ಅಚ್ಯುತ್ ಶ್ರೇಷ್ಠ ನಟ ಶ್ರುತಿ ಅತ್ಯುತ್ತಮ ನಟಿ
Team Udayavani, Apr 12, 2017, 10:30 AM IST
ಬೆಂಗಳೂರು: ಅಮರಾವತಿ ಹಾಗೂ ಬ್ಯೂಟಿಫುಲ್ ಮನಸುಗಳು ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ಅಚ್ಯುತ್ ಕುಮಾರ್ ಹಾಗೂ ನಟಿ ಶ್ರುತಿ ಹರಿಹರನ್ ಅವರು 2016ನೇ ಸಾಲಿನ ರಾಜ್ಯ ಚಲನಚಿತ್ರ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಿ.ಎಂ. ಗಿರಿರಾಜ್ ನಿರ್ದೇಶನದ “ಅಮರಾವತಿ’, ಪೃಥ್ವಿ ಕೊಣನೂರ್ ನಿರ್ದೇಶನದ “ರೈಲ್ವೇ ಚಿಲ್ಡ್ರನ್’ ಹಾಗೂ ಹರೀಶ್ ಕುಮಾರ್ ನಿರ್ದೇಶನದ ಅಂತರ್ಜಲ ಚಿತ್ರಗಳು ಕ್ರಮವಾಗಿ ಮೊದಲ, ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಗಳಿಗೆ ಭಾಜನವಾಗಿವೆ.
2016ನೇ ಸಾಲಿನ ರಾಜ್ಯ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಧಿಕೃತವಾಗಿ ಘೋಷಿಸಿದರು. ಇದಕ್ಕೂ ಮುನ್ನ ಕವಿತಾ ಲಂಕೇಶ್ ನೇತೃತ್ವದ ಸಮಿತಿಯು ಕಳೆದ ಹಲವು ದಿನಗಳಿಂದ ಸುಮಾರು 124 ಚಿತ್ರಗಳನ್ನು ವೀಕ್ಷಿಸಿ, ಈ ಪೈಕಿ ಅತ್ಯುತ್ತಮರನ್ನು ಆಯ್ಕೆ ಮಾಡಲಾಗಿದೆ. ಈ ಸಮಿತಿಯಲ್ಲಿ ನಟಿ ರೇಖಾ ರಾವ್, ಛಾಯಾಗ್ರಾಹಕ ಬಸವರಾಜ್, ಗಾಯಕಿ ಚಂದ್ರಿಕಾ ಗುರುರಾಜ್ ಸೇರಿದಂತೆ ಹಲವರು ಇದ್ದರು.
ಇನ್ನು ಶಿವರುದ್ರಯ್ಯ ನಿರ್ದೇಶನದ “ಮೂಡ್ಲ ಸೀಮೆಯಲಿ’ ಚಿತ್ರವು ವಿಶೇಷ ಸಾಮಾಜಿಕ ಕಾಳಜಿಯ ಚಿತ್ರವೆನಿಸಿಕೊಂಡರೆ, “ಜೀರ್ ಜಿಂಬೆ’ ಚಿತ್ರವು ಅತ್ಯುತ್ತಮ ಮಕ್ಕಳ ಚಿತ್ರ ಎಂದನಿಸಿಕೊಂಡಿದೆ. ಇನ್ನು ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರವು ತುಳು ಭಾಷೆಯ “ಮದಿಪು’ ಪಾಲಾಗಿದೆ. ಕಳೆದ ವರ್ಷದ ಅತ್ಯುತ್ತಮ ಜನಪ್ರಿಯ ಮನರಂಜನ ಚಿತ್ರವಾಗಿ ರಕ್ಷಿತ್ ಶೆಟ್ಟಿ ಅಭಿನಯದ “ಕಿರಿಕ್ ಪಾರ್ಟಿ’ ಹೊರಹೊಮ್ಮಿದೆ. ಇನ್ನು ನಿರ್ದೇಶಕರ ಪ್ರಥಮ ನಿರ್ದೇಶನ ಅತ್ಯುತ್ತಮ ಚಿತ್ರವಾಗಿ ಡಿ. ಸತ್ಯ ಪ್ರಕಾಶ್ ನಿರ್ದೇಶನದ “ರಾಮ ರಾಮಾ ರೇ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಈ ಬಾರಿ ಒಟ್ಟಾರೆ ಪ್ರಶಸ್ತಿಗಳಲ್ಲಿ “ಜೀರ್ ಜಿಂಬೆ’ ಚಿತ್ರಗಳು ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ. “ಅಮರಾವತಿ’ ಚಿತ್ರ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರೆ, ಮಕ್ಕಳ ಚಿತ್ರ “ರೈಲ್ವೆ ಚಿಲ್ಡ್ರನ್’ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು