ಆಗಮನ-ನಿರ್ಗಮನಗಳ ಹಿಂದಿನ ರಾಜಕೀಯ ಕಸರತ್ತು


Team Udayavani, Jul 29, 2021, 7:00 AM IST

ಆಗಮನ-ನಿರ್ಗಮನಗಳ ಹಿಂದಿನ ರಾಜಕೀಯ ಕಸರತ್ತು

ಬಸವರಾಜ ಬೊಮ್ಮಾಯಿ ಅವರು 30ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹಲವು ರಾಜಕೀಯ ಕುತೂಹಲ, ಕಸರತ್ತುಗಳ ನಡುವೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ  ಆಪ್ತರಾದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಯೊಬ್ಬ ಮುಖ್ಯಮಂತ್ರಿಯ ಆಗಮನ ಹಾಗೂ ನಿರ್ಗಮನಗಳ ಹಿಂದೆ ಹಲವು ರಾಜಕೀಯ ಕಸರತ್ತುಗಳಿರುತ್ತವೆ. ಅಂಥ ವಿದ್ಯಮಾನಗಳ ಫ್ಲಾಶ್‌ಬ್ಯಾಕ್‌ ಇಲ್ಲಿದೆ.

 ದೇವರಾಜ ಅರಸು :

ಕಾಂಗ್ರೆಸ್‌ ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸಿ ಸಣ್ಣ ಸಣ್ಣ ಸಮುದಾಯ ಗುರುತಿಸಿ ಹೊಸ ಮುಖಗಳಿಗೆ ಅವಕಾಶ ಕೊಟ್ಟ ದೇವರಾಜ ಅರಸು 1972 ರಿಂದ 77ರ ವರೆಗೆ ಮುಖ್ಯ ಮಂತ್ರಿಯಾಗಿ ಅವಧಿ ಪೂರೈಸಿ ಮತ್ತೂಮ್ಮೆ ಅವರದೇ ನೇತೃತ್ವದಲ್ಲಿ ಚುನಾವಣೆ ನಡೆದು ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತಂದರು. ಆದರೆ ಇಂದಿರಾ ಗಾಂಧಿ ಹಾಗೂ ಸಂಜಯ ಗಾಂಧಿ ಅವಕೃಪೆಗೆ ಒಳಗಾಗಿ 1980ರಲ್ಲಿ ಅಧಿಕಾರ ಕಳೆದುಕೊಂಡರು. ದೇವ ರಾಜ ಅರಸು ಅವರು ಮುಖ್ಯ ಮಂತ್ರಿಯಾಗಿದ್ದಾಗ ಅವರನ್ನು ಸುತ್ತುವರಿದಿದ್ದವರು ಅವರನ್ನೇ ದೇವರು ಎಂಬಂತೆ ಕೊಂಡಾಡುತ್ತಿದ್ದವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ತತ್‌ಕ್ಷಣ ಹೊಸ ಮುಖ್ಯಮಂತ್ರಿ ಮನೆ ಮುಂದೆ ಜಮಾಯಿಸಿದ್ದರು. ರಾಜ್ಯ ರಾಜಕಾರಣದಲ್ಲಿ ದೇವರಾಜ ಅರಸು ಅವರು ಒಂದು ರೀತಿಯಲ್ಲಿ ದುರಂತ ನಾಯಕ ಎಂದೇ ಹೇಳಬಹುದು. ರಾಜಕೀಯವಾಗಿ ಪ್ರಾತಿನಿಧ್ಯ ಸಿಗದ ಸಮುದಾಯಗಳಿಗೆ ಅವಕಾಶ ಕೊಟ್ಟು ಬೆಳೆಸಿದ ಅನಂತರ ಅವರು ಬೆಳೆಸಿದವರೇ ಅವರ ಜತೆ ನಿಲ್ಲಲಿಲ್ಲ.

