KHB ನಿವೇಶನ ಖಾಲಿ ಬಿಟ್ಟರೆ “ದಂಡ’ ಪ್ರಯೋಗ

ಪ್ರಸ್ತುತ ಮಾರ್ಗಸೂಚಿ ಬೆಲೆಯ ಶೇ.25ರಷ್ಟು ದಂಡ ವಿಧಿಸಲು ಶಿಫಾರಸು

Team Udayavani, Nov 28, 2023, 7:25 AM IST

KHB ನಿವೇಶನ ಖಾಲಿ ಬಿಟ್ಟರೆ “ದಂಡ’ ಪ್ರಯೋಗ

ಬೆಂಗಳೂರು: ಕರ್ನಾಟಕ ಗೃಹಮಂಡಳಿ (ಕೆಎಚ್‌ಬಿ)ಯಿಂದ ಹಂಚಿಕೆಯಾದ ನಿವೇಶನಗಳನ್ನು ದೀರ್ಘ‌ಕಾಲ ಖಾಲಿ ಬಿಟ್ಟರೆ, ಅಂತಹ ಹಂಚಿಕೆದಾರರಿಗೆ ದಂಡ ವಿಧಿಸಲು ಸರ್ಕಾರಕ್ಕೆ ಕರ್ನಾಟಕ ಆಡಳಿಯ ಸುಧಾರಣಾ ಆಯೋಗ-2 ಶಿಫಾರಸು ಮಾಡಿದೆ.

ಕೆಎಚ್‌ಬಿ ಮನೆಗಳನ್ನು ನಿರ್ಮಿಸುವ ಬದಲು ನಿವೇಶನಗಳ ರಚನೆ ಮತ್ತು ಹಂಚಿಕೆಗೆ ಹೆಚ್ಚು ಗಮನ ಹರಿಸುತ್ತಿದೆ. ಅನೇಕ ಸೈಟ್‌ ಹಂಚಿಕೆದಾರರು ತಮ್ಮ ನಿವೇಶನಗಳಲ್ಲಿ ನಿಗದಿತ ಅವಧಿಯೊಳಗೆ ಮನೆಗಳನ್ನು ನಿರ್ಮಿಸುವ ಬದಲು ಹೂಡಿಕೆಯಾಗಿ ಇಟ್ಟುಕೊಳ್ಳುತ್ತಾರೆ. ನಿವೇಶನಗಳನ್ನು ಖಾಲಿ ಇಡುವುದನ್ನು ತಡೆಯುವುದು ಮತ್ತು ವಿಳಂಬವಿಲ್ಲದೆ ಮನೆ ನಿರ್ಮಿಸಲು ಹಂಚಿಕೆದಾರರನ್ನು ಪ್ರೇರೇಪಿಸಲು ಎರಡು ಕ್ರಮಗಳನ್ನು ಶಿಫಾರಸು ಮಾಡಿದೆ.

ಖಾಲಿ ನಿವೇಶನಗಳ ಸಂಪೂರ್ಣ ಮಾರಾಟ ಪತ್ರವನ್ನು ನೋಂದಾಯಿಸಲು ನಿವೇಶನದ ಪ್ರಸ್ತುತ ಮಾರ್ಗಸೂಚಿ ಬೆಲೆಯ ಶೇ.25ರಷ್ಟು ದಂಡ ವಿಧಿಸಬಹುದು. ಖಾಲಿ ನಿವೇಶನಗಳ ಮೇಲೆ ವಿಧಿಸಲಾಗುವ ನಿರ್ವಹಣಾ ಶುಲ್ಕವು ನಿರ್ಮಿಸಲಾದ ಮನೆಗಳ ಮೇಲೆ ವಿಧಿಸುವ ಶುಲ್ಕಕ್ಕಿಂತ ಎರಡುಪಟ್ಟು ವಿಧಿಸಬಹುದು. ಇದು ಖಾಲಿ ನಿವೇಶನದಿಂದ ನಿಯಮಿತವಾಗಿ ಮರ-ಗಿಡಗಳ ತೆರವು, ಘನತ್ಯಾಜ್ಯ ತೆರವುಗೊಳಿಸುವ ವೆಚ್ಚ ಒಳಗೊಂಡಿರಬೇಕೆಂಬ ಷರತ್ತು ವಿಧಿಸಬಹುದು ಎಂದಿದೆ.

ನಿರ್ಮಾಣ ವೆಚ್ಚದ ಮೇಲೆ ಕಟ್ಟಡ ನಕ್ಷೆ ಶುಲ್ಕ: ಕಟ್ಟಡ ನಕ್ಷೆಯ ಅನುಮೋದನೆಗಾಗಿ 2013ರಲ್ಲಿ 10 ರೂ.ಗಳ ಶುಲ್ಕ ನಿಗದಿಪಡಿಸಿತ್ತು. ಪ್ರತಿ ಕಟ್ಟಡ ಯೋಜನೆಗೆ ಕಟ್ಟಡ ನಕ್ಷೆ ಅನುಮೋದನೆ, ರಸ್ತೆ ಕಟಾವಣಾ ಶುಲ್ಕ, ಅಭಿವೃದ್ಧಿ ಶುಲ್ಕ, ಸಾಮಗ್ರಿ ಸಂಗ್ರಹ ಶುಲ್ಕವನ್ನು ಮೊತ್ತವಾಗಿ ನಿಗದಿಪಡಿಸುವ ಬದಲು, ಕಟ್ಟಡ ನಿರ್ಮಾಣದ ಅಂದಾಜು ವೆಚ್ಚದ ಶೇಕಡಾವಾರು ನಿಗದಿಪಡಿಸಬೇಕು. ಇನ್ನು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಸತಿ ಯೋಜನೆ (ಪಿಎಂಎಎವೈ)ಯಡಿ ಮನೆ ನಿರ್ಮಾಣ ವೆಚ್ಚದ ಅರ್ಧದಷ್ಟು ಮೊತ್ತವನ್ನು ಬ್ಯಾಂಕ್‌ಗಳಿಂದ ಸಾಲದ ರೂಪದಲ್ಲಿ ಪಡೆಯಲು ಅವಕಾಶವಿದೆ. ಆದರೆ, ಬ್ಯಾಂಕ್‌ಗಳು ಸಿಬಿಲ್‌ ಸ್ಕೋರ್‌ ಪರಿಗಣಿಸುತ್ತಿದ್ದು, ಈ ವ್ಯವಸ್ಥೆ ರದ್ದಾಗಿದ್ದರೂ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ಎಸ್‌ಎಲ್‌ಬಿಸಿ ಮೂಲಕ ಸೂಕ್ತ ಸ್ಪಷ್ಟನೆ ನೀಡಬೇಕು ಎಂದು ಶಿಫಾರಸು ಮಾಡಿದೆ.

ಜತೆಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿದ ಬಡಾವಣೆಗಳ ನಿರ್ವಹಣಾ ಶುಲ್ಕ ಪರಿಷ್ಕರಣೆಗೆ ಸಲಹೆ ನೀಡಿದ್ದು, ಹೆಚ್ಚು ಆದಾಯ ವರ್ಗಕ್ಕೆ ಪ್ರತಿ ಚ.ಮೀ.ಗೆ 240 ರೂ., ಮಧ್ಯಮ ಆದಾಯ ವರ್ಗಕ್ಕೆ 225 ರೂ., ಕಡಿಮೆ ಆದಾಯ ವರ್ಗಕ್ಕೆ 180 ರೂ. ಹಾಗೂ ಇಡಬ್ಲ್ಯುಎಸ್‌ಗೆ 105 ರೂ.ಗೆ ಹೆಚ್ಚಳ ಮಾಡಬಹುದು.

