ತುಳುವಿನಲ್ಲೂ ‘ಕಾಂತಾರ’ ಬರುವ ಸಾಧ್ಯತೆ; ಡಬ್ಬಿಂಗ್ ಮಲ್ಪುವೆರ್ ಗೆ ಅಂದಾ?
Team Udayavani, Oct 14, 2022, 9:39 PM IST
ಮಂಗಳೂರು : ಕರಾವಳಿಯ ಕಥೆಯ ಮೂಲವಾಗಿರುವ ರಿಷಬ್ ಶೆಟ್ಟಿ ನಿರ್ದೇಶನದ ಸೂಪರ್ ಹಿಟ್ ಕನ್ನಡ ಚಲನಚಿತ್ರ ‘ಕಾಂತಾರ’ ಈಗಾಗಲೇ ಪಂಚ ಭಾಷಾ ಚಿತ್ರವಾಗಿ ಭಾರಿ ಸದ್ದು ಮಾಡುತ್ತಿದ್ದು, ತುಳುವಿನಲ್ಲೂ ಡಬ್ ಆಗಿ ಬಿಡುಗಡೆಯಾಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಚಿತ್ರದಲ್ಲಿ ದೈವಾರಾಧನೆ ಕೆಲ ರೋಚಕ ಸನ್ನಿವೇಶಗಳಲ್ಲಿ ತುಳುವಿನ ಕೆಲ ಶಬ್ದಗಳ ಸಂಭಾಷಣೆಗಳನ್ನು ಬಳಸಿಕೊಳ್ಳಲಾಗಿದ್ದು, ಕರಾವಳಿಯ ಹೆಚ್ಚಿನ ಚಿತ್ರ ಪ್ರೇಮಿಗಳು ಈ ಚಿತ್ರ ಸಂಪೂರ್ಣವಾಗಿ ತುಳುವಿನಲ್ಲಿ ಬಿಡುಗಡೆಯಾದರೆ ಇನ್ನಷ್ಟು ಸಂಭ್ರಮಿಸಬಹುದು ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ರೇಟಿಂಗ್ ನಲ್ಲಿ ‘ಕೆಜಿಎಫ್’ ಮೀರಿಸಿದ ‘ಕಾಂತಾರ’; ಕನ್ನಡ ಚಿತ್ರದ ಹೊಸ ದಾಖಲೆ
ಚಿತ್ರದ ಎಲ್ಲಾ ಸನ್ನಿವೇಶಗಳೂ ತುಳುನಾಡಿನ ಆಚರಣೆಗೆ ಹತ್ತಿರವಾಗಿದ್ದು, ಯಾವುದೇ ವೈರುಧ್ಯವನ್ನು ಇತರ ಡಬ್ ಆದ ಚಿತ್ರಗಳಲ್ಲಿ ಕಾಣಿಸಿದಂತೆ ಆಗುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ ಚಿತ್ರ ಪ್ರೇಮಿಗಳು.
ಈಗಾಗಲೇ ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ನಟಿಸಿದ ಹಲವು ಮಂದಿ ಕಲಾವಿದರು ತುಳು ಬಲ್ಲವರಾಗಿದ್ದು, ಅವರವರ ಪಾತ್ರಗಳಿಗೆ ಡಬ್ ಮಾಡಲಿದ್ದಾರೆ ಎನ್ನಲಾಗಿದ್ದು, ನಾಯಕ ರಿಷಬ್ ಶೆಟ್ಟಿ, ನಾಯಕಿ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಸೇರಿ ಇತರ ಪ್ರಮುಖ ಪಾತ್ರಗಳಿಗೆ ಡಬ್ ಮಾಡಲು ಸೂಕ್ತ ಕಲಾವಿದರನ್ನು ಸಿದ್ದ ಮಾಡಿಕೊಳ್ಳಲಾಗಿದೆ ಎಂದು ಸುದ್ದಿಗಳು ಹರಿದಾಡುತ್ತಿವೆ.
ತುಳುವಿಗೆ ಡಬ್ ಆಗುವ ಕುರಿತು ಇದುವರಗೆ ಚಿತ್ರ ತಂಡ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.