ICSE: ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 99 ಮೀರಿದ ಫಲಿತಾಂಶ; ವಿದ್ಯಾರ್ಥಿನಿಯರೇ ಮೇಲುಗೈ
30 ಸಾವಿರ ವಿದ್ಯಾರ್ಥಿಗಳಲ್ಲಿ 59 ಮಂದಿಯಷ್ಟೇ ಅನುತ್ತೀರ್ಣ
Team Udayavani, May 7, 2024, 12:01 AM IST
ಬೆಂಗಳೂರು: ದಿಲ್ಲಿಯ ದಿ ಕೌನ್ಸಿಲ್ ಆಫ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್(ಐಎಸ್‌ಸಿಇ) ಐಸಿಎಸ್‌ಇ 10ನೇ ತರಗತಿ ಮತ್ತು ಐಎಸ್‌ಸಿ 12ನೇ ತರಗತಿಯ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ.
ಹತ್ತನೇ ತರಗತಿಯ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಶೇ. 99.83 ಮತ್ತು ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ಶೇ. 99.49 ಫಲಿತಾಂಶ ಪಡೆದಿದ್ದಾರೆ.
ರಾಜ್ಯದಲ್ಲಿ ಐಸಿಎಸ್‌ಇ 405 ಮತ್ತು ಐಎಸ್‌ಸಿಯ 51 ಶಾಲೆಗಳಿಂದ ವಿದ್ಯಾರ್ಥಿ ಗಳು ಪರೀಕ್ಷೆಗೆ ಹಾಜರಾಗಿದ್ದರು. ಐಸಿಎಸ್‌ಇ ಪರೀಕ್ಷೆಗೆ 14,001 ಬಾಲಕರು ಮತ್ತು 13,778 ಬಾಲಕಿಯರು ಸಹಿತ ಒಟ್ಟು 27,826 ವಿದ್ಯಾರ್ಥಿಗಳು ಹಾಗೂ ಐಎಸ್‌ಸಿ ಪರೀಕ್ಷೆಗೆ 1,089 ಹುಡುಗರು ಮತ್ತು 1,263 ಹುಡುಗಿಯರು ಸೇರಿ 2,364 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ವಿದ್ಯಾರ್ಥಿನಿಯರೇ ಮೇಲುಗೈ
ಎರಡೂ ಪರೀಕ್ಷೆಯಲ್ಲೂ ವಿದ್ಯಾರ್ಥಿನಿ ಯರೇ ಮೇಲುಗೈ ಸಾಧಿಸಿದ್ದಾರೆ. ಐಸಿಎಸ್‌ಇಯಲ್ಲಿ ಶೇ.99.93 ಬಾಲಕಿಯರು ಹಾಗೂ ಶೇ.99.73 ಬಾಲಕರು ತೇರ್ಗಡೆ ಆಗಿದ್ದಾರೆ. ಐಎಸ್‌ಸಿಯಲ್ಲಿ ಬಾಲಕಿಯರು ಶೇ.99.76 ಮತ್ತು ಬಾಲಕರು ಶೇ.99.18 ಉತ್ತೀರ್ಣರಾಗಿದ್ದಾರೆ.
ಬೆಂಗಳೂರಿನ ಮೂವರು ಐಸಿಎಸ್‌ಇ ಪರೀಕ್ಷೆಯಲ್ಲಿ ಶೇ.99.80 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಗ್ರೀನ್‌ವುಡ್ ಹೈನದ ಅದ್ರಿತಾ ತ್ರಿಪಾಠಿ, ಸರ್ಜಾಪುರ ಶಾಖೆಯ ಬೆಥನಿ ಹೈನ ಮೆಹೆರ್ ಎಫ್.ಅನ್ಸಿಲ್ ಮತ್ತು ಬಿಷಪ್ ಕಾಟನ್ ಬಾಲಕರ ಶಾಲೆಯ ವರುಣ್ ಶೇ.99.80 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಐಎಸ್‌ಸಿಯಲ್ಲಿ ಗ್ರೀನ್‌ವುಡ್ ಹೈ ಶಾಲೆಯ ಮೈಥಿಲಿ ಅಯ್ಯರ್ ಶೇ.98.75 ಅಂಕಗಳನ್ನು ಪಡೆದಿದ್ದಾರೆ.
ಐಸಿಎಸ್‌ಇ ಪರೀಕ್ಷೆಯನ್ನು 20 ಭಾರತೀಯ ಭಾಷೆಗಳು ಸಹಿತ ಒಟ್ಟು 60 ವಿಷಯಗಳಲ್ಲಿ ನಡೆಸಲಾಗಿತ್ತು. ಇದರಲ್ಲಿ 13 ವಿದೇಶಿ ಮತ್ತು 1 ಕ್ಲಾಸಿಕಲ್ ಭಾಷೆ ಕೂಡ ಸೇರಿದೆ. ಅದೇ ರೀತಿ ಐಎಸ್‌ಸಿ ಪರೀಕ್ಷೆಯನ್ನು 47 ವಿಷಯಗಳಲ್ಲಿ ನಡೆಸಿದ್ದು, ಇದರಲ್ಲಿ 12 ಭಾರತೀಯ, 4 ವಿದೇಶಿ ಮತ್ತು 2 ಕ್ಲಾಸಿಕಲ್ ಭಾಷೆ ಸೇರಿದೆ. 10ನೇ ತರಗತಿಗೆ ನೋಂದಾಯಿಸಿದ್ದ ವಿದ್ಯಾರ್ಥಿಗಳಲ್ಲಿ 47 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ.
10ನೇ ತರಗತಿಯಲ್ಲಿ ಪರಿಶಿಷ್ಟ ಜಾತಿ 1,734 ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಪಂಗಡದ 395 ವಿದ್ಯಾರ್ಥಿಗಳು, ಹಿಂದುಳಿದ ವರ್ಗಕ್ಕೆ ಸೇರಿದ 11,693 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅದೇ ರೀತಿ 12ನೇ ತರಗತಿಯಲ್ಲಿ 79 ಪರಿಶಿಷ್ಟ ಜಾತಿ ಮತ್ತು 26 ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ 326 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.