ಬಡಾವಣೆಗಳಿಗೆ ಮೂಲಸೌಕರ್ಯ: ಇನ್ನು ಪ್ರತಿ ನಿವೇಶನ ರಚನೆಗೆ ಎಕರೆಗೆ 3200 ರೂ.ಗಳನ್ನು ವಸತಿ ಇಲಾಖೆಯು ಏಜೆನ್ಸಿಗಳಿಗೆ ನೀಡುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಏಕರೂಪದ ದರವಿದೆ. ರಸ್ತೆ, ಚರಂಡಿ ಗಡಿ ಗುರುತು ಇತ್ಯಾದಿ ಮೂಲಸೌಕರ್ಯ ಒದಗಿಸಿ ನಿವೇಶನ ರಚಿಸಲು ಎಕರೆಗೆ 5 ಲಕ್ಷ ರೂ. ವರೆಗೆ ಹೆಚ್ಚಿಸಬಹುದು. ಶೇ.80ರಷ್ಟು ಮನೆಗಳ ನಿರ್ಮಾಣದ ನಂತರ ಬಡಾವಣೆಗೆ ನೀರು ಸರಬರಾಜು, ವಿದ್ಯುತ್‌ ಪೂರೈಕೆ, ಚರಂಡಿ ಇತ್ಯಾದಿಗಳನ್ನು ಮಾಡುವ ಬದಲು ಶೇ.40 ಅಥವಾ 50ರಷ್ಟು ಮನೆಗಳ ನಿರ್ಮಾಣವಾದ ಕೂಡಲೇ ಒದಗಿಸುವುದು ಸೂಕ್ತ.

ವಸತಿ ನಿವೇಶನ, ಮನೆಗಳ ಸಮೀಕ್ಷೆ: ಡಾ.ಬಿ.ಆರ್‌.ಅಂಬೇಡ್ಕರ್‌ ಸೇರಿ ವಿವಿಧ ವಸತಿ ಯೋಜನೆಗಳಡಿ ಹಂಚಿಕೆಯಾಗಿ ಖಾಲಿ ಇರುವ ಕೆಲ ಮನೆ, ನಿವೇಶನಗಳನ್ನು ಫ‌ಲಾನುಭವಿಗಳಲ್ಲದವರು ಅತಿಕ್ರಮಿಸಿಕೊಂಡಿದ್ದಾರೆ. ಕೆಲವೆಡೆ ಮಾಲೀಕತ್ವ ಪಡೆಯುವ ಮುನ್ನ ಹಂಚಿಕೆದಾರರೇ ಬಾಡಿಗೆ ಇತ್ಯಾದಿ ರೂಪದಲ್ಲಿ ಕೊಟ್ಟಿರುವುದೂ ಇದೆ. ಗ್ರಾಪಂಗಳ ಮೂಲಕ ಗ್ರಾಮೀಣ ಪ್ರದೇಶದ ಮಾಹಿತಿ ಪಡೆದು, ನಗರ ಪ್ರದೇಶದಲ್ಲಿ ಏಜೆನ್ಸಿ ಮೂಲಕ ನಿವೇಶನ ಮತ್ತು ಮನೆಗಳ ಸಮೀಕ್ಷೆ ನಡೆಸಬೇಕು. ಅನರ್ಹರಿಗೆ ಹಂಚಿಕೆಯಾಗಿರುವ ನಿವೇಶನ, ಮನೆಗಳನ್ನು ರದ್ದುಪಡಿಸಬೇಕು. ಅರ್ಹರಿಗೆ ಮಂಜೂರು ಮಾಡಲು ವಿಶೇಷ ಅಭಿಯಾನ ನಡೆಸಬೇಕು.
ಅತಿಕ್ರಮಿಸಿಕೊಂಡವರಿಂದ ಹಿಂಪಡೆದು, ಕಾನೂನು ಕ್ರಮ ಜರುಗಿಸಬಹುದು.

“ಕುಟುಂಬ’ ಡೇಟಾಬೇಸ್‌ಗೆ ಅಪ್‌ಲೋಡ್‌ ಮಾಡಬೇಕು: ರಾಜೀವಗಾಂಧಿ ವಸತಿ ನಿಗಮವು ಪ್ರತಿ ಫ‌ಲಾನುಭವಿಯ ಆಧಾರ್‌ ಸಂಖ್ಯೆ ಪಡೆದು ಸರ್ಕಾರದ “ಕುಟುಂಬ’ ಡೇಟಾಬೇಸ್‌ಗೆ ಅಪ್‌ಲೋಡ್‌ ಮಾಡುತ್ತದೆ. ಆದರೆ, ಗೃಹ ಮಂಡಳಿಯಾಗಲೀ, ಕೊಳೆಗೇರಿ ಅಭಿವೃದ್ಧಿ ಮಂಡಳಿಯಾಗಲೀ ಈ ಕೆಲಸ ಮಾಡದಿರುವುದರಿಂದ ಒಬ್ಬರಿಗೇ ಎರಡು ಯೋಜನೆಗಳ ಫ‌ಲ ಸಿಗುವ ಅಪಾಯವಿದ್ದು, ಅನರ್ಹ ಹಂಚಿಕೆದಾರರಿಗೂ ಸೌಲಭ್ಯ ವಿತರಣೆ ಆಗುತ್ತದೆ. ಇದನ್ನು ಸರಿಪಡಿಸಲು ಪ್ರತಿ ನಿವೇಶನ ಮತ್ತು ಮನೆಯ ಹಂಚಿಕೆದಾರರ ಆಧಾರ್‌ ವಿಲೀನಗೊಳಿಸಬೇಕು. ಅದನ್ನು ಕುಟುಂಬ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಇ-ಖಾತಾ, ಇ-ಸ್ವತ್ತು, ಬಿಬಿಎಂಪಿ, ಬಿಡಿಎಗಳ ಖಾತಾ ಡೇಟಾಬೇಸ್‌ಗಳಿಗೂ ವಿಲೀನಗೊಳಿಸಬೇಕೆಂದು ಶಿಫಾರಸು ಮಾಡಿದೆ.

2.16 ಲಕ್ಷ ಕುಟುಂಬಗಳಿಗೆ ಸಿಕ್ಕೇ ಇಲ್ಲ ಹಕ್ಕುಪತ್ರ
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ (ಕೆಎಸ್‌ಡಿಬಿ)ಯು ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಭೂಮಿಯಲ್ಲಿ 1,821 ಘೋಷಿತ ಕೊಳೆಗೇರಿಗಳನ್ನು ಗುರುತಿಸಿದ್ದು, ಇಲ್ಲಿನ 3.36 ಲಕ್ಷ ಕುಟುಂಬಗಳ ಪೈಕಿ 1.20 ಲಕ್ಷ ಕುಟುಂಬಗಳು ಮಾತ್ರ ಹಕ್ಕುಪತ್ರ ಪಡೆದಿವೆಯಾದರೂ ಇನ್ನೂ 2,16 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ, ಒಂದೆರಡು ವರ್ಷಗಳಲ್ಲಿ ಹಕ್ಕುಪತ್ರ ನೀಡಬೇಕೆಂದು ಶಿಫಾರಸು ಮಾಡಿದೆ.

ಮಂಡಳಿಯ ಜಮೀನು ಅತಿಕ್ರಮಿಸಿದವರಿಗೆ ಆ ಭೂಮಿಯ ಮಾರ್ಗಸೂಚಿ ಮೌಲ್ಯದ ಶೇಕಡಾವಾರು ದಂಡ ವಿಧಿಸಬಹುದು. ಅನಧಿಕೃತ ಸಾಗುವಳಿ ಮಾಡಿದರೆ 5 ಸಾವಿರ ರೂ.ಗಳಿಂದ 48 ಸಾವಿರ ರೂ.ವರೆಗೆ ದಂಡ, ನೋಟಿಸ್‌ ಅಥವಾ ನಿರ್ದೇಶನ ಉಲ್ಲಂ ಸಿದರೆ 36 ಸಾವಿರ ರೂ.ಗಳಿಂದ 72 ಸಾವಿರ ರೂ.ವರೆಗೆ ದಂಡ, ಅತಿಕ್ರಮ ತೆರವುಗೊಳಿಸುವ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ 35 ಸಾವಿರ ರೂ. ದಂಡ ವಿಧಿಸಲು ಶಿಫಾರಸು ಮಾಡಿದೆ.

ಟಾಪ್ ನ್ಯೂಸ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.