ಗುಂಡೂರಾವ್‌ :

ದೇವರಾಜ ಅರಸು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ ಅನಂತರ ಇಂದಿರಾಗಾಂಧಿ ಹಾಗೂ ಸಂಜಯಗಾಂಧಿ ಅವರಿಗೆ ಹತ್ತಿರವಾಗಿದ್ದ ಆರ್‌.ಗುಂಡೂರಾವ್‌ 1980ರಲ್ಲಿ ಮುಖ್ಯ ಮಂತ್ರಿಯಾದರು.  ಆದರೆ ಪಕ್ಷದ ಆಂತರಿಕ ಸಮಸ್ಯೆಗಳ ಕಾರಣ ಅವರೂ ಅವಧಿ ಪೂರ್ಣಗೊಳಿಸಲಾಗಲಿಲ್ಲ. ಅನಂತರ ರಾಜ್ಯ ರಾಜಕೀಯದಲ್ಲೂ ಅವರೇ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ಏರಲೂ ಆಗಲಿಲ್ಲ. ಗುಂಡೂರಾವ್‌ ರಾಜ್ಯ ರಾಜಕಾರಣದಲ್ಲಿ ವರ್ಣ ರಂಜಿತ ರಾಜಕಾರಣಿ ಎಂದೇ ಹೆಸರು ಪಡೆದಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸದಾ ಒಂದಿಲ್ಲೊಂದು ಹೇಳಿಕೆಗಳು ವಿವಾದದ ಸ್ವರೂಪ ಪಡೆದಿದ್ದವು. ದಿಲ್ಲಿ ಕಾಂಗ್ರೆಸ್‌ ನಾಯಕರ ಕೃಪೆಯಿಂದ ಮುಖ್ಯಮಂತ್ರಿಯಾದ ಅವರಿಗೆ ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿಲ್ಲ.

ವೀರೇಂದ್ರ ಪಾಟೀಲ್‌ :

ವೀರೇಂದ್ರ ಪಾಟೀಲ್‌ ಅವರು 1968ರಿಂದ 1971ರವರಗೆ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಅನಂತರ 1989ರಲ್ಲಿ ಅವರ ನೇತೃತ್ವದಲ್ಲೇ ವಿಧಾನಸಭೆ ಚುನಾವಣೆಗೆ ಹೋಗಿ ಭರ್ಜರಿ ಬಹುಮತ ಬಂದು ಎರಡನೇ ಬಾರಿ ಮುಖ್ಯಮಂತ್ರಿಯಾಗು ತ್ತಾರೆ. ಆದರೆ 1990ರಲ್ಲಿ ಅನಾ ರೋಗ್ಯ ಕಾರಣ ಅವರನ್ನು ಬದಲಾವಣೆ ಮಾಡಲಾಗು ತ್ತದೆ.  ಅನಂತರ ವೀರೇಂದ್ರ ಪಾಟೀಲ್‌ ರಾಜ್ಯ ರಾಜಕಾರಣ ದಿಂದ ತೆರೆಮರೆಗೆ ಸರಿದು ಮತ್ತೆ ಪ್ರವರ್ಧಮಾನಕ್ಕೆ ಬರಲೇ ಇಲ್ಲ. ರಾಜ್ಯ ರಾಜ ಕಾರಣದಲ್ಲಿ ವೀರೇಂದ್ರ ಪಾಟೀಲ್‌ ಲಿಂಗಾಯತ ಸಮು ದಾಯದಲ್ಲಿ ಪ್ರಭಾವಿ ನಾಯಕರಾಗಿದ್ದವರು.

ರಾಮಕೃಷ್ಣ  ಹೆಗಡೆ :

ಕೇಂದ್ರ ರಾಜಕಾರಣದಲ್ಲಿದ್ದ ರಾಮಕೃಷ್ಣ ಹೆಗಡೆ ಅವರು 1983ರಲ್ಲಿ ರಾಜ್ಯದಲ್ಲಿ ಪ್ರಥಮ ಕಾಂಗ್ರೆಸೇತರ ಸರಕಾರ

ದಲ್ಲಿ ಮುಖ್ಯಮಂತ್ರಿಯಾ ದರು. ಬಾಟಿÉಂಗ್‌ ಹಗರಣ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಹೋಗಿ 1985 ರಲ್ಲಿ ಮತ್ತೆ ಜನತಾಪಕ್ಷ ಅಧಿಕಾರಕ್ಕೆ ತಂದು ಎರಡನೇ ಬಾರಿ ಮುಖ್ಯಮಂತ್ರಿಯಾ ದರು. ಆದರೆ ಟೆಲಿಫೋನ್‌ ಟ್ಯಾಪಿಂಗ್‌ ಹಗರಣದಿಂದಾಗಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು.

ಎಚ್‌.ಡಿ. ದೇವೇಗೌಡ  :

ಎಚ್‌.ಡಿ.ದೇವೇಗೌಡ 1994 ರಲ್ಲಿ ಮುಖ್ಯಮಂತ್ರಿಯಾಗಿ 1996ರ ಲೋಕಸಭೆ ಚುನಾವಣೆ ಅನಂತರ ಅದೃಷ್ಟ ಒಲಿದು ಬಂದು ಪ್ರಧಾನಿಯಾದ್ದರಿಂದ ಮುಖ್ಯಮಂತ್ರಿ ಪದವಿ ಬಿಟ್ಟು ಹೋದರು. ಆಗ ಜೆ.ಎಚ್‌. ಪಟೇಲ್‌ ಅವರು ಮುಖ್ಯಮಂತ್ರಿಯಾಗಿ ಪಕ್ಷದ ಆಂತರಿಕ ಕಚ್ಚಾಟ, ಭಿನ್ನಮತದ ನಡುವೆಯೇ ಉಳಿದ ಅವಧಿ ಪೂರೈಸಿದರು. 1999 ರಲ್ಲಿ ಕಾಂಗ್ರೆಸ್‌ ಪಕ್ಷ ಎಸ್‌.ಎಂ.ಕೃಷ್ಣ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಬಹುಮತ ಬಂದು ಅವರೇ ಮುಖ್ಯಮಂತ್ರಿಯಾದರು. ಆರು ತಿಂಗಳ ಮುಂಚೆ ವಿಧಾನಸಭೆ ವಿಸರ್ಜಿಸಿ 2004 ರಲ್ಲಿ ಚುನಾವಣೆಗೆ ಹೋದರು. ಬಹುಮತ ಬರಲಿಲ್ಲ. ಆಗ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ರಚನೆಯಾಗಿ ಧರ್ಮಸಿಂಗ್‌ಗೆ ಮುಖ್ಯಮಂತ್ರಿ ಪದವಿ ಒಲಿಯಿತು. 2006ರ ವರೆಗೆ ಅವರು ಮುಖ್ಯಮಂತ್ರಿಯಾಗಿದ್ದರು.

ಎಸ್‌.ಬಂಗಾರಪ್ಪ :

