ಬಾಂಬ್, ಶೆಲ್ ದಾಳಿ ನಡುವೆಯೂ ನಿಲ್ಲದ ನಡಿಗೆ
Team Udayavani, Mar 4, 2022, 7:30 AM IST
ಸಾಂದರ್ಭಿಕ ಚಿತ್ರ
ಉಕ್ರೇನ್ನ ವಿವಿಧ ನಗರಗಳಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತವರಿಗೆ ಕರೆತರುವ ನಿಟ್ಟಿನಲ್ಲಿ ಸರಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ. ಗುರುವಾರ ನೂರಾರು ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಿ, ಪೋಷಕರ ಮಡಿಲು ಸೇರಿದ್ದಾರೆ. ಯುದ್ಧಪೀಡಿತ ನೆಲದಲ್ಲಿ ಪ್ರತೀಕ್ಷಣ ಆತಂಕದಲ್ಲೇ ದಿನದೂಡುತ್ತಿರುವ ರಾಜ್ಯದ ವಿದ್ಯಾರ್ಥಿಗಳು ನೆರವಿಗಾಗಿ ಕಾಯುತ್ತಿದ್ದಾರೆ. ಸುರಕ್ಷಿತ ತಾಣ ತಲುಪಲು ಕಿಲೋಮೀಟರ್‌ಗಟ್ಟಲೆ ನಡೆದು ಹೈರಾಣಾಗಿದ್ದಾರೆ.
12 ಕಿ.ಮೀ. ಓಡಿ ಹಾಸ್ಟೆಲ್ ಸೇರಿದ ಭಾರತೀಯ ವಿದ್ಯಾರ್ಥಿಗಳು! :
ಬೆಂಗಳೂರು: ಉಕ್ರೇನ್ ಮತ್ತು ರಷ್ಯಾ ಯುದ್ಧ ನಡೆಯು ತ್ತಿರುವ ಖಾರ್ಕಿವ್‌ನಿಂದ ಕೇವಲ ಮೂರು ಕಿ.ಮೀ. ದೂರದ ಪಿಸೋ ಚಿನ್ ಪ್ರದೇಶದಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೆ ಇಲ್ಲಿ ಯಾವ ರೀತಿಯ ಸುರಕ್ಷತೆಯೂ ಇಲ್ಲ ಎಂದು ಉಕ್ರೇನ್‌ನಲ್ಲಿರುವ ಚಿಕ್ಕ ಬಳ್ಳಾಪುರದ ವಿದ್ಯಾರ್ಥಿನಿ ಹರ್ಷಿತಾ ಆತಂಕ ವ್ಯಕ್ತಪಡಿಸಿದ್ದಾರೆ.
ಐದು ದಿನಗಳ ಕಾಲ ಬಂಕರ್‌ನಲ್ಲಿದ್ದ ಹರ್ಷಿತಾ ಅವರು ಪಿಸೋ ಚಿನ್ ತಲುಪಲು ಕೇವಲ ಆರು ಗಂಟೆಗಳ ಅವಧಿ ನೀಡಲಾಗಿತ್ತು. ರೈಲು ನಿಲ್ದಾಣಕ್ಕೆ ಹೋಗುವ ದಾರಿ ಯಲ್ಲಿಯೇ ನಾಲ್ಕು ಮಿಸೈಲ್ ಆಕ್ರಮಣ ನಡೆದು ಕಟ್ಟಡಗಳು, ಟ್ಯಾಂಕರ್‌ಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದವು. ಇದ್ಯಾವುದರ ಕಡೆ ಗಮನ ಕೊಡದೇ, ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 12 ಕಿ.ಮೀ. ಜೀವ ಕೈಯಲ್ಲಿಟ್ಟುಕೊಂಡು ಓಡಿ ಬಂದಿದ್ದೇವೆ. ರೈಲು, ಮೆಟ್ರೋ ಗಳಲ್ಲಿ ಉಕ್ರೇನ