಿ ಒಬ್ಬರು. ಅವರು ರಾಜ್ಯ ತಂಡ ವನ್ನು ಪ್ರತಿನಿಧಿಸಿ 37 ಶತಕ, 55 ಅರ್ಧ ಶತಕದಿಂದ 11911 ರನ್‌ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.