ಗ್ರಾ.ಪಂ. ಸ್ವಾರಸ್ಯ-ನಾಡ, ಮುಂಡ್ಕೂರು: ಒಂದು ಮತದ ಗೆಲುವು, ತಾಯಿಗೆ ಜಯ, ಮಗನಿಗೆ ಸೋಲು!
ಬಸ್ತಿಹಳ್ಳಿ ಗ್ರಾಮದ ಶಾಂತಕುಮಾರ್ ಅವರು ಕೇವಲ ಒಂದು ಮತದ ಅಂತರದಿಂದ ಗೆಲುವು
Team Udayavani, Dec 30, 2020, 2:18 PM IST
ಮಣಿಪಾಲ: ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿ ಪರಿಗಣಿಸಲ್ಪಟ್ಟಿರುವ ಗ್ರಾಮ ಪಂಚಾಯ್ತಿ ಚುನಾವಣೆಯ ಮತಎಣಿಕೆ ಬಿರುಸುಗೊಂಡಿದ್ದು, ಏತನ್ಮಧ್ಯೆ ಕೆಲವು ಕುತೂಹಲಕಾರಿ ಘಟನೆ ನಡೆದಿದೆ.
ಒಂದು ಮತದ ಅಂತರದಿಂದ ಗೆದ್ದ ಅದೃಷ್ಟಶಾಲಿಗಳು!
ಬೆಳ್ಮಣ್ಣು ಮುಂಡ್ಕೂರು ಗ್ರಾಮ ಪಂಚಾಯ್ತಿಯ 1ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಸರಳ ಶೆಟ್ಟಿ 339 ಮತ ಪಡೆದಿದ್ದು, ಪ್ರತಿಸ್ಪರ್ಧಿ ಪ್ರೇಮಾ ಶೆಟ್ಟಿ340 ಮತ ಗಳಿಸಿ ಕೇವಲ ಒಂದು ಮತದ ಅಂತರದಿಂದ ಜಯಗಳಿಸಿದ್ದಾರೆ.
ನಾಡ ಗ್ರಾ.ಪಂನಲ್ಲಿ ಗೆಲುವು ತಂದ 1 ಮತ:
ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಚಂದ್ರಶೇಖರ್ ಆಚಾರ್ಯ ಒಂದು ಮತದ ಅಂತರದಿಂದ ಜಯ ಸಾಧಿಸಿದ್ದಾರೆ. ಚಂದ್ರಶೇಖರ್ 170 ಮತ ಪಡೆದಿದ್ದು, ಪ್ರತಿಸ್ಪರ್ಧಿ ರಾಜು ಭಂಡಾರಿ 169 ಮತ ಗಳಿಸಿ ಪರಾಜಯಗೊಂಡಿದ್ದಾರೆ.
ಒಂದು ಮತದ ಗೆಲುವು:
ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಮ ಪಂಚಾಯ್ತಿಯ ಬಸ್ತಿಹಳ್ಳಿ ಗ್ರಾಮದ ಶಾಂತಕುಮಾರ್ ಅವರು ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸಮಬಲದ ಫಲಿತಾಂಶ- ಟಾಸ್ ನಲ್ಲಿ ಗೆದ್ದ ಅಭ್ಯರ್ಥಿ:
ಬಾಗಲಕೋಟೆ ಜಿಲ್ಲೆಯ ಗೊರಬಾಳ ಗ್ರಾಮ ಪಂಚಾಯ್ತಿಯ ಫಲಿತಾಂಶ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಇಲ್ಲಿನ ಗೋಪಶಾನಿ ವಾರ್ಡ್ ನ ಇಬ್ಬರು ಅಭ್ಯರ್ಥಿಗಳು ಸಮಾನ ಮತ ಪಡೆದಿದ್ದರು.
ಗೋಪಶಾನಿ ವಾರ್ಡ್ ನ ಮಹಾಂತೇಶ್ ಮತ್ತು ಕಳಕಪ್ಪ ತಲಾ 88 ಮತಗಳನ್ನು ಪಡೆದಿದ್ದು, ಸಮಬಲ ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಗೆಲುವು ನಿರ್ಧರಿಸಲು ಟಾಸ್ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.
ಚುನಾವಣಾಧಿಕಾರಿ ಇಬ್ಬರು ಅಭ್ಯರ್ಥಿಗಳ ಸಮ್ಮುಖದಲ್ಲಿ ಟಾಸ್ ಹಾಕಿದ್ದು, ಇದರಲ್ಲಿ ಅಭ್ಯರ್ಥಿ ಮಹಾಂತೇಶ್ ಗೆಲುವಿನ ನಗು ಬೀರಿದ್ದಾರೆ.
ಬೂಕನಕೆರೆ ಗ್ರಾ.ಪಂನಲ್ಲಿ ಲಾಟರಿ ಮೂಲಕ ಆಯ್ಕೆ!
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ತವರೂರು ಕೆಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮ ಪಂಚಾಯಿತಿ ಫಲಿತಾಂಶದಲ್ಲಿ ಸಮಬಲದ ಮತ ಪಡೆದಿದ ಪರಿಣಾಮ ಲಾಟರಿ ಡ್ರಾ ಮೂಲಕ ಅಭ್ಯರ್ಥಿ ಆಯ್ಕೆ ನಡೆದಿತ್ತು.
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರುಕ್ಮಿಣಮ್ಮ ತಲಾ 183 ಮತ ಪಡೆದಿದ್ದರು. ನಂತರ ಅಧಿಕಾರಿಗಳ ನಡೆಸಿದ ಲಾಟರಿ ಡ್ರಾ ಪರೀಕ್ಷೆಯಲ್ಲಿ ಜೆಡಿಎಸ್ ನ ಮಂಜುಳಾ ವಿಜೇತರಾಗುವ ಮೂಲಕ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಸಾಣಿಕೆರೆ ಅಭ್ಯರ್ಥಿಗೆ ಲಾಟರಿ ಮೂಲಕ ಗೆಲುವು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯ್ತಿಯ ಅಭ್ಯರ್ಥಿಗಳಾದ ಅಂಜು ಎಂ ಹಾಗೂ ಬಿ.ಎ.ಕ್ಷಿತಿಜಾ 375 ಮತ ಪಡೆದು ಸಮಬಲ ಸಾಧಿಸಿದ್ದರು. ಅಂತಿಮವಾಗಿ ಅಂಜು ಎ ಲಾಟರಿ ಮೂಲಕ ಗೆಲುವು ಸಾಧಿಸಿದ್ದಾರೆ.
ಸ್ಪರ್ಧೆಯಲ್ಲಿ ತಾಯಿಗೆ ಜಯ, ಮಗನಿಗೆ ಸೋಲು!
ಬೀದರ್ ತಾಲೂಕಿನ ಚಿಮಕೋಡ್ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ತಾಯಿ ಗೆಲುವು ಸಾಧಿಸಿದ್ದು, ಮಗ ಸೋಲನ್ನನುಭವಿಸಿದ್ದಾರೆ. ಚಿಮಕೋಡ್ ನ ಖಾಜಾಪುರ ಗ್ರಾಮದಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ತಾಯಿ ತುಳಜಮ್ಮ 244 ಮತ ಪಡೆದು ಜಯ ಗಳಿಸಿದ್ದಾರೆ. ಪುತ್ರ ಶಿವರಾಜ್ 255 ಮತ ಪಡೆದು ಪರಾಜಯಗೊಂಡಿದ್ದು, ಪ್ರತಿಸ್ಪರ್ಧಿ ಅನಿಲ್ 301 ಮತ ಪಡೆದು ಗೆಲುವು ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.