karnataka polls 2023: ಚುನಾವಣ ಅಸ್ತ್ರವಾಗುತ್ತಿರುವ ಕನ್ನಡ-ಕನ್ನಡಿಗ‌ ಅಸ್ಮಿತೆ

Team Udayavani, Apr 11, 2023, 6:15 AM IST

karnataka polls 2023: ಚುನಾವಣ ಅಸ್ತ್ರವಾಗುತ್ತಿರುವ ಕನ್ನಡ-ಕನ್ನಡಿಗ‌ ಅಸ್ಮಿತೆ

ಬೆಂಗಳೂರು: “ನಂದಿನಿ ಮೇಲೆ ಅಮುಲ್‌ ಸವಾರಿ…’ ಇದು ಈ ಹೊತ್ತಿನಲ್ಲಿ ರಾಜ್ಯ ಚುನಾವಣ ಕಣದಲ್ಲಿ ಕೇಳಿಬರುತ್ತಿರುವ ಬಹುದೊಡ್ಡ ಸದ್ದು.

ಪ್ರತಿ ಬಾರಿಯಂತೆ ಈ ಬಾರಿಯೂ ರಾಜ್ಯದ ಚುನಾವಣ ಪ್ರಚಾರ ಕಣದಲ್ಲಿ ಜಾತಿ, ಭ್ರಷ್ಟಾಚಾರ, ಅಭಿವೃದ್ಧಿ ಅಂಶಗಳು ಪ್ರಸ್ತಾಪಿತವಾಗುತ್ತಿದ್ದವು. ಆದರೆ, ಈಗ ಇದರ ಜತೆಗೆ ವಿಪಕ್ಷಗಳಿಗೆ ಕನ್ನಡ-ಕನ್ನಡಿಗ ಅಸ್ಮಿತೆಯ ಅಸ್ತ್ರವೊಂದನ್ನು ಎತ್ತಿಕೊಂಡಿದೆ. ನಂದಿನಿ ಮೇಲಿನ “ದಹಿ’ಯಿಂದ ಹಿಡಿದು, ಮಹಾರಾಷ್ಟ್ರ ಗಡಿಯಲ್ಲಿ ಆರೋಗ್ಯ ವಿಮೆ, ಸಿಆರ್‌ಪಿಎಫ್ ಪರೀಕ್ಷೆಯಲ್ಲಿ ಕನ್ನಡ ಅವಗಣನೆ ಮತ್ತು ಪ್ರಮುಖವಾಗಿ ನಂದಿನಿ ಮೇಲೆ ಗುಜರಾತ್‌ನ ಅಮುಲ್‌ ಸವಾರಿ ಅಂಶಗಳು ಸೇರಿಕೊಂಡಿವೆ. ವಿಪಕ್ಷಗಳು, ಕನ್ನಡಪರ ಸಂಘಟನೆಗಳು ಸಾಮಾಜಿಕ ಜಾಲತಾಣಗಳು, ಪ್ರಚಾರ ಕಣ, ಮಾಧ್ಯಮಗಳಲ್ಲಿ ಈ ಬಗ್ಗೆ ಆಡಳಿತ ಪಕ್ಷವನ್ನು ದೊಡ್ಡ ಮಟ್ಟದಲ್ಲಿಯೇ ಸಿಲುಕಿಸುತ್ತಿವೆ.  ಆಡಳಿತ ಪಕ್ಷ ತಡವಾಗಿ ಎಚ್ಚೆತ್ತುಕೊಂಡು ಪ್ರತಿಬಾಣ ಹೂಡಲಾರಂಭಿಸಿದೆ. ಅಮುಲ್‌ ವಿಚಾರದಲ್ಲಿ 2017ರಲ್ಲಿ ಕಾಂಗ್ರೆಸ್‌ ಸರಕಾರ ಇದ್ದಾಗಲೇ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಬಿಜೆಪಿ ಮರು ಬಾಣ ಹೂಡಿದ್ದು, ಕನ್ನಡ ಅಸ್ಮಿತೆ ಉಳಿಸಲು ತಾನು ಬದ್ಧ ಎಂದು ಹೇಳಿಕೊಂಡಿದೆ.

ಈ ವಿಷಯಗಳ ಮೇಲೆ ವಿಪಕ್ಷಗಳು ಕಿಡಿಕಾರಲು ಮುಖ್ಯ ಕಾರಣ ಕಾರಣ- ಎರಡೂ ವಿವಾದಗಳ ಕೇಂದ್ರಬಿಂದುಗಳಾದ ಎರಡೂ ರಾಜ್ಯಗಳಲ್ಲಿ (ಮಹಾರಾಷ್ಟ್ರ ಮತ್ತು ಗುಜರಾತ್‌) ಬಿಜೆಪಿ ಅಧಿಕಾರದಲ್ಲಿದೆ. ಅದರಲ್ಲೂ ಗುಜರಾತ್‌, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ತವರು. ಚುನಾವಣೆ ಹಿನ್ನೆಲೆಯಲ್ಲಿ ಅವರಿಬ್ಬರೂ ನಿರಂತರವಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಆ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಇದೇ ಹೊತ್ತಿನಲ್ಲಿ ವಿಪಕ್ಷಗಳಿಗೆ “ವರ’ವಾಗಿದ್ದೇ ನಂದಿನಿ ವರ್ಸಸ್‌ ಅಮುಲ್‌. ಹೆಚ್ಚು-ಕಡಿಮೆ ಇದೇ ಸಂದರ್ಭದಲ್ಲಿ ಬೆಳಗಾವಿ ಗಡಿ ಗ್ರಾಮಗಳಿಗೆ ನೆರೆಯ ಮಹಾರಾಷ್ಟ್ರ ಸರಕಾರ ತನ್ನ ಆರೋಗ್ಯ ಯೋಜನೆ ಜಾರಿಗೊಳಿಸಿದ್ದು ಮತ್ತಷ್ಟು ಕೆರಳಿಸಿದೆ.

ಕಿಡಿ ಹೊತ್ತಿಸಿದ “ದಹಿ’
ಮೊದಲಿಗೆ ನಂದಿನಿ ಮೊಸರಿನ ಪ್ಯಾಕೆಟ್‌ ಮೇಲೆ “ದಹಿ’ ಎಂದು ನಮೂದಿಸಿದ ವಿಚಾರ ವಿವಾದದ ಕಿಡಿಹೊತ್ತಿಸಿತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುವುದರ ಜತೆಗೆ ವಿಪಕ್ಷಗಳಿಗೂ ಇದು ಅಸ್ತ್ರವಾಯಿತು. ಹಿಂದಿ ಹೇರಿಕೆಯ ಮತ್ತೂಂದು ರೂಪ ಎಂದು ದಾಳಿ ನಡೆಸಿದವು. ಕನ್ನಡಪರ ಸಂಘಟನೆಗಳು, ವಿಪಕ್ಷಗಳ ಒತ್ತಡಕ್ಕೆ ಮಣಿದು ಭಾರತೀಯ ಆರೋಗ್ಯ ಗುಣಮಟ್ಟ ಪ್ರಾಧಿಕಾರ “ದಹಿ’ ಪದವನ್ನು ವಾಪಸ್‌ ತೆಗೆದುಕೊಂಡಿತು. ಇದಾದ ಬಳಿಕ, ಕರ್ನಾಟಕದ ಮಾರುಕಟ್ಟೆಗೆ ಗುಜರಾತ್‌ ಮೂಲದ ಅಮುಲ್‌ ಹಾಲಿನ ಪ್ರವೇಶದ ಸುದ್ದಿ ಬಂದಿತು. ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಲು ಅವಕಾಶ ಕಲ್ಪಿಸಲಾಯಿತು. ಇದರಿಂದ ಸ್ಥಳೀಯ ನಂದಿನಿ ಬ್ರ್ಯಾಂಡ್‌ಗೆ ಹೊಡೆತ ಬೀಳಲಿದೆ ಎಂಬುದು ವಿಪಕ್ಷಗಳು ಮತ್ತು ಕನ್ನಡ ಸಂಘಟನೆಗಳ ಆರೋಪ. ಈಗಾಗಲೇ ನೆರೆರಾಜ್ಯಗಳಿಂದ ಖಾಸಗಿ ಸಂಸ್ಥೆಗಳ ಹಾಲು ಮಾರಾಟವಾಗುತ್ತಿದ್ದರೂ, ಬೃಹತ್‌ ಸಹಕಾರಿ ಸಂಸ್ಥೆಯೊಂದರ ಹಾಲು ರಾಜ್ಯದ ಕೆಎಂಎಫ್ಗೆ ಅಪಾಯಕಾರಿ ಎನ್ನುವುದು ವಿಪಕ್ಷಗಳ ಆರೋಪ. ನೇರವಾಗಿ ರೈತರಿಗೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆೆ. ಆದರೆ 2017ರ ಜೂನ್‌ ತಿಂಗಳಲ್ಲಿಯೇ ಅಮುಲ್‌ ಹಾಲು ಮಾರಾಟದ ಪ್ರವೇಶಕ್ಕೆ ನಿರ್ಧಾರ ಆಗಿದೆ. ಆಗ ಸಿದ್ದರಾಮಯ್ಯ ಸರಕಾರ ಇತ್ತು ಎಂದು ಬಿಜೆಪಿ ಪ್ರತಿಪಾದಿಸಿದೆ.

