Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
ಅಧಿವೇಶನ, ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆ; ಫೆಬ್ರವರಿಯ ಬಜೆಟ್ ಮಂಡನೆ ಬಳಿಕ ಪುನಾರಚನೆ?
Team Udayavani, Nov 28, 2024, 7:10 AM IST
ಬೆಂಗಳೂರು: ಸಂಪುಟ ಪುನಾರಚನೆ ಅಥವಾ ವಿಸ್ತರಣೆಗೆ ಪಕ್ಷ, ಹೈಕಮಾಂಡ್ ತಯಾರಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಹಿಂಜರಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಪಚುನಾವಣೆ ಗೆಲುವಿನ ಬಳಿಕ ಬಿ. ನಾಗೇಂದ್ರ ಅವರ ಮರು ಸೇರ್ಪಡೆ ಯೋಚನೆಯಲ್ಲಿದ್ದ ಸಿದ್ದರಾಮಯ್ಯ ಮುಂದೆ ಇಡೀ ಸಂಪುಟ ಪುನಾರಚಿ ಸುವ ಆಲೋಚನೆ ಸುಳಿಯುತ್ತಿಲ್ಲ.
ಆದರೆ ಪುನಾರಚನೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಸುಳಿವು ನೀಡಿದ್ದು, ಕೆಲವು ಸಚಿವರೂ ದನಿಗೂಡಿಸಿದ್ದಾರೆ. ಚಳಿಗಾಲದ ಅಧಿವೇಶನದ ಬಳಿಕ ಸಂಪುಟ ಪುನಾರಚನೆ ಆಗುತ್ತದೆ ಎನ್ನುವ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಇವೆ.
ಡಿ. 9ರಿಂದ 20ರ ವರೆಗೆ ಬೆಳಗಾವಿ ಅಧಿವೇಶನ, ಅನಂತರದ ಎರಡು ದಿನ ಮಂಡದ್ಯದಲ್ಲಿ ಅಖೀಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನ, ಬಳಿಕ ಮತ್ತೆ ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನಗಳು ಇರುವುದರಿಂದ ಮುಖ್ಯಮಂತ್ರಿ ವ್ಯಸ್ತರಾಗಲಿದ್ದಾರೆ. ಇದೆಲ್ಲ ಮುಗಿಯುವ ವೇಳೆಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನಗಳು ಸಾಲಾಗಿ ಬರಲಿದ್ದು, ಅದರತ್ತ ಸಹ ಗಮನ ಹರಿಸಬೇಕಿದೆ.
ಜೇನುಗೂಡಿಗೆ ಕೈಹಾಕದಿರಲು ತೀರ್ಮಾನ
ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ಇನ್ನು ಸರಕಾರ ರಚನೆಯಾಗಿ ಒಂದೂವರೆ ವರ್ಷವಷ್ಟೇ ಆಗಿರುವುದರಿಂದ ಸಂಪುಟದಲ್ಲಿ ಯಾವುದೇ ಹುದ್ದೆ ಖಾಲಿಯೂ ಇಲ್ಲ. ಪುನಾರಚನೆ ಮಾಡಬೇಕಾದರೆ ಒಂದಷ್ಟು ಸಚಿವರನ್ನು ಕೈಬಿಡಬೇಕು. ಜೇನುಗೂಡಿಗೆ ಕೈಹಾಕುವ ಬದಲು ಸುಮ್ಮನಿರುವುದು ಒಳಿತು ಎಂಬ ನಿರ್ಧಾರಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ ಎಂದು ಅವರ ಆಪ್ತಮೂಲಗಳು ಹೇಳಿವೆ.
