ಕರ್ನಾಟಕ ಬಯಲಾಟ ಅಕಾಡೆಮಿಗೆ ಅಜಿತ್ ನಾಗಪ್ಪ ಬಸಾಪುರ ಅಧ್ಯಕ್ಷ
ಅಕಾಡೆಮಿ, ಪ್ರಾಧಿಕಾರದ ಕೆಲವರಿಗೆ ಕೊಕ್
Team Udayavani, Aug 6, 2022, 10:58 PM IST
ಬೆಂಗಳೂರು: ಕರ್ನಾಟಕ ಬಯಲಾಟ ಅಕಾಡೆಮಿ ನೂತನ ಅಧ್ಯಕ್ಷರಾಗಿ ಹುಬ್ಬಳ್ಳಿ ಸಮೀಪದ ಛಬ್ಬಿಯ ಅಜಿತ್ ನಾಗಪ್ಪ ಬಸಾಪುರ ಅವರನ್ನು ನೇಮಕ ಮಾಡಿ ಸರಕಾರ ಶನಿವಾರ ಆದೇಶ ಹೊರಡಿಸಿದೆ.
ಸದಸ್ಯರಾಗಿ ಬಳ್ಳಾರಿಯ ತಿಪ್ಪೇಸ್ವಾಮಿ, ಚಿಕ್ಕಮಗಳೂರಿನ ದತ್ತಾತ್ರೇಯ ಅರಳಿಕಟ್ಟಿ ಅವರನ್ನು ನೇಮಿಸಲಾಗಿದೆ.
ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರದ ಅಧ್ಯಕ್ಷರನ್ನು ಉಳಿಸಿಕೊಂಡು ಕೆಲವು ಸದಸ್ಯರನ್ನು ಕೈಬಿಡಲಾಗಿದೆ.
ಹೊಸದಾಗಿ ನೇಮಕವಾದ ಸದಸ್ಯರ ಪಟ್ಟಿ
ಕರ್ನಾಟಕ ಲಲಿತಕಲಾ ಅಕಾಡೆಮಿ: ರಾಮಗೌತಮ್ (ಮಡಿ ಕೇರಿ), ಗುರುಸಿದ್ದಪ್ಪ ಮಲ್ಲಾಪುರ (ಧಾರವಾಡ ಜಿಲ್ಲೆ), ಕಮಲ್‌ಅಹಮ್ಮದ್ (ಗದಗ), ಶಿಲ್ಪಾ ಕಡಕಭಾವಿ (ದಾವಣಗೆರೆ).
ಕೊಂಕಣಿ ಸಾಹಿತ್ಯ ಅಕಾಡೆಮಿ: ಓಂ ಗಣೇಶ್ (ಕುಂದಾಪುರ), ರಮೇಶ್ ಪುರುಸಯ್ಯ ಮೇಸ್ತ, ಕಾಸರಕೋಡು (ಹೊನ್ನಾವರ).
ಕರ್ನಾಟಕ ನಾಟಕ ಅಕಾಡೆಮಿ: ಶ್ರೀಧರ ಹೆಗಡೆ (ವಿಜಯಪುರ), ಪ್ರದೀಪಚಂದ್ರ ಕುತ್ಪಾಡಿ (ಉಡುಪಿ), ಆರತಿದೇವ ಶಿಖಾಣಿ ( ಧಾರವಾಡ), ಜೀವನ್ ಕುಮಾರ್ (ಮೈಸೂರು), ವಿಜಯಕುಮಾರ್ ಮಾಲೂರು ( ಕೋಲಾರ), ಗಣಪತಿ ಹಿತ್ಲಕೈ (ಉತ್ತರ ಕನ್ನಡ), ಎಂ.ಎನ್.ಕಿರಣಕುಮಾರ್ (ವಟಿ), ಪ್ರಸನ್ನಕುಮಾರ್ (ಬೆಂಗಳೂರು).
ಕರ್ನಾಟಕ ಜಾನಪದ ಅಕಾಡೆಮಿ: ಡಾ| ಅಪ್ಪಾಜಿ (ತುಮಕೂರು), ಬಸವರಾಜ ಶಿವಪ್ಪ, ಗುಬ್ಬಿ (ಶಿಗ್ಗಾಂವಿ), ಶಿವೇಶ್ವರಗೌಡ (ಬಳ್ಳಾರಿ), ಸಣ್ಣವೀರಪ್ಪ ಹಾಲಪ್ಪ ದೊಡ್ಮನಿ (ಬಾಗಲಕೋಟೆ).
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ: ಗಣೇಶ್ ಉಡುಪ(ಹಾಸನ), ನಾಗರಾಜ ಹೆಗಡೆ, ಶಿರನಾಲೆಮನೆ (ಯಲ್ಲಾಪುರ).
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ಅಬ್ದುಲ್ ರಹಿಮಾನ್ (ಮಣಿಪಾಲ), ಹೈದರಲಿ ಬಿ.ಸಿ.ರೋಡ್ (ಮಂಗಳೂರು), ಎಂ.ಕೆ.ಮಠ ( ಉಪ್ಪಿನಂಗಡಿ), ಮಹಮ್ಮದ್ ಮುಸ್ತಫಾ (ಉಡುಪಿ ಜಿಲ್ಲೆ).
ಕರ್ನಾಟಕ ಸಾಹಿತ್ಯ ಅಕಾಡೆಮಿ: ಡಾ| ಕೇಶವ ಬಂಗೇರ (ಮಂಗಳೂರು).
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ: ಕೌಸಲ್ಯಾ ಸತೀಶ ಸೋಮಯೆಂಡ, ನಾಗೇಶ ಕಾಲೂರು (ಮಡಿಕೇರಿ), ಪ್ರಮೀಳಾ ನಾಚಯ್ಯ, ಚಾಮರ ದಿನೇಶ್ ಬೆಳ್ಯಪ್ಪ (ಸೋಮವಾರ ಪೇಟೆ).
ರಂಗ ಸಮಾಜ: ಡಾ| ಶಶಿಧರ ನರೇಂದ್ರ (ಧಾರವಾಡ), ಡಾ| ಶೀನ ನಡೋಳಿ (ಬೆಳ್ತಂಗಡಿ), ರಾಜಣ್ಣ ಜೇವರ್ಗಿ (ಕಲಬುರಗಿ), ದ್ರಾಕ್ಷಾಯಿಣಿ ಭಟ್ (ಬೆಂಗಳೂರು), ಡಾ| ಗುರುಪ್ರಸಾದ್ ಟಿ.ಆರ್.(ಶಿಕಾರಿಪುರ).
ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಡ್ಯಾನಿ ಪೇರೆರ, ಹಳ್ಳಿ ಮೈಸೂರು (ಹಾಸನ ಜಿಲ್ಲೆ), ಡಾ| ರಾಜೀವ ಲೋಚನ (ಚಿತ್ರದುರ್ಗ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.