ರಾಜ್ಯದಲ್ಲಿ ಸರಿಸುಮಾರು 30 ಲಕ್ಷ ರೈತ ಕುಟುಂಬಗಳು “ನಂದಿನಿ’ಯನ್ನು ಅವಲಂಬಿಸಿವೆ. ಅದರ ಜಾಗಕ್ಕೆ ಹೈನುಗಾರಿಕೆಯಲ್ಲಿ ಮುಂಚೂಣಿ ಯಲ್ಲಿರುವ ದೈತ್ಯ ಬ್ರ್ಯಾಂಡ್‌ ಅಮುಲ್‌ ಲಗ್ಗೆ ಇಡುತ್ತಿರುವುದು ಸಹಜವಾಗಿ ನಂದಿನಿ ಅಸ್ತಿತ್ವವನ್ನು ಅಲ್ಲಾಡಿಸುತ್ತದೆ ಎನ್ನುವುದು ವಿಪಕ್ಷಗಳ ಆರೋಪ. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು, “ಈ ವಿಚಾರದಲ್ಲಿ ರಾಜಕೀಯ ಸಲ್ಲದು. ನಂದಿನಿ ಬ್ರ್ಯಾಂಡ್‌ನ‌ ಉತ್ಪನ್ನಗಳು ಬೇರೆ ರಾಜ್ಯಗಳಲ್ಲಿ ಕೂಡ ಮಾರಾಟ ಆಗುತ್ತಿವೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಮುಲ್‌ ಹಿಮ್ಮೆಟ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾ ಗುತ್ತಿದೆ’ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

ಗಡಿ ಭಾಗದ ಹಳ್ಳಿಗಳಿಗೆ ಮಹಾರಾಷ್ಟ್ರ ಸರಕಾರ ತನ್ನ ಅನುದಾನದಲ್ಲಿ ಆರೋಗ್ಯ ಯೋಜನೆ ಜಾರಿ ಗೊಳಿಸಿತು. ಇದನ್ನು ಕೈಗೆತ್ತಿಕೊಂಡ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಆಡಳಿತ ಪಕ್ಷ ಬಿಜೆಪಿ ಮೇಲೆ ಮುಗಿಬಿದ್ದರು. “ನಮ್ಮ ರಾಜ್ಯದ ಹಳ್ಳಿಗಳಿಗೆ ಅಲ್ಲಿನ ಸರಕಾರದ ಅನುದಾನ ಯಾಕೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಗಟ್ಟಿ ದನಿಯಲ್ಲಿ ಮಾತನಾಡಿದರೂ, ಎಲ್ಲರಿಗೂ ಕೇಳುವಂತಿರಲಿಲ್ಲ.

ಮರಾಠಿಯಲ್ಲೇ ಮತಯಾಚನೆ!?
“ವಿಚಿತ್ರವೆಂದರೆ, ಹೀಗೆ ಕನ್ನಡಪರ ದನಿ ಎತ್ತುತ್ತಿರುವ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಅದೇ ಕನ್ನಡದ ಗಡಿಗಳಲ್ಲಿ ಮತಯಾಚನೆ ಮಾಡುವುದು ಮರಾಠಿಯಲ್ಲಿ. ಹಾಗಂತ, ಮಹಾರಾಷ್ಟ್ರ ಸರಕಾರದ ನಡೆಯನ್ನು ಸಮರ್ಥನೆ ಮಾಡುಕೊಳ್ಳುವಂತಿಲ್ಲ. ಬದಲಿಗೆ ಕನ್ನಡ ಅಸ್ತಿತ್ವಕ್ಕೆ ಅದು ಕೂಡ ಧಕ್ಕೆಯಾಗುವ ಒಂದು ಅಂಶ ಅಲ್ಲವೇ? ಎಂದು ವಿವಿಧ ಪಕ್ಷಗಳ ರಾಜಕೀಯ ನಾಯಕರು ಪ್ರಶ್ನಿಸುತ್ತಾರೆ. ಈ ಮಧ್ಯೆ ಸಿಆರ್‌ಪಿಎಫ್ ನೇಮಕಕ್ಕೆ ಸಂಬಂಧಿಸಿದ ಪರೀಕ್ಷೆಯಲ್ಲಿ   ಕನ್ನಡಕ್ಕೆ  ಅವಕಾಶವೇ ಇಲ್ಲ. ಇದರಿಂದ ಕನ್ನಡಿಗರಿಗೆ ಅನ್ಯಾಯ ಆಗಲಿದೆ ಎಂಬ ಆರೋಪ ಕೇಳಿಬರುತ್ತಿದೆ.

-ವಿಜಯಕುಮಾರ ಚಂದರಗಿ 

ಟಾಪ್ ನ್ಯೂಸ್

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.