![Maha Kumbh 2025: Minister Prahlad Joshi takes holy dip at Triveni Sangam](https://www.udayavani.com/wp-content/uploads/2025/02/js-415x231.jpg)
![Maha Kumbh 2025: Minister Prahlad Joshi takes holy dip at Triveni Sangam](https://www.udayavani.com/wp-content/uploads/2025/02/js-415x231.jpg)
Team Udayavani, Jan 30, 2025, 7:20 AM IST
ಬೆಂಗಳೂರು: ಮೈಕ್ರೋ ಫೈನಾನ್ಸ್ ಹಾಗೂ ಲೇವಾ ದೇವಿದಾರರ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಸಿದ್ಧಪಡಿಸಿರುವ ಅಧ್ಯಾದೇಶ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ.
ಕರಡು ಸಿದ್ಧತೆಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳ ಜತೆಗೆ ಸುದೀರ್ಘ ಸಭೆ ನಡೆಸಿದ ಕಾನೂನು-ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ಹಾಗೂ ಗೃಹಸಚಿವ ಡಾ| ಜಿ. ಪರಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಮೈಕ್ರೋ ಫೈನಾನ್ಸ್ ಕಂಪೆನಿಗಳು ಹಾಗೂ ಲೇವಾದೇವಿದಾರ ರಿಗೆ ಕಡಿವಾಣ ಹಾಕಲು ಸಿದ್ಧಪಡಿಸಿದ ಕರಡು ಮಸೂದೆ ಯನ್ನು ಗುರುವಾರ ಮಂಡಿಸಲಾಗುವುದು.
ಈ ಸಂಬಂಧ ಗೃಹ ಇಲಾಖೆ, ಕಂದಾಯ, ಶಾಸನ ರಚನೆ, ಕಾನೂನು, ಸಹಕಾರ ಇಲಾಖೆಯ ಉನ್ನತಾಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ್ದೇವೆ. ಬುಧವಾರವೇ ಮುಖ್ಯಮಂತ್ರಿಗಳಿಗೆ ಕರಡು ಸಲ್ಲಿಸುತ್ತೇವೆ. ಗುರುವಾರದ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದರು.
ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಕಿರುಸಾಲ ನೀಡುವ ಹಣಕಾಸು ಸಂಸ್ಥೆಗಳ ಆರ್ಥಿಕ ವ್ಯವಹಾರಗಳಿಗೆ ಹೊಸ ಕಾನೂನು ಕಡಿವಾಣ ಹಾಕುವುದಿಲ್ಲ. ಸಾಲ ಇಷ್ಟೇ ಕೊಡಬೇಕು ಎಂಬ ನಿರ್ಬಂಧವನ್ನೂ ಹೇರುವುದಿಲ್ಲ. ನಿಯಮ ಬಾಹಿರ, ಬಲವಂತದ ಸಾಲ ವಸೂಲಾತಿಗೆ ತಡೆ ಹಾಕಲಾಗುವುದು. ಅಧಿವೇಶನದವರೆಗೂ ಕಾಯದೆ ತತ್‌ಕ್ಷಣ ಅಧ್ಯಾದೇಶ ಹೊರಡಿಸಲಾಗುತ್ತಿದೆ ಎಂದರು.
ಜಿ. ಪರಮೇಶ್ವರ್ ಮಾತನಾಡಿ, ಸಮಾಜದಲ್ಲಿ ಬಡವರೇ ಅಧಿಕ ಸಂಖ್ಯೆಯಲ್ಲಿ ಕಿರುಸಾಲ ತೆಗೆದುಕೊಳ್ಳುತ್ತಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ತೊಂದರೆಗೆ ಒಳಗಾದವರು ದೂರು ನೀಡದಿದ್ದರೂ ಸ್ಥಳೀಯರ ಅಭಿಪ್ರಾಯ ಪಡೆದು, ಸಾಕ್ಷಿಗಳನ್ನು ಪರಿಗಣಿಸಿ ಸ್ವಯಂ ದೂರು ದಾಖಲಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು. ಇದೇ ವೇಳೆ ಜನರಲ್ಲೂ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಏಕೆ ಅಧ್ಯಾದೇಶ?
-ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಳ
-ಕಿರುಕುಳ ತಾಳಲಾರದೇ ಹಲವರು ಆತ್ಮಹತ್ಯೆಗೆ ಶರಣು
-ಸಾಲಗಾರರ ಕಾಟಕ್ಕೆ ಬೆದರಿ ಗ್ರಾಮಗಳನ್ನೇ ತೊರೆದ ಹಲವರು
-ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ
-ಅಧ್ಯಾದೇಶ ಮೂಲಕ ಕಿರುಕುಳಕ್ಕೆ ಕಡಿವಾಣ ಹಾಕಲು ನಿರ್ಧಾರ
Maha kumbh 2025: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಸಚಿವ ಪ್ರಹ್ಲಾದ ಜೋಶಿ
ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ವಿಸ್ತರಣೆಗೆ ಚಿಂತನೆ: ದಿನೇಶ್ ಗುಂಡೂರಾವ್
Davanagere: ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿ ಇಲ್ಲ: ಸಚಿವ ಕೆ.ಜೆ. ಜಾರ್ಜ್
ಭೀಕರ ಅಪಘಾತ: ಎರಡು ಕಾರುಗಳು ನುಜ್ಜುಗುಜ್ಜು, ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಪ್ರಯಾಣಿಕರು
ದೇಶದ ಅಭಿವೃದ್ಧಿಗಾಗಿ ಪ್ರಧಾನಿ ಹುದ್ದೆಯನ್ನು ಬೇರೆಯವರಿಗೆ ಬಿಟ್ಟುಕೊಡಲಿ: ಸಂತೋಷ್ ಲಾಡ್
You seem to have an Ad Blocker on.
To continue reading, please turn it off or whitelist Udayavani.