ಮಂಕಿಪಾಕ್ಸ್ ನಿಯಂತ್ರಣಕ್ಕೆ ಕಣ್ಗಾವಲು ಸಕ್ರಿಯ: ಸಚಿವ ಸುಧಾಕರ್
Team Udayavani, Jul 25, 2022, 10:30 PM IST
ಬೆಂಗಳೂರು: ರಾಜ್ಯ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ಮಂಕಿಪಾಕ್ಸ್ ಕುರಿತು ಸಭೆ ನಡೆಸಿ ಚರ್ಚಿಸಿ, ಕಣ್ಗಾವಲು ಪಡೆಯನ್ನು ಸಕ್ರಿಯಗೊಳಿಸಿದ್ದು, ಪ್ರಕರಣಗಳು ಪತ್ತೆಯಾದ ತಕ್ಷಣ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎನ್ನುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಮಂಕಿಪಾಕ್ಸ್ ಜಾಗತಿಕ ಮಟ್ಟದಲ್ಲಿ ಹಬ್ಬುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುನ್ನೆಚ್ಚರಿಕೆ ವಹಿಸಲಾಗುತ್ತದೆ.
ಕೋವಿಡ್ ರೀತಿ ಬೇಗ ಹರಡದೆ ಇದ್ದರೂ, ಮನುಷ್ಯನ ದೇಹದ ದ್ರವಗಳಿಂದ ಒಬ್ಬರಿಂದ ಒಬ್ಬರಿಗೆ ಇದು ಹರಡುತ್ತದೆ. ಸೋಂಕು ಬಂದವರಿಗೆ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಿದರೆ ಸಾವು ನೋವು ಕಡಿಮೆ ಇರುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.