ಬಜೆಟ್ ತಯಾರಿಯತ್ತ ಚಿತ್ತ
ಒಂದೆಡೆ ಶಾಸಕರಿಗೆ ಅನುದಾನ ಸಿಗದ ಅಸಮಾಧಾನಗಳು ಗ್ಯಾರಂಟಿ ಯೋಜನೆಗಳತ್ತ ಹೊರಳುತ್ತಿದ್ದು, ಲೋಕಸಭೆ ಚುನಾವಣೆ, ಉಪ ಚುನಾವಣೆಗಳ ಬಳಿಕ ಸರಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ಪುಷ್ಟಿ ಕೊಟ್ಟಂತಾಗುತ್ತಿದೆ. ಸಾಲದ್ದಕ್ಕೆ ಇತ್ತೀಚೆಗೆ ಬಿಪಿಎಲ್ ಕಾರ್ಡ್ ರದ್ದತಿ ವಿಚಾರವು ವಿವಾದದ ಸ್ವರೂಪ ಪಡೆದಿದ್ದು, ಇದಕ್ಕೆಲ್ಲ ಇತಿಶ್ರೀ ಹಾಡಿ ಆಗಿದೆ. ಜತೆಗೆ ಮುಂದಿನ ಬಜೆಟ್‌ನಲ್ಲಾದರೂ ಶಾಸಕರಿಗೆ ಅನುದಾನಗಳನ್ನು ಒದಗಿಸಲೇಬೇಕಾದ ಅನಿವಾರ್ಯ ಇದ್ದು, ಸಂಪನ್ಮೂಲ ಕ್ರೋಡೀಕರಣದತ್ತ ಸಿಎಂ ಚಿತ್ತ ಹರಿಸಲಿದ್ದಾರೆ.
ಬಜೆಟ್ ಅನಂತರ ಸಂಪುಟ ಪುನಾರಚನೆ?
ಸದ್ಯಕ್ಕೆ ನಾಗೇಂದ್ರರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಷ್ಟೇ ಸಿದ್ದರಾಮಯ್ಯ ಮನಸ್ಸಿನಲ್ಲಿದೆ. ಬಜೆಟ್ ಅಧಿವೇಶನದ ಅನಂತರ ಸಂಪುಟ ಪುನಾರಚನೆ ಮಾಡುವ ಪ್ರಸ್ತಾವ ಚರ್ಚೆಗೆ ಬರುವ ಸಾಧ್ಯತೆ ಇದೆ. ಜತೆಗೆ ಹೈಕಮಾಂಡ್ ಬಳಿ ಸಂಪುಟ ಸೇರಬೇಕಾದವರ ಪಟ್ಟಿ ಸಿದ್ಧವಿರುವುದರಿಂದ ಹೈಕಮಾಂಡ್‌ಗೆ ಹೇಗೆ ಮನವರಿಕೆ ಮಾಡಿಕೊಡುತ್ತಾರೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ.
ಏಕೆ ನಿರಾಸಕ್ತಿ?
1.ಸರಕಾರ ರಚನೆಯಾಗಿ ಈಗಷ್ಟೇ ಒಂದೂವರೆ ವರ್ಷ ಆಗಿದ್ದರಿಂದ ಇನ್ನಷ್ಟು ಕಾಯುವುದಕ್ಕೆ ಸಿಎಂ ಒಲವು
2.ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿ ಹಲವು ಆರೋಪಗಳು ಇನ್ನೂ ಚಾಲ್ತಿಯಲ್ಲಿರುವುದರಿಂದ ಈ ನಿರ್ಧಾರ?
3.ಸಂಪುಟದಲ್ಲಿ ಸದ್ಯ ಯಾವುದೇ ಹುದ್ದೆ ಖಾಲಿ ಇಲ್ಲ. ಒಂದೊಮ್ಮೆ ವಿಸ್ತರಣೆ ಮಾಡಬೇಕಂದರೆ ನಾಗೇಂದ್ರ ಮಾತ್ರ ಸೇರ್ಪಡೆ ಸಾಧ್ಯತೆ
4.ಬಜೆಟ್ ತಯಾರಿಯತ್ತ ಸಿಎಂ ಸಿದ್ದರಾಮಯ್ಯ ಗಮನ, ಶಾಸಕರಿಗೆ ಅನುದಾನ ಒದಗಿಸಲು ಸಿಎಂ ಕಸರತ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Chamarajanagara: ತರಗತಿಯಲ್ಲಿ ಕುಸಿದು ಬಿದ್ದು ಮೂರನೇ ತರಗತಿ ಬಾಲಕಿ ಸಾವು
HMP ವೈರಸ್: ಜನರು ಭಯಪಡುವ ಅಗತ್ಯವಿಲ್ಲ-ಮಾಸ್ಕ್ ಬಗ್ಗೆ ಸಚಿವ ಗುಂಡೂರಾವ್ ಹೇಳಿದ್ದೇನು?
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.