ಅನಿಶ್ಚಿತತೆಯ ನಡುವೆಯೂ ‘ವಿಶ್ವಾಸ’ದ ವಚನ

ಯಡಿಯೂರಪ್ಪ ನಡೆಗೆ ಮೈತ್ರಿ ದಂಗು; ಕಾಂಗ್ರೆಸ್‌-ಜೆಡಿಎಸ್‌ ನಾಯಕರಿಗೆ ನುಂಗಲಾರದ ತುತ್ತಾದ ಬಿಎಸ್‌ವೈ ದಿಟ್ಟ ನಿಲುವು

Team Udayavani, Jul 27, 2019, 5:01 AM IST

BS-Yediyurappa-Swearing-Ceremony–Raj-Bhavan—BNP-(23)

ಬೆಂಗಳೂರು: ರಾಜಕೀಯ ಚದುರಂಗದಾಟದಲ್ಲಿ ಯಾವಾಗ, ಯಾರ ಕೈ ಮೇಲಾಗುತ್ತದೆಯೋ ಗೊತ್ತಿಲ್ಲ. ಶುಕ್ರವಾರದವರೆಗೂ ಅನಿಶ್ಚಿತತೆಯಲ್ಲಿಯೇ ಅಲೆದಾಡುತ್ತಿದ್ದ ಯಡಿಯೂರಪ್ಪ, ಬೆಳಗಾಗುವಷ್ಟರಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಮಾಣ ವಚನ ಸ್ವೀಕರಿಸಲು ತೀರ್ಮಾನಿಸಿದ್ದು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರನ್ನು ದಂಗು ಬಡಿಸಿದೆ.

ಪಕ್ಷದ ನಾಯಕರ ವಿರುದ್ಧ ಬಂಡಾಯ ಸಾರಿದ್ದ 16 ಶಾಸಕರ ರಾಜೀನಾಮೆ ಅಂಗೀಕಾರ ಹಾಗೂ ಅನರ್ಹತೆ ಪ್ರಕರಣ ಸ್ಪೀಕರ್‌ ಅಂಗಳದಲ್ಲಿ ಇರುವುದರಿಂದ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವುದು ಸುಲಭದ ಮಾರ್ಗವಲ್ಲ ಎಂದು ಎರಡೂ ಪಕ್ಷಗಳ ನಾಯಕರು ನಂಬಿಕೊಂಡಿದ್ದರು. ಯಡಿಯೂರಪ್ಪ ದಿಢೀರ್‌ ಪ್ರಮಾಣ ವಚನ ಸ್ವೀಕರಿಸುವ ನಿರ್ಧಾರ ತೆಗೆದುಕೊಂಡಿದ್ದು, ಮೈತ್ರಿ ಪಕ್ಷಗಳ ನಾಯಕರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ.

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಗೂ ಸ್ಪಷ್ಟ ಬಹುಮತ ಇಲ್ಲ. ರಾಜೀನಾಮೆ ಸಲ್ಲಿಸಿರುವ ಶಾಸಕರ ರಾಜೀನಾಮೆಯನ್ನು ಬಿಜೆಪಿಯ ನಡೆ ನೋಡಿ ಅಂಗೀಕರಿಸುವುದಾ ಅಥವಾ ತಿರಸ್ಕರಿಸುವುದಾ ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ನಿಂದ ಪರೋಕ್ಷವಾಗಿ ಸ್ಪೀಕರ್‌ ಮೂಲಕ ಮಾಡಿಸಲಾಗುತ್ತಿದೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ದಿಟ್ಟ ನಿಲುವು ತೆಗೆದುಕೊಂಡಿರುವುದು, ಮೈತ್ರಿ ನಾಯಕರುಗಳಿಗೆ ನುಂಗಲಾರದ ತುತ್ತಾಗಿದೆ.