ಸೋಶಿಯಲಿಸ್ಟ್‌ ಪಕ್ಷದ ಮೂಲಕ ರಾಜಕಾರಣ ಪ್ರವೇಶಿಸಿ ಅನಂತರ ಕಾಂಗ್ರೆಸ್‌ ಸೇರಿದ್ದ ಎಸ್‌.ಬಂಗಾರಪ್ಪ ಅವರು 1983 ರಲ್ಲಿ ಕ್ರಾಂತಿರಂಗ ಸ್ಥಾಪಿಸಿ ಜನತಾಪಕ್ಷದ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರು. ಆಗ ಮುಖ್ಯಮಂತ್ರಿ ಆಗುವ ಆಸೆ ಹೊಂದಿದ್ದರು. ಆದರೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರಿಂದ ಮತ್ತೆ ಕಾಂಗ್ರೆಸ್‌ ಸೇರಿ 1985 ರಲ್ಲಿ ವಿಪಕ್ಷ ನಾಯಕರಾ ದರು. 1990 ರಲ್ಲಿ ವೀರೇಂದ್ರ ಪಾಟೀಲ್‌ ಅವರನ್ನು ಅನಾರೋಗ್ಯ ಕಾರಣ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದಾಗ ಬಂಗಾರಪ್ಪ ಅವರು ಮುಖ್ಯಮಂತ್ರಿ ಆದರು. ಆದರೆ ಎರಡೇ ವರ್ಷದಲ್ಲಿ ಕ್ಲಾಸಿಕ್‌ ಕಂಪ್ಯೂಟರ್‌ ಹಗರಣ ಆರೋಪದಿಂದ ಹುದ್ದೆ ಕಳೆದುಕೊಂಡರು.

ಡಿ.ವಿ.ಸದಾನಂದ ಗೌಡ :

2008ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚನೆಯಾಗಿ 2011 ರಲ್ಲಿ ಈಗ ರಾಜ್ಯದಲ್ಲಿ ಉದ್ಭವಿಸಿರುವ ರಾಜಕೀಯ ಪರಿಸ್ಥಿತಿ ಮಾದರಿ ಯಲ್ಲಿಯೇ ವಿದ್ಯಮಾನಗಳು ಉಂಟಾಗಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾದ ಪ್ರಸಂಗ ಬಂದಾಗ  ಡಿ.ವಿ. ಸದಾ ನಂದ ಗೌಡರು 2011ರ ಆಗಸ್ಟ್‌ ತಿಂಗಳಲ್ಲಿ ಮುಖ್ಯಮಂತ್ರಿಯಾ ದರು. 2013ರ ವರೆಗೂ ವಿಧಾನ ಸಭೆ ಅವಧಿ ಇದ್ದರೂ ಪಕ್ಷದಲ್ಲಿನ ಆಂತರಿಕ ಸಂಘರ್ಷದಿಂದ 2012ರ ಜುಲೈಯಲ್ಲಿ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಬೇಕಾಯಿತು.

ಜಗದೀಶ್‌ ಶೆಟ್ಟರ್‌ :

ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಪಕ್ಷದ ಆಂತರಿಕ ಸಂಘರ್ಷದಿಂದ ಜಗದೀಶ್‌ ಶೆಟ್ಟರ್‌ ಅವರಿಗೆ 2012ರಲ್ಲಿ ಮುಖ್ಯ ಮಂತ್ರಿಯಾಗುವ ಯೋಗ ಬಂದಿತು. ಆದರೆ ಅವರ ಅವಧಿ ತೀರಾ ಕಡಿಮೆ ಇತ್ತು. 2013 ಮೇ ವರೆಗೆ ಅವರು ಅಧಿಕಾರ ದಲ್ಲಿದ್ದರು. ಇದರ ನಡುವೆ ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಕಟ್ಟಿದ್ದ ರಿಂದ ಹಾಗೂ ಅದರಿಂದಾದ ರಾಜಕೀಯ ಪರಿಣಾಮಗಳಿಂದಾಗಿ 2013 ರಲ್ಲಿ ಚುನಾವಣೆಗೆ ಹೋದಾಗ ಬಹುಮತ ಬರಲಿಲ್ಲ.

ಹೀಗಾಗಿ ಶೆಟ್ಟರ್‌ ಮತ್ತೂಂದು ಅವಧಿಗೆ ಮುಖ್ಯಮಂತ್ರಿ ಆಗುವುದು ತಪ್ಪಿತ್ತು.

