Agriculture; ಕರ್ನಾಟಕ ಕೃಷಿ ಅಭಿವೃದ್ಧಿ ಏಜೆನ್ಸಿ: ಸಚಿವ ಸಂಪುಟ ಒಪ್ಪಿಗೆ
Team Udayavani, Oct 29, 2024, 6:31 AM IST
ಬೆಂಗಳೂರು: ಕೃಷಿ ಇಲಾಖೆ ಯ ತರಬೇತಿ ಕೇಂದ್ರ, ಬೀಜೋತ್ಪಾದನ ವಿಭಾಗ ಸೇರಿದಂತೆ ವಿವಿಧ ಶಾಖೆಗಳನ್ನು ಒಂದೇ ಸೂರಿನಡಿ ತರುವುದಕ್ಕಾಗಿ “ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ’ ಸ್ಥಾಪನೆ ಮಾಡುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬೀಜೋತ್ಪಾದನೆ ಕೇಂದ್ರ, ಜಿಲ್ಲಾಕೃಷಿ ತರಬೇತಿ ಕೇಂದ್ರ, ಜೈವಿಕ ನಿಯಂತ್ರಣ, ಪರತಂತ್ರ ಜೀವಿ ಪ್ರಯೋಗಾಲಯ ಗಳನ್ನು ಒಂದೇ ಸೂರಿನಡಿ ತರಲಾಗಿದೆ. ಈ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗುವುದು ಎಂದು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಇತರ ಪ್ರಮುಖ ನಿರ್ಧಾರಗಳು
ಲೋಕಾಯುಕ್ತದಲ್ಲಿ ಖಾಲಿ ಇರುವ 12 ಸಹಾಯಕ ಅಭಿಯೋಜಕರನ್ನು ಗುತ್ತಿಗೆ ಮೇಲೆ ನೇಮಕ ಮಾಡುವುದು.
ಜಿಎಸ್‌ಟಿ ತಿದ್ದುಪಡಿ ಕಾಯಿದೆ ಯನ್ನು ಅಧ್ಯಾದೇಶದ ಮೂಲಕ ಜಾರಿ ಗೊಳಿಸುವುದು.
ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿ ಸಲು ತೀರ್ಮಾನ.
ರಾಯಚೂರು ವಿಶ್ವವಿದ್ಯಾನಿಲಯ ಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ.
ಸರಕಾರದ ಉಪ ಕಾರ್ಯದರ್ಶಿ ಬಿ.ವಿ. ಮಾರುತಿ ಪ್ರಸನ್ನ ವಿರುದ್ಧ ಇಲಾಖೆ ವಿಚಾರಣೆಗೆ ಉಪ ಲೋಕಾಯುಕ್ತರು ಮಾಡಿದ್ದ ಶಿಫಾರಸು ಕೈಬಿಡಲಾಗಿದೆ.
7,045 ಸಮುದಾಯ ಆರೋಗ್ಯ ಅಧಿಕಾರಿ ಹು¨ªೆಗಳ ಕಾಲಾವಧಿಯನ್ನು ಗುತ್ತಿಗೆ ಆಧಾರದಲ್ಲಿ 2025ನೇ ಮಾರ್ಚ್ ಅಂತ್ಯದವರೆಗೆ ಮುಂದುವರಿಕೆ.
ಮೂಡಿಗೆರೆ ಸಾರಾಗೋಡು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿ ಯಲ್ಲಿನ 19 ಸ್ವಾಧೀನದಾರರ ಸ್ಥಳಾಂತರ, ಪುನರ್ವಸತಿಗೆ ನಿರ್ಧಾರ. ಉಚಿತವಾಗಿ ತಲಾ 2 ಎಕರೆ ಜಮೀನು, ವಸತಿಗೆ 4 ಗುಂಟೆ
ಶಾಲಾ ಶಿಕ್ಷಣ ಇಲಾಖೆಯ 33 ಮಂದಿ ಗ್ರೇಡ್-1 ವೃತ್ತಿ ಶಿಕ್ಷಕರಿಗೆ, ಗ್ರೂಪ್-ಬಿ ವೃಂದದ ವಿಷಯ ಪರಿವೀಕ್ಷ ಕರು (ವೃತ್ತಿ ಶಿಕ್ಷಣ) ಹುದ್ದೆ ಗೆ ಪದೋನ್ನತಿ
ವೀರಪ್ಪನ್ ಕಾರ್ಯಾಚರಣೆ ತಂಡದ ಮೂವರು ವೈದ್ಯಕೀಯ ಸಿಬಂದಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ನಿವೇಶನ ಮಂಜೂರು
ಮುಧೋಳ ನಗರಕ್ಕೆ ಕೃಷ್ಣಾ ನದಿ
ಮೂಲದಿಂದ ಸುಧಾರಿತ ನೀರು ಸರಬರಾಜು ವ್ಯವಸ್ಥೆ ಒದಗಿಸುವ 177.10 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
ಮೈಸೂರು ಜಿಲ್ಲೆಯ ವರುಣಾ ಹೋಬಳಿ ಚೋರನಹಳ್ಳಿಯ ವಿಶ್ವೇಶ್ವ ರಯ್ಯ ತಾಂತ್ರಿಕ ವಿವಿ ಆವರಣದಲ್ಲಿ ಜಿಟಿಟಿಸಿ ಬಹುಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸಲು 35 ಕೋಟಿ ರೂ.
ಬೀದರ್ ವಿಮಾನ ನಿಲ್ದಾಣದ ಬೆಂಗಳೂರು – ಬೀದರ್ ಮಾರ್ಗವಾಗಿ ವಿಮಾನಯಾನ ಕಾರ್ಯಾಚರಣೆ ಮಾಡಲು ನಿರ್ಣಯ
ಹಿಂದುಳಿದ ವರ್ಗಗಳ ಕಲ್ಯಾಣ
ಇಲಾಖೆಯಡಿ ಕಾರ್ಯನಿರ್ವಹಿಸು ತ್ತಿರುವ, ಹೊಸದಾಗಿ ಮಂಜೂರು ಮಾಡಿದ ವಿದ್ಯಾರ್ಥಿ ನಿಲಯಗಳಿಗೆ ಮೂಲಸೌಕರ್ಯಕ್ಕೆ 39.07 ಕೋಟಿ ರೂ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 127.44 ಕೋಟಿ ಹೆಚ್ಚುವರಿ ಮೊತ್ತಕ್ಕೆ ಅನುಮೋದನೆ ನೀಡಿ ವೆಚ್ಚ ಹೆಚ್ಚಾಗಲು ಕಾರಣ ಪತ್ತೆಗೆ ವಿಚಾರಣೆ ಮಾಡಲು ನಿರ್ದೇಶನ.
ಓದು ಕರ್ನಾಟಕಕ್ಕೆ ಅಸ್ತು
ಪುಣ್ಯ್ ಭಾರತ್ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ ಸರಕಾರಿ ಶಾಲೆಗಳಲ್ಲಿನ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ, ಮುದ್ರಿಸಿ, ವಿತರಣೆ ಹಾಗೂ ಶಿಕ್ಷಕರಿಗೆ ತರಬೇತಿ ನೀಡಲು 14.24 ಕೋಟಿ ರೂ. ಅಂದಾಜು ಮೊತ್ತದ ಓದು ಕರ್ನಾಟಕ ಚಟುವಟಿಕೆಗೆ ಅನುಮೋದನೆ ಲಭಿಸಿದೆ. ಒಟ್ಟು 10,03,821 ವಿದ್ಯಾರ್ಥಿಗಳಿಗೆ ನೆರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.