Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Team Udayavani, Nov 24, 2024, 7:10 AM IST
ಬೆಂಗಳೂರು: ಅಲ್ಪಾವಧಿಯಲ್ಲೇ ಆಡಳಿತ ವಿರೋಧಿ ಅಲೆ ಸೃಷ್ಟಿಸುವಲ್ಲಿ ಯಶಸ್ಸು ಸಾಧಿಸಿರುವುದಾಗಿ ವಿಪಕ್ಷ ಗಳು ಬೀಗುತ್ತಿರುವಾಗಲೇ ಸದ್ದಿಲ್ಲದೆ ಮರ್ಮಾಘಾತ ನೀಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಅನಂತರ ಮೈತ್ರಿಪಕ್ಷಗಳಿಗೆ ಸಿಎಂ ವಿರುದ್ಧದ ಮುಡಾ ನಿವೇಶನ ಹಂಚಿಕೆ ಪ್ರಕರಣದ ಅಸ್ತ್ರ ಸಿಕ್ಕಿತು. ಅದನ್ನು ಕೈಗೆತ್ತಿಕೊಂಡ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡಿ ರಾಜ್ಯದ ಗಮನ ಸೆಳೆಯಿತು. ಇದಕ್ಕೂ ಮೊದಲು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗ ರಣ ಕೂಡ ಬಯಲಿಗೆ ಬಂದಿತ್ತು. ಉಪಚುನಾವಣೆ ಹೊಸ್ತಿಲಲ್ಲಿ ಅದೇ ಮೈತ್ರಿಪಕ್ಷಗಳಿಗೆ “ವಕ್ಫ್ ಆಸ್ತಿ’ ರೂಪದಲ್ಲಿ ಮತ್ತೂಂದು ಅಸ್ತ್ರ ಸಿಕ್ಕಿದ್ದರೂ ಸರಕಾರ ಸಮರ್ಥಿಸಿಕೊಂಡಿತು.
ಮುಖ್ಯವಾಗಿ ಆರೋಪಗಳಿಗೆ ಪ್ರತಿಯಾಗಿ ಬಿಜೆಪಿ ಅವಧಿಯಲ್ಲಾದ ಕೋವಿಡ್ ಸೇರಿದಂತೆ ಹಲವು ಹಗ ರಣಗಳ ವಿರುದ್ಧ ತೀವ್ರ ತನಿಖೆಗೆ ಕಾಂಗ್ರೆಸ್ ಮುಂದಾಯಿತು. ಅಷ್ಟೇ ಪರಿಣಾಮಕಾರಿ ಯಾಗಿ ಅದನ್ನು ಜನರಿಗೆ ತಲುಪಿಸಿತು. “ವಕ್ಫ್ ಆಸ್ತಿ’ ಮುಂದಿಟ್ಟುಕೊಂಡು ಹಿಂದೂಗಳ “ಮತಬ್ಯಾಂಕ್’ಗೆ ಕೈಹಾಕಲು ಮುಂದಾದ ಮೈತ್ರಿಪಕ್ಷಗಳಿಗೆ ಪ್ರತಿತಂತ್ರವಾಗಿ ನಿಲುವು ಸಮರ್ಥಿಸಿ ಕೊಳ್ಳುತ್ತಲೇ “ಅಹಿಂದ’ ಮತದಾರರನ್ನು ಸಂಪೂರ್ಣವಾಗಿ ತನ್ನ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಯಿತು.
ಸಿಎಂ-ಡಿಸಿಎಂಗೆ ಬಲ ತಂದುಕೊಟ್ಟ ಗೆಲುವು
ಸಿಎಂಗೆ ತಮ್ಮ ಕುರ್ಚಿಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವಂತೆ ಮಾಡಿದೆ. ಮತ್ತೂಂದೆಡೆ ಡಿಸಿಎಂ ತಾನೂ ಒಕ್ಕಲಿಗರ ನಾಯಕ ಎಂದು ಬಿಂಬಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ. ಈಗ ಅಧಿಕಾರ ಹಂಚಿಕೆಗೆ ಮತ್ತಷ್ಟು ಗಟ್ಟಿಯಾಗಿ “ಕ್ಲೈಮ್’ ಮಾಡಿಕೊಳ್ಳಲು ಬಲ ದೊರೆತಂತಾಗಿದೆ. ಇದರೊಂದಿಗೆ “ನಾನೂ ಸಿಎಂ ಆಕಾಂಕ್ಷಿ’ ಎಂಬ ಪಕ್ಷದಲ್ಲಿನ “ಅಪಸ್ವರ’ಗಳಿಗೂ ಡಿಕೆಶಿ ಬ್ರೇಕ್ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.