Diary ಬರೆದು ಟಾರ್ಗೆಟ್ ಮಾಡುವವರನ್ನು ದೂರವಿಟ್ಟರೆ ರಾಜ್ಯ ಬಿಜೆಪಿ ಉದ್ದಾರ: ಡಿವಿಎಸ್
ನಾನು ರಾಜ್ಯಾಧ್ಯಕ್ಷನಾಗಿದ್ದಾಗ ಅನಂತ ಕುಮಾರ್, ಯಡಿಯೂರಪ್ಪ ಅವರ ಗುಂಪುಗಳಿತ್ತು...
Team Udayavani, Dec 2, 2023, 9:37 PM IST
ಮೈಸೂರು: ಡೈರಿ ಬರೆದು ಟಾರ್ಗೆಟ್ ಮಾಡುವವರನ್ನು ಪಕ್ಷದ ಸಂಘಟನೆಯಿಂದ ದೂರವಿಟ್ಟರೆ ರಾಜ್ಯದಲ್ಲಿ ಪಕ್ಷ ಉದ್ದಾರವಾಗಲಿದೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಗುಂಪುಗಾರಿಕೆ ರಾಜಕಾರಣ ನಿಲ್ಲಬೇಕಿದ್ದು, ನಮ್ಮ ಗುಂಪುಗಾರಿಕೆಯಿಂದಲೇ ನಾವು ಚುನಾವಣೆ ಸೋತಿದ್ದು. ಹೀಗಾಗಿ ಡೈರಿ ಬರೆದು ಟಾರ್ಗೆಟ್ ಮಾಡವರನ್ನು ಸಂಘಟನೆ ಯಿಂದ ದೂರವಿಡಿ, ಆಗ ರಾಜ್ಯದಲ್ಲಿ ಪಕ್ಷ ಉದ್ದಾರ ಆಗುತ್ತದೆ. ಈ ಬಗ್ಗೆ ನಾನು ವಿಜಯೇಂದ್ರ ಅವರಿಗೆ ಸಲಹೆ ನೀಡಿದ್ದೇನೆ ಎಂದರು. ಮೊದಲು ಅಸಮಾಧಾನ ಇರುವರನ್ನು ಮನವೊಲಿಸಿ, ಸೋಮಣ್ಣ ಅವರ ಬಳಿ ಹೋಗಿ, ಯತ್ನಾಳ್ ಅವರನ್ನು ಭೇಟಿ ಮಾಡಿದ ಬಳಿಕ ಮಠ-ಮಂದಿರಕ್ಕೆ ಹೋಗಿ ಎಂದರು.
ನನಗೆ ರಾಜ್ಯಾಧ್ಯಕ್ಷರಾಗಿರುವವರ ಕಷ್ಟ ಏನೆಂಬುದು ಗೊತ್ತಿದೆ. ನನ್ನ ಅವಧಿಯಲ್ಲಿಯೂ ಅನಂತ ಕುಮಾರ್, ಯಡಿಯೂರಪ್ಪ ಅವರ ಗುಂಪುಗಳಿತ್ತು. ನಾನು ಪ್ರತಿ ದಿನ ಎಲ್ಲರ ಮನೆಗೆ ಬೆಣ್ಣೆ ಹಿಡಿದು ನೈಸ್ ಮಾಡಿದ್ದೆ, ಅದೇ ರೀತಿ ಎಲ್ಲರ ಮನವೊಲಿಸಿ. ನಿಮ್ಮ ತಂದೆಯ ಜತೆಗೆ ಉಳಿದ ಹಿರಿಯರ ಸಲಹೆ ಪಡೆಯಿರಿ ಎಂದ ಅವರು, ಮುಂದಿನ ಲೋಕಸಭೆಯಲ್ಲಿ ಯುವಕರಿಗೆ ಅವಕಾಶ ನೀಡುವ ಮೂಲಕ ಹೊಸ ರಾಜತಂತ್ರ ಜಾರಿಗೆ ತನ್ನಿ ಎಂದು ಹೇಳಿದರು.
ಜೀವನದಲ್ಲಿ ಇಂತಹ ಸರಕಾರ ನೋಡಿಲ್ಲ
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸದಾನಂದಗೌಡ, ”ನನ್ನ ರಾಜಕೀಯ ಜೀವನದಲ್ಲಿ ಇತಂಹ ಸರಕಾರ ನೋಡಿಲ್ಲ. ನಾನು ಎಲ್ಲಾ ರೀತಿಯ ಅಧಿಕಾರಿ ಅನುಭವಿಸಿದ್ದೇನ, ಆದರೆ ಈ ರೀತಿಯ ಸರಕಾರ ನೋಡಿಲ್ಲ. ಇದು ಕರ್ನಾಟಕದ ಜನರ ಪಾಪಕ್ಕೆ ಬಂದ ಸರಕಾರವಾಗಿದ್ದು, ಯಾವುದೇ ಕೆಲಸಗಳು ಆಗುತ್ತಿಲ್ಲ” ಎಂದು ಟೀಕಿಸಿದರು. ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರ ಸಿಬಿಐ ತನಿಖೆ ಹಿಂಪಡೆದ ನಿರ್ಧಾರದ ಬಗ್ಗೆ ಮಾತನಾಡಿ, ”ನಾನೂ ಕಾನೂನು ಮಂತ್ರಿಯಾಗಿದ್ದವನು, ಈ ರೀತಿಯ ಕೆಲಸ ಸರಕಾರ ಮಾಡಬಾರದು. ಈ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗೆ ತೃಪ್ತಿ ಇಲ್ಲ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA CASE: ಮುಖ್ಯಮಂತ್ರಿ ಭಾವಮೈದನ ವಿಚಾರಣೆ
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.