Karnataka: ಇಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ: ಆಂತರಿಕ ಬೇಗುದಿ ಶಮನವೇ, ಉಲ್ಬಣವೇ?
Team Udayavani, Dec 7, 2024, 7:10 AM IST
ಬೆಂಗಳೂರು: ರಾಜ್ಯ ಬಿಜೆಪಿಯ ಸಂಘಟನ ಪರ್ವ ಹಾಗೂ ಕೋರ್ ಕಮಿಟಿ ಸಭೆ ನಡೆಸುವ ಸಲು ವಾಗಿ ಉಸ್ತುವಾರಿ ರಾಧಾ ಮೋಹನ್ ಅಗರ್‌ವಾಲ್ ಶುಕ್ರವಾರ ರಾತ್ರಿ ಬೆಂಗ ಳೂರಿಗೆ ಬಂದಿದ್ದು, ಶನಿವಾರ ಪಕ್ಷದ ಕಚೇರಿಯಲ್ಲಿ ಸರಣಿ ಸಭೆ ಗಳು ನಡೆಯಲಿವೆ. ಕೋರ್ ಕಮಿಟಿ ಸಭೆಯ ವೇಳೆ ಪಕ್ಷದ ಆಂತರಿಕ ಬೇಗುದಿಯ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಶುಕ್ರವಾರ ಬಂದಿಳಿದ ಅಗರ್‌ವಾಲ್ ಅವ ರನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಬರ ಮಾಡಿ ಕೊಂಡರು. ನಗರದ ಕುಮಾರ ಕೃಪಾ ಅತಿಥಿಗೃಹಕ್ಕೆ ಅಗರ್‌ವಾಲ್ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಹೂಗುತ್ಛ ನೀಡಿ, ಜೈಕಾರ ಕೂಗಿದರು. ಬಳಿಕ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಹಲವು ನಾಯಕರು ಭೇಟಿಯಾದರು.
ಅವಲೋಕನಶನಿವಾರ ಬೆಳಗ್ಗೆ 10.30ಕ್ಕೆ ಪಕ್ಷದ ಕಚೇರಿಯಲ್ಲಿ ಸಂಘಟನ ಪರ್ವದ ಅವಲೋಕನ ನಡೆಯಲಿದ್ದು, ರಾಜ್ಯಾಧ್ಯಕ್ಷ ವಿಜಯೇಂದ್ರ, ಸದಸ್ಯತ್ವ ನೋಂದಣಿ ಅಭಿಯಾನದ ಸಂಚಾ ಲಕರಾದ ನಂದೀಶ್ ರೆಡ್ಡಿ, ಎನ್. ರವಿ ಕುಮಾರ್, ಗಣೇಶ್ ಕಾರ್ಣಿಕ್ ಅವರು ರಾಧಾಮೋಹನ್ ಅವರ ಸಮ್ಮುಖದಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ ವಿವರಣೆ ನೀಡಲಿದ್ದಾರೆ.
ಅಪರಾಹ್ನ ಕೋರ್ ಕಮಿಟಿ ಸಭೆ
ಅಪರಾಹ್ನ 3 ಗಂಟೆಗೆ ಕೋರ್ ಕಮಿಟಿ ಸಭೆ ನಡೆಯಲಿದ್ದು, ಮೂರು ಉಪಚುನಾವಣೆಗಳ ಸೋಲಿನ ಬಗ್ಗೆ ಪರಾಮರ್ಶೆ ನಡೆಯಲಿದೆ.
ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಹಾಗೂ ಜೆಡಿಎಸ್ ಜತೆಗಿನ ಬಾಂಧವ್ಯ ವೃದ್ಧಿಯ ವಿಚಾರದಲ್ಲೂ ಮಾರ್ಗದರ್ಶನ ಮಾಡಲಿದ್ದಾರೆ. ವಕ್ಫ್ ಮಂಡಳಿ ನೋಟಿಸ್ ವಿರುದ್ಧದ ಹೋರಾಟ, ರಾಜ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರಗಳ ವಿರುದ್ಧ ಹೋರಾಟ, ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾವಿಸಬಹುದಾದ ವಿಷಯಗಳ ಬಗ್ಗೆ ತಾಲೀಮು ಕೂಡ ಇದೇ ವೇಳೆ ನಡೆಯಲಿದ್ದು, ಪಕ್ಷದೊಳಗಿನ ಭಿನ್ನಮತ ಮರೆತು ಕೆಲಸ ಮಾಡುವಂತೆ ಸೂಚಿಸುವ ಸಾಧ್ಯತೆಗಳಿವೆ.
ಬಣ ರಾಜಕಾರಣಕ್ಕೆ ತಡೆ?
ಬಿಜೆಪಿಯಲ್ಲಿ ಸದ್ಯ ವಿಜಯೇಂದ್ರ ಬಣ, ಬಸನಗೌಡ ಪಾಟೀಲ್ ಯತ್ನಾಳ್ ಬಣ ಹಾಗೂ ಎರಡೂ ಬಣದ ಜತೆ ಗುರುತಿಸಿಕೊಳ್ಳದ ತಟಸ್ಥ ಬಣಗಳಿವೆ. ಈ ಮೂರೂ ಬಣಗಳಿಗೆ ಸ್ಪಷ್ಟ ಸಂದೇಶವನ್ನು ಉಸ್ತುವಾರಿ ಅಗರ್‌ವಾಲ್ ನೀಡುವ ಸಾಧ್ಯತೆಗಳಿವೆ.
ಆದರೆ ಯತ್ನಾಳ್ ಅವರ ವಿರುದ್ಧ ನಿಲ್ಲುವ ಭರದಲ್ಲಿ ಪಕ್ಷದ ಆಂತರಿಕ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡಿರುವ ವಿಜಯೇಂದ್ರ ಬಣದ ವಿರುದ್ಧ ಕ್ರಮ ಆಗಿಲ್ಲ ಎಂಬ ಅಸಮಾಧಾನಗಳಿವೆ. ಈ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬರಬಹುದಾಗಿದ್ದು, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರು ಪಕ್ಷ ಶುದ್ಧೀಕರಣದ ವಿಷಯವನ್ನು ಸಭೆಯ ಮುಂದಿಡುವ ಸಂಭವವಿದೆ. ಎಲ್ಲರ ಅಹವಾಲು ಆಲಿಸಿ, ಪರಿಹಾರ ಸೂತ್ರವೊಂದನ್ನು ರಾಧಾಮೋಹನ್ ಅಗರ್‌ವಾಲ್ ನೀಡುವ ನಿರೀಕ್ಷೆಯಲ್ಲಿ ಕಾರ್ಯಕರ್ತರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
MUST WATCH
ಹೊಸ ಸೇರ್ಪಡೆ
Bengaluru: ಕೆರೆ ಒತ್ತುವರಿ ಮಾಡಿದ್ದ ಮೂವರಿಗೆ 1ವರ್ಷ ಜೈಲು
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.