ಬಿ.ಎಸ್‌.ಯಡಿಯೂರಪ್ಪ  :

ಬಿ.ಎಸ್‌. ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದು, 2007ರಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾದರೂ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದರು. ಅನಂತರ 2008ರಲ್ಲಿ ಅವರದೇ ನೇತೃತ್ವದಲ್ಲಿ ಚುನಾವಣೆ ನಡೆದು ಪಕ್ಷ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾದರೂ 2011 ರಲ್ಲಿ ಆರೋಪಗಳಿಂದಾಗಿ ರಾಜೀ ನಾಮೆ ನೀಡಬೇಕಾಯಿತು. ಕೆಜೆಪಿ ಕಟ್ಟಿ 2013ರ ವಿಧಾನಸಭೆ ಚುನಾ ವಣೆಯಲ್ಲಿ ಬಿಜೆಪಿಗೆ ಸಾಕಷ್ಟು ನಷ್ಟ ಮಾಡಿದ ಅವರು ಮತ್ತೆ ಬಿಜೆಪಿಗೆ ಬಂದು ರಾಜ್ಯಾಧ್ಯಕ್ಷರಾಗಿ ಅವರದೇ ನೇತೃತ್ವದಲ್ಲಿ 2018ರಲ್ಲಿ ಬಿಜೆಪಿ 105 ಸ್ಥಾನ ಪಡೆದು ಮುಖ್ಯ ಮಂತ್ರಿಯಾದರು. ಬಹುಮತ ಸಾಬೀತು ಮಾಡಲು ಆಗದೆ ರಾಜೀನಾಮೆ ನೀಡಿದರು. ಅನಂತರ  ಆಪರೇಷನ್‌ ಕಮಲ ಮೂಲಕ 17 ಶಾಸಕರ ಬಿಜೆಪಿ ಸೇರ್ಪಡೆಯಿಂದ ಬಿಜೆಪಿಗೆ ಬಹುಮತ ಬಂದು 2019ರಲ್ಲಿ ಮುಖ್ಯಮಂತ್ರಿಯಾದರು.  ಎರಡು ವರ್ಷಗಳ ಅನಂತರ  ಇದೇ ಜುಲೈ 26 ರಂದು ರಾಜೀನಾಮೆ ಘೋಷಿಸಿದರು.

ಎಚ್‌.ಡಿ.ಕುಮಾರಸ್ವಾಮಿ :

ಎಚ್‌.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯ ಮಂತ್ರಿಯಾದರು. ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಇವರು ಮುಖ್ಯಮಂತ್ರಿ ಆಗಲಿಲ್ಲ. ಅಚ್ಚರಿ ಎಂಬಂತೆ  2006ರಲ್ಲಿ ಬಿಜೆಪಿ ಜತೆ ಮೈತ್ರಿ ಸರಕಾರ ಮಾಡಿ 20 ತಿಂಗಳು ಮುಖ್ಯಮಂತ್ರಿ ಯಾಗಿದ್ದರು. ಮತ್ತೂಮ್ಮೆಯೂ ಅದೃಷ್ಟ ಖುಲಾಯಿಸಿ 2018ರಲ್ಲಿ ಕಾಂಗ್ರೆಸ್‌ ಜತೆ ಸೇರಿ ಮೈತ್ರಿ ಸರಕಾರ ಮಾಡಿ 13 ತಿಂಗಳು ಮುಖ್ಯಮಂತ್ರಿಯಾಗಿದ್ದರು. ಮೊದಲ ಬಾರಿ 20 ತಿಂಗಳು ಎಂದು  ಒಪ್ಪಂದವಾಗಿತ್ತು, ಆದರೆ ಎರಡನೇ ಬಾರಿ ಯಾವುದೇ ಒಪ್ಪಂದವಾಗಿರಲಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಮಹಾವಲಸೆಯಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು.

 

-ಎಸ್‌. ಲಕ್ಷ್ಮೀನಾರಾಯಣ

ಟಾಪ್ ನ್ಯೂಸ್

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ

BYV-Modi

Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ

Vidhana-Parishat

Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.