ಕೀ ಉತ್ತರದಲ್ಲಿ ಫೇಲಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ!
Team Udayavani, Jan 19, 2019, 12:50 AM IST
ರಾಯಚೂರು: ಪಿಯು ಉಪನ್ಯಾಸಕರ ನೇಮಕಾತಿ ಗೊಂದಲಗಳಿಗೆ ಸದ್ಯಕ್ಕೆ ತೆರೆ ಬೀಳುವ ಲಕ್ಷಣ ಕಾಣುತ್ತಿಲ್ಲ. ಕಳೆದ ಐದು ವರ್ಷದಿಂದ ಒಂದಿಲ್ಲೊಂದು ಗೊಂದಲದ ಮಧ್ಯೆ ಕೊನೆಗೂ ಪರೀಕ್ಷೆ ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಈಗ ಪ್ರಕಟಿಸಿರುವ ಕೀ ಉತ್ತರಗಳಲ್ಲೂ ಸಾಕಷ್ಟುತಪ್ಪು ಗಳು ನುಸುಳುವಂತೆ ಮಾಡಿದೆ.
ರಾಜ್ಯದ ವಿವಿಧೆಡೆ ಖಾಲಿಯಿರುವ 1,130 ಹುದ್ದೆಗಳ ಭರ್ತಿಗೆ 2015ರಲ್ಲಿ ಅಧಿಸೂಚನೆ ಹೊರಡಿಸಿದ್ದ ಪ್ರಾ ಧಿಕಾರ,4 ವರ್ಷಗಳಿಂದ ಹಲವು ಬಾರಿ ಪ್ರಕ್ರಿಯೆ ಪ್ರಾರಂಭಿಸಿ, ನಿಲ್ಲಿಸುವ ಮೂಲಕ ಚಲ್ಲಾಟವಾಡಿತ್ತು. ಕೊನೆಗೆ 2018ರ ನ.29ರಿಂದ ಡಿ.8ರವರೆಗೆ ಪರೀಕ್ಷೆಗಳನ್ನು ನಡೆಸಿತ್ತು.
ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ, ಹಿಂದಿ, ಇಂಗ್ಲಿಷ್, ಸಮಾಜಶಾಸ್ತ್ರ, ಉರ್ದು, ಸಂಖ್ಯಾಶಾಸ್ತ್ರ ಹೀಗೆ 25 ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳು ಪ್ರಾ ಧಿಕಾರ ಬಿಡುಗಡೆ ಮಾಡುವ ಕೀ ಉತ್ತರಗಳಿಗೆ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದರು. ಜ.14ರಂದು ಪ್ರಕಟಗೊಂಡ ಕೀ ಉತ್ತರ ನೋಡಿದವರೇ ಭ್ರಮನಿರಸನಗೊಂಡಿದ್ದಾರೆ. ಸಾಕಷ್ಟು ಪ್ರಶ್ನೆಗಳಿಗೆ ತಪ್ಪು ಉತ್ತರಗಳು ಕಂಡು ಬಂದಿದ್ದು, ಆಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅದರಲ್ಲಿ ರಾಜ್ಯಶಾಸOಉ ದ್ವಿತೀಯ ಪತ್ರಿಕೆ ಉತ್ತರಗಳು ಅದಕ್ಕೆ ಸಂಬಂಧಿ ಸಿಧ್ದೋ ಅಲ್ಲವೋ ಎನ್ನುವಷ್ಟರ ಮಟ್ಟಿಗೆ ತಪ್ಪಾಗಿದೆ ಎಂದು ದೂರುತ್ತಿದ್ದಾರೆ ಅಭ್ಯರ್ಥಿಗಳು. ಸಂವಿಧಾನದಲ್ಲೇ ಹಣಕಾಸು ಆಯೋಗದ ರಚನೆ ಕುರಿತಾದ ವಿ ಧಿಯನ್ನು 280ನೇ ವಿಧಿಯಲ್ಲಿ ನಮೂದಿಸಿದ್ದಾರೆ. ಕೀ ಉತ್ತರದಲ್ಲಿ 350-ಬಿ ಎಂದು ನೀಡಲಾಗಿದೆ. ಪ್ರಮುಖ ವ್ಯಕ್ತಿಗಳು, ಇಸ್ವಿಗಳನ್ನು ಕೂಡ ತಪ್ಪಾಗಿ ನಮೂದಿಸಲಾಗಿದೆ. ಬೇರೆ ವಿಷಯಗಳಲ್ಲೂ ಸಮಸ್ಯೆಗಳು ಕಂಡು ಬಂದಿವೆ.
ಈ ಹಿಂದೆ ಪಿಡಿಒ ನೇಮಕಾತಿಯಲ್ಲೂ ಇದೇ ರೀತಿಯ ತಪ್ಪುಗಳು ಕಂಡು ಬಂದಿದ್ದವು. ಆಗ ನೊಂದ ಅಭ್ಯರ್ಥಿಗಳು ನ್ಯಾಯಾಲಯ ಮೊರೆ ಹೋಗಿ ಗೊಂದಲವನ್ನು ಸರಿಪಡಿಸಿಕೊಂಡಿದ್ದರು. ಈಗ ಸಮಸ್ಯೆ ಕುರಿತು ಪ್ರಾಧಿಕಾರದ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಿದರೆ ಜ.17ರಿಂದ ಆಕ್ಷೇಪಣೆ ಸಲ್ಲಿಸಬಹುದು ಎನ್ನುವ ಸಿದ್ಧ ಉತ್ತರ ನೀಡಿದ್ದಾರೆ.
ಅಪ್‌ಲೋಡ್‌ನಲ್ಲಿ ಯಡವಟ್ಟು: ಈಗ ಪರೀಕ್ಷೆಗಳನ್ನು ಎ, ಬಿ, ಸಿ, ಡಿ ಮಾದರಿಯ ಪ್ರಶ್ನೆಪತ್ರಿಕೆಗಳಲ್ಲಿ ನೀಡು ವುದರಿಂದ ಕೀ ಉತ್ತರಗಳು ಕೂಡ ಅದೇ ಮಾದರಿ ಯಲ್ಲಿರುತ್ತವೆ. ಆನ್‌ಲೈನ್‌ನಲ್ಲಿ ಒಂದು ವಿಷಯಕ್ಕೆ ಮತ್ತೂಂದು ವಿಷಯದ ಉತ್ತರ ಅಳವಡಿಸಿದರೂ ಈ ಸಮಸ್ಯೆ ಎದುರಾಗಬಹುದು. ಆದರೆ, ಹಾಗೆ ಮಾಡುವುದರಿಂದ ಅಭ್ಯರ್ಥಿಗಳ ಜಂಘಾಬಲವೇ ಉಡುಗಿ ಹೋಗಲಿದೆ ಎಂಬುದನ್ನು ಪ್ರಾಧಿಕಾರ ತಿಳಿಯಬೇಕು. ಸತತ ಪ್ರಯತ್ನ ಮಾಡಿ ಹೇಗಾದರೂ ಕೆಲಸ ಪಡೆಯಬೇಕೆಂಬ ಮಹದಾಸೆ ಹೊಂದಿರುವವರಿಗೆ ಇದರಿಂದ ತುಂಬಾ ನಿರಾಸೆಯಾಗುತ್ತದೆ. ಇನ್ನಾದರೂ ಸೂಕ್ತ ಉತ್ತರಗಳನ್ನು ಪ್ರಕಟಿಸುವ ಮೂಲಕ ಆಗಿರುವ ಗೊಂದಲಗಳನ್ನು ನಿವಾರಿಸಲಿ ಎಂಬುದು ಉದ್ಯೋಗಾ ಕಾಂಕ್ಷಿಗಳ ಹಕ್ಕೊತ್ತಾಯ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಮ್ಮ ಜತೆ ಚೆಲ್ಲಾಟ ಆಡುತ್ತಿದೆ. ನಾಲ್ಕು ವರ್ಷಗಳಿಂದ ಸತಾಯಿಸಿ ಈಗ ಪರೀಕ್ಷೆ ನಡೆಸಿದೆ. ಈಗ ನೀಡಿರುವ ಕೀ ಉತ್ತರಗಳು ತಾಳೆ ಆಗುತ್ತಿಲ್ಲ. ಸಾಕಷ್ಟು ಉತ್ತರಗಳು ಸರಿ ಹೊಂದುತ್ತಿಲ್ಲ. ಇದರಿಂದ ಪರೀಕ್ಷಾರ್ಥಿಗಳಿಗೆ ನಿರಾಸೆಯಾಗಲಿದೆ. ಪ್ರಾಧಿಕಾರ ಕಾಟಾಚಾರಕ್ಕೆ ಏಕೆ ಪರೀಕ್ಷೆ ನಡೆಸಬೇಕು. ಕೂಡಲೇ ಸರಿ ಉತ್ತರಗಳನ್ನು ಪ್ರಕಟಿಸಲಿ.
● ನೊಂದ ವಿದ್ಯಾರ್ಥಿಗಳು
ಆಕ್ಷೇಪಣೆ ಸುಲಭವಲ್ಲ
ಪ್ರತಿ ಅಂಕವೂ ಕೆಲಸ ಗಿಟ್ಟಿಸಿಕೊಳ್ಳಲು ಬಹಳ ಮುಖ್ಯ. ಹೀಗಾಗಿ ಒಂದೆರಡು ಪ್ರಶ್ನೆಗಳು ತಪ್ಪಾದಲ್ಲಿ ಆಕ್ಷೇಪಣೆ ಸಲ್ಲಿಸುತ್ತಾರೆ. ಅಲ್ಲದೇ, ಆಕ್ಷೇಪಣೆ ಸಲ್ಲಿಸಬೇಕಾದರೆ ಆ ಉತ್ತರದ ನಿಖರತೆ ಪ್ರಸ್ತುತಪಡಿಸಬೇಕು. ಸರ್ಕಾರದ ಮಾನ್ಯತೆ ಹೊಂದಿದ ಕಡತಗಳಲ್ಲಿ ಅದರ ಉಲ್ಲೇಖದ
ವಿವರಣೆ ನೀಡಿದಾಗ ಆ ಆಕ್ಷೇಪಣೆ ಅಂಗೀಕೃತವಾಗುತ್ತದೆ. ಆದರೆ, ಈಗಾಗಿರುವ ಅಷ್ಟು ತಪ್ಪುಗಳಿಗೆ ಉತ್ತರಗಳನ್ನು ದಾಖಲೆ ಸಮೇತ ಹುಡುಕಿ ಆಕ್ಷೇಪಣೆ ಸಲ್ಲಿಸುವುದು ಕಷ್ಟದ ಕೆಲಸ ಎನ್ನುವುದು ಆಕಾಂಕ್ಷಿಗಳ ಅಳಲು
ಇದೆಲ್ಲ ವದಂತಿ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇ ಶಕರು, ಉತ್ತರಗಳನ್ನು ಪರಿಶೀಲಿಸುವಾಗ ತಮ್ಮ ಪ್ರಶ್ನೆ ಪತ್ರಿಕೆ ವರ್ಷನ್ ಕೋಡ್ ಅನುಸಾರ ನೋಡಬೇಕು. ಕೆಲವರು ಉತ್ತರಗಳು ತಪ್ಪಿವೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆಕ್ಷೇಪಣೆ ಇದ್ದಲ್ಲಿ ಆನ್‌ಲೈನ್‌ನಲ್ಲಿ ನಿಗದಿತ ದಿನಾಂಕದೊಳಗೆ ಸಲ್ಲಿಸುವಂತೆ ತಿಳಿಸಿದ್ದಾರೆ.
ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.