ರಾಜ್ಯಪಾಲರದು ನೈತಿಕ ನಡೆಯಲ್ಲ: ಸಂಖ್ಯಾಬಲದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲ. ರಾಜೀನಾಮೆ ಸಲ್ಲಿಸಿರುವ ಶಾಸಕರ ಪ್ರಕರಣ ಇತ್ಯರ್ಥವಾಗಿಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಯಾವುದನ್ನೂ ಪರಿಗಣಿಸದೆ ಏಕಾಏಕಿ ಒಂದೇ ದಿನದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದ್ದು, ನೈತಿಕವಾಗಿ ಸರಿಯಾದ ನಡೆಯಲ್ಲ ಎನ್ನುವುದು ಮೈತ್ರಿ ಪಕ್ಷಗಳ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ರಾಜ್ಯಪಾಲರ ನಡೆಯನ್ನು ಖಂಡಿಸಿದ್ದಾರೆ. ಅಲ್ಲದೆ, ಇದೊಂದು ಸಂವಿಧಾನ ವಿರೋಧಿ ನಡೆ ಎಂದು ಆರೋಪಿಸಿದ್ದಾರೆ.

ಮೈತ್ರಿ ವಿರುದ್ಧ ಬಂಡಾಯ ಸಾರಿದ್ದ ಮೂವರು ಶಾಸಕರನ್ನು ಅನರ್ಹಗೊಳಿಸಿ, ಉಳಿದವರನ್ನು ವಾಪಸ್‌ ಕರೆಸಿಕೊಳ್ಳಬಹುದೆಂಬ ಮೈತ್ರಿ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದೆ. ಆದರೆ, ಜುಲೈ 29ರಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸಬೇಕಾಗಿರುವುದರಿಂದ ಆಗೇನಾದರೂ ಚಮತ್ಕಾರಗಳು ನಡೆದು, ಬಿಜೆಪಿ ಸರ್ಕಾರ ಪತನವಾಗಬಹುದು ಎನ್ನುವ ಅಸ್ಪಷ್ಟ ಆಶಾ ಭಾವನೆಯನ್ನು ಮೈತ್ರಿ ಪಕ್ಷಗಳ ನಾಯಕರು ಇಟ್ಟುಕೊಳ್ಳುವಂತಾಗಿದೆ.

ಬಹುಮತಕ್ಕೆ ಎಂಟು ಸ್ಥಾನಗಳ ಕೊರತೆ

ರಾಜ್ಯದ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಬಾರಿ ಪ್ರಮಾಣ ವಚನ ಸ್ವೀಕರಿಸಿದ ಏಕೈಕ ನಾಯಕ ಯಡಿಯೂರಪ್ಪ. ಆದರೆ, ಆ ಪೈಕಿ ಒಂದೇ ಒಂದು ಪ್ರಮಾಣ ವಚನವನ್ನೂ ನಿರಾಳ ಮತ್ತು ನಿಶ್ಚಿಂತೆಯಿಂದ ಸ್ವೀಕರಿಸಿದ ಉದಾಹರಣೆಗಳಿಲ್ಲ! ಈಗಿನ ಲೆಕ್ಕಾಚಾರದ ಪ್ರಕಾರ ಬಹುಮತಕ್ಕೆ ಎಂಟು ಸ್ಥಾನಗಳು ಅವರಿಗೆ ಕೊರತೆ ಇದೆ.

ಮೊದಲ ಬಾರಿಗೆ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ್ದು 2007ರ ನವೆಂಬರ್‌ 12ರಂದು. ಆಗ ಬಿಜೆಪಿ ಗೆದ್ದ ಸ್ಥಾನಗಳು 79. ಜೆಡಿಎಸ್‌ನೊಂದಿಗೆ ತಲಾ 20 ತಿಂಗಳು ಅಧಿಕಾರ ನಡೆಸುವ ಷರತ್ತಿನ ಮೇರೆಗೆ ಮೈತ್ರಿ ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಜೆಡಿಎಸ್‌ ತನ್ನ ಬೆಂಬಲವನ್ನು ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಸರ್ಕಾರ ಅಲ್ಪಮತಕ್ಕೆ ಕುಸಿಯಿತು. ಇದರಿಂದ ಯಡಿಯೂರಪ್ಪ ವಿಶ್ವಾಸಮತ ಕಳೆದುಕೊಂಡರು. ಕೇವಲ ಏಳು ದಿನಗಳ ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗಿಳಿದರು. ಇದಾಗಿ 2008ರಲ್ಲಿ ಬಿಜೆಪಿ 110 ಸ್ಥಾನಗಳನ್ನು ಗೆದ್ದಿತು. ಆದರೆ, ಬಹುಮತಕ್ಕೆ ಬೇಕಾಗಿದ್ದು 113 ಸ್ಥಾನಗಳು. ಮೂರು ಸೀಟುಗಳ ಕೊರತೆ ನಡುವೆಯೇ ಯಡಿಯೂರಪ್ಪ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಒತ್ತಡದಲ್ಲೇ ವಿಶ್ವಾಸಮತದ ಸವಾಲು ಗೆದ್ದರು. ಆದರೆ, ಮೂರು ವರ್ಷಗಳಲ್ಲಿ ರಾಜೀನಾಮೆ ನೀಡಬೇಕಾಯಿತು. ಉಳಿದೆರಡು ವರ್ಷಗಳಲ್ಲಿ ಬಿಜೆಪಿಯಿಂದ ಇಬ್ಬರು ಮುಖ್ಯಮಂತ್ರಿಗಳಾದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ 104 ಸ್ಥಾನ ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಆಗಲೂ ಬಹುಮತಕ್ಕೆ 9 ಸ್ಥಾನಗಳ ಕೊರತೆ ಎದುರಾಯಿತು. ಆದಾಗ್ಯೂ ‘ವಿಶ್ವಾಸ’ದಿಂದ ಯಡಿಯೂರಪ್ಪ, ಸರ್ಕಾರ ರಚನೆಗೆ ರಾಜ್ಯಪಾಲರಿಗೆ ಹಕ್ಕು ಮಂಡಿಸಿದರು. ಒತ್ತಡದ ನಡುವೆ ಮತ್ತೂಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಹುಮತ ಸಾಬೀತುಪಡಿಸಲಾಗದೆ, ಕೇವಲ ಮೂರು ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಮ್ಮಿಶ್ರ ಸರ್ಕಾರ ವಿಶ್ವಾಸ ಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಮತ್ತೂಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಅವಕಾಶ ಸಿಕ್ಕಿತು. ಈಗಲೂ ಅವರು 12 ವರ್ಷಗಳ ಹಿಂದಿದ್ದ ಒತ್ತಡದಲ್ಲೇ ಇದ್ದಾರೆ. ಸೋಮವಾರ ವಿಶ್ವಾಸ ಮತವನ್ನು ಸಾಬೀತುಪಡಿಸುವುದಾಗಿಯೂ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಏನು ಮ್ಯಾಜಿಕ್‌ ಮಾಡಬಹುದು ಎಂಬ ಕುತೂಹಲ ಜನರಲ್ಲಿದೆ.

ದೇವರ ಹೆಸರಲ್ಲಿ ಪ್ರಮಾಣ ವಚನ
“ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬ ನಾನು ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆ
ಹೊಂದಿರುತ್ತೇನೆಂದು, ನಾನು ಭಾರತದ ಸಾರ್ವಭೌಮತ್ವವನ್ನು, ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ, ಅಂತ:ಕರಣ ಪೂರ್ವಕವಾಗಿ ನಿರ್ವಹಿಸುತ್ತೇನೆಂದು ಭಯ, ಪಕ್ಷಪಾತ ಇಲ್ಲದೆ, ರಾಗದ್ವೇಷ ಇಲ್ಲದೆ ಎಲ್ಲ ಬಗೆಯ ಜನರಿಗೆ ಸಂವಿಧಾನಕ್ಕೆ ಮತ್ತು ಕಾನೂನಿಗೆ ಅನುಸಾರವಾಗಿ ನ್ಯಾಯದಾನ ಮಾಡುತ್ತೇನೆಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ…’

ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಗೈರು
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಎಚ್‌.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಾಜಿ
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೇರಿದಂತೆ ಕಾಂಗ್ರೆಸ್‌ ಹಾಗೂ
ಜೆಡಿಎಸ್‌ನ ಯಾವ ನಾಯಕರೂ ಯಡಿಯೂರಪ್ಪ ಅವರ ಪ್ರಮಾಣ ವಚನ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ರಾಜ್ಯ ಸರ್ಕಾರದಿಂದ ಎಲ್ಲ ಶಾಸಕರು
ಹಾಗೂ ನಾಯಕರಿಗೂ ಸಮಾರಂಭಕ್ಕೆ ಹಾಜರಾಗುವಂತೆ ಅಧಿಕೃತ ಆಹ್ವಾನ
ನೀಡಲಾಗಿತ್ತು.

ರೋಷನ್‌ ಬೇಗ್‌, ರಾಜಣ್ಣ ಭಾಗಿ
ಶಿವಾಜಿನಗರದ ಕಾಂಗ್ರೆಸ್‌ನ ಹಾಲಿ ಶಾಸಕ ಹಾಗೂ ಮಾಜಿ ಸಚಿವ ರೋಷನ್‌ ಬೇಗ್‌ ಅವರು ಬಿ.ಎಸ್‌.ಯಡಿಯೂರಪ್ಪ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. 5.45ರ ಸುಮಾರಿಗೆ ರಾಜಭವನದ ಗಾಜಿನ ಮನೆಗೆ ಆಗಮಿಸಿದ ರೋಷನ್‌ ಬೇಗ್‌ ಅವರನ್ನು ಬಿಜೆಪಿ ನಾಯಕರು ಸ್ವಾಗತಿಸಿದರು. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಅನೇಕರ ಜತೆಯಲ್ಲಿ ಮಾತುಕತೆ ನಡೆಸಿದ ಬೇಗ್‌, ವೇದಿಕೆಯ ಎಡಭಾಗದ ಮುಂದಿನ ಸಾಲಿನಲ್ಲಿ ಕುಳಿತಿದ್ದು, ಕಾರ್ಯಕ್ರಮ ಮುಗಿಯುವವರೆಗೂ ಇದ್ದರು. ಹಾಗೆಯೇ ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಪುಟ್ಟಣ್ಣ ಕೂಡ ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು. ಬಿಜೆಪಿಯ ವಿಧಾನ ಪರಿಷತ್‌ ಸದಸ್ಯರೊಂದಿಗೆ ಸಮಾರಂಭದಲ್ಲಿ ಕುಳಿತಿದ್ದರು. ಇನ್ನು, ತುಮಕೂರಿನ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಿಜೆಪಿ ಶಾಸಕರಿಗಾಗಿ ಮೀಸಲಿಟ್ಟ ಆಸನದಲ್ಲಿ ರಾಜಣ್ಣ ಅವರು ಬಿಜೆಪಿ ನಾಯಕರೊಂದಿಗೆ ಕುಳಿತಿದ್ದರು.


ಉದಯವಾಣಿ ಕಚೇರಿಯಲ್ಲಿ ನುಡಿದಿದ್ದ ಭವಿಷ್ಯ ನಿಜವಾಯಿತು
ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡರೆ ಯಾವುದೇ ಕಾರಣಕ್ಕೂ ಜೆಡಿಎಸ್‌ ಜತೆಗೂಡಿ ಸರ್ಕಾರ ರಚಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ. ಸ್ವಂತ ಬಲದ ಮೇಲೆ ಬಿಜೆಪಿ ಸರ್ಕಾರ ರಚಿಸಲಿದೆ…

-ಹೀಗೆಂದು ನೂತನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಏ.14ರಂದು ‘ಉದಯವಾಣಿ’ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದರು. ಬಿಜೆಪಿ 22 ಸ್ಥಾನ ಗೆಲ್ಲುವುದು ಖಚಿತ. ಬಳಿಕ ಮೈತ್ರಿ ಸರ್ಕಾರ ತನ್ನಿಂತಾನೇ ಪತನವಾಗುವುದು ನಿಶ್ಚಿತ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಆದೇಶದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್‌- ಜೆಡಿಎಸ್‌ 20 ಸ್ಥಾನ ಗೆಲ್ಲುವುದು ತಿರುಕನ ಕನಸು ಎಂದು ಸಂವಾದದಲ್ಲಿ ಬಿಎಸ್‌ವೈ ಲೇವಡಿ ಮಾಡಿದ್ದನ್ನು ಸ್ಮರಿಸಬಹುದು.

ಟಾಪ್ ನ್ಯೂಸ್

vijayaendra

ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ

Citizen-annamali

ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ

Tulu-Nataka-KM

ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್‌’ ದ್ವಿತೀಯ

DH-Heggade

Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

1-a-mahe-bg

ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ

siddanna-2

ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayaendra

ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ

siddanna-2

ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ

Basanagowda-Yatnal

ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳದ 4-5 ಜನರೇ ಟಾರ್ಗೆಟ್: ಯತ್ನಾಳ್

GTD

JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್‌

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

vijayaendra

ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ

Citizen-annamali

ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ

Tulu-Nataka-KM

ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್‌’ ದ್ವಿತೀಯ

DH-Heggade

Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.