![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 10, 2021, 9:00 PM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ರಾಜಕೀಯವಾಗಿ ಜಿದ್ದಾಜಿದ್ದಿಯಾಗಿ ನಗರ ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳ ಚುನಾವಣೆಗೆ ಶುಕ್ರವಾರ ಮತದಾನ ನಡೆದಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಶೇ.99ಕ್ಕಿಂತ ಹೆಚ್ಚಿನ ಮತದಾನವಾಗಿದ್ದು, ಒಟ್ಟಾರೆ ಶೇ.99.78ರಷ್ಟು ಮತ ಪ್ರಮಾಣ ದಾಖಲಾಗಿದೆ.
ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿದ್ದ ಈ ಮೇಲ್ಮನೆ ಚುನಾವಣೆಗೆ ಸಂಸದರು, ಶಾಸಕರು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮತ ಚಲಾಯಿಸಿದರು. ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಡಿ.14ರಂದು ಫಲಿತಾಂಶ ಹೊರಬೀಳಲಿದೆ.
ಎಲ್ಲಾ ಕ್ಷೇತ್ರಗಳಲ್ಲಿ ಮತದಾನ ಶಾಂತಿಪೂರ್ಣವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾರರು ಇರುವ ಬೆಳಗಾವಿ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.99.98 ಹಾಗೂ ಅತಿ ಕಡಿಮೆ ಮತದಾರರು ಹೊಂದಿರುವ ಕೊಡಗು ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.99.70ರಷ್ಟು ಮತದಾನವಾಗಿದೆ. 2015ರ ವಿಧಾನಪರಿಷತ್ ಚುನಾವಣೆಯಲ್ಲಿ ಒಟ್ಟಾರೆ ಶೇ.99.60ರಷ್ಟು ಮತದಾನವಾಗಿತ್ತು.
ಶೇಕಡವಾರು ಮತದಾನ:
ಕ್ಷೇತ್ರ 2021 2015
– ಬೀದರ್ ಶೇ.99.83 ಶೇ. 99.61
– ಕಲಬುರಗಿ ಶೇ.99.73 ಶೇ. 99.71
– ವಿಜಯಪುರ ಶೇ.99.55 ಶೇ. 99.80
– ಬೆಳಗಾವಿ ಶೇ.99.98 ಶೇ. 99.01
– ಉತ್ತರ ಕನ್ನಡ ಶೇ.99.76 ಶೇ. 99.50
– ಧಾರವಾಡ ಶೇ.99.68 ಶೇ. 99.46
– ರಾಯಚೂರು ಶೇ.99.86 ಶೇ. 99.82
– ಬಳ್ಳಾರಿ ಶೇ.99.81 ಶೇ. 99.82
– ಚಿತ್ರದುರ್ಗ ಶೇ.99.88 ಶೇ. 99.79
– ಶಿವಮೊಗ್ಗ ಶೇ.99.86 ಶೇ. 99.47
– ದಕ್ಷಿಣ ಕನ್ನಡ ಶೇ.99.71 ಶೇ. 99.59
– ಚಿಕ್ಕಮಗಳೂರು ಶೇ.99.78 ಶೇ. 99.76
– ಹಾಸನ ಶೇ.99.78 ಶೇ. 99.81
– ತುಮಕೂರು ಶೇ.99.78 ಶೇ. 99.75
– ಮಂಡ್ಯ ಶೇ.99.85 ಶೇ. 99.80
– ಬೆಂಗಳೂರು ನಗರ ಶೇ.99.86 ಶೇ. 99.67
– ಬೆಂಗಳೂರು (ಗ್ರಾಂ) ಶೇ.99.90 ಶೇ. 99.77
– ಕೋಲಾರ ಶೇ.99.96 ಶೇ. 99.93
– ಕೊಡಗು ಶೇ.99.70 ಶೇ. 99.86
– ಮೈಸೂರು ಶೇ.99.73 ಶೇ. 99.88
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
You seem to have an Ad Blocker on.
To continue reading, please turn it off or whitelist Udayavani.