Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ
ಕನ್ನಡರಾಮಯ್ಯ ಎನ್ನಬೇಕು
Team Udayavani, Oct 6, 2024, 6:00 AM IST
ರಾಯಚೂರು: ಪರಭಾಷೆ ಬಳಕೆಯಲ್ಲಿ ಕನ್ನಡಿಗರು ಉದಾರಿತನ ತೋರುವುದು ಸಲ್ಲದು. ಕರ್ನಾಟಕದಲ್ಲಿ ಕನ್ನಡವೇ ಅಗ್ರ ಮತ್ತು ಆಡಳಿತ ಭಾಷೆ ಆಗಬೇಕು. ಹಾಗಾಗಬೇಕಾದರೆ ಇಲ್ಲಿ ನೆಲೆಸುವವರು ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟ’ ಕುರಿತ ವಿಭಾಗೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬೇರೆ ಭಾಷೆ ಕಲಿಯಬಾರದು ಎಂದಲ್ಲ. ನಮ್ಮ ಭಾಷೆಗೆ ಮೊದಲ ಆದ್ಯತೆ ಸಿಗಬೇಕು. ಅಂದಾಗ ಮಾತ್ರ ಕನ್ನಡ ಅಬಾ ಧಿತವಾಗಿರಲು ಸಾಧ್ಯ. ನೆಲ, ಜಲ, ಸಂಸ್ಕೃತಿ, ಭಾಷೆ, ಭೂಮಿ ಎಲ್ಲವೂ ಕನ್ನಡಮಯವಾಗಲಿ. ಇಲ್ಲಿ ನೆಲೆಸಿದ ಎಲ್ಲರೂ ಕನ್ನಡಿಗರೇ. ಮನೆಯ ಭಾಷೆ ಯಾವುದಾಗಿದ್ದರೂ ವ್ಯವಹಾರಿಕ ಭಾಷೆ ಕನ್ನಡವಾಗಲಿ. ಏಳು ಕೋಟಿ ಕನ್ನಡಿಗರ ಉಸಿರಾಗಲಿ ಎಂದರು.
ಮಾತೃಭಾಷೆಯ ರಕ್ಷಣೆಗೆ ಕಾವಲು ಸಮಿತಿ ರಚಿಸಿರುವುದು ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಈಗ ಅದೇ ಕನ್ನಡ ಅಭಿವೃದ್ಧಿ ಪ್ರಾಧಿ ಕಾರವಾಗಿದೆ. ಡಾ| ರಾಜ್‌ಕುಮಾರ್ ಗೋಕಾಕ್ ಚಳವಳಿಗೆ ಇಳಿದಾಗ ಹೋರಾಟಕ್ಕೆ ವೇಗ ಸಿಕ್ಕಿತು. ಅದನ್ನು ಕನ್ನಡ ಚಳವಳಿ, ಭಾಷಾ ಚಳವಳಿ ಎಂದೇ ಕರೆಯಲಾಯಿತು. ರಾಜ್ಯದಲ್ಲಿ ಐತಿಹಾಸಿಕವಾಗಿ ನಡೆದ ಹೋರಾಟ ಇದ್ದರೆ ಅದು ಗೋಕಾಕ್ ಚಳವಳಿ. ಇದನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದಲೇ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ನಾನು ಕಾವಲು ಸಮಿತಿ ಅಧ್ಯಕ್ಷನಾಗಿದ್ದಾಗ ಇಂಗ್ಲಿಷ್ ಟೈಪ್‌ರೈಟರ್‌ಗಳನ್ನು ಕಿತ್ತುಕೊಂಡು ಕನ್ನಡ ಟೈಪ್‌ರೈಟರ್‌ಗಳನ್ನು ಕೊಡುತ್ತಿದ್ದೆ ಎಂದು ಸ್ಮರಿಸಿದ ಅವರು, ಮಾತೃಭಾಷೆ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳದೆ ಅಭಿಮಾನ ಬೆಳೆಸಿಕೊಳ್ಳಬೇಕು. ಆಂಧ್ರ- ತೆಲಂಗಾಣದ ಪಕ್ಕದ ಜಿಲ್ಲೆ ರಾಯಚೂರಲ್ಲಿ ತೆಲುಗು, ಉರ್ದು ಭಾಷೆ ಪ್ರಭಾವವಿದೆ. ಬೀದರ್‌ನಲ್ಲಿ ಮರಾಠಿ, ಕಲಬುರಗಿಯಲ್ಲಿ ಉರ್ದು ಮಾತನಾಡುವವರು ಇದ್ದಾರೆ. ಕನ್ನಡ ಮಾತನಾಡುವ ಬೇರೆ ಭಾಷಿಕ ಪ್ರಾಂತಗಳನ್ನು ಒಗ್ಗೂಡಿಸಿ ಕರ್ನಾಟಕ ಏಕೀಕರಣ ಮಾಡಲಾಯಿತು. 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಈ ಸಂಭ್ರಮಕ್ಕೆ 50 ವರ್ಷ ತುಂಬಿದ ಕಾರಣಕ್ಕೆ ಬರುವ ನ.1ರವರೆಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಂದು ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ನಡೆಸಲಾಗುವುದು ಎಂದರು.
ಕನ್ನಡರಾಮಯ್ಯ ಎನ್ನಬೇಕು
ಸಿಎಂ ಸಿದ್ದರಾಮಯ್ಯ ಸಹಿ ಕನ್ನಡದಲ್ಲೇ ಮಾಡುತ್ತಾರೆ. ಕಡತಗಳು ಸಹ ಕನ್ನಡದಲ್ಲಿ ಮಾಡಬೇಕು ಎಂದು ಆದೇಶಿಸಿದ್ದಾರೆ. ಹೀಗಾಗಿ ಅವರನ್ನು ಕನ್ನಡರಾಮಯ್ಯ ಎಂದು ಕರೆಯಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು. ಕನ್ನಡದ ಬಗ್ಗೆ ಅವರಿಗಿರುವಷ್ಟು ಕಾಳಜಿ ಬದ್ಧತೆ ಯಾರಲ್ಲೂ ಕಂಡಿಲ್ಲ. ಈ ಕಾರ್ಯಕ್ರಮಕ್ಕೆ ಅವರೇ ಖುದ್ದು ಪಾಲ್ಗೊಂಡಿರುವುದೇ ಇದಕ್ಕೆ ಸಾಕ್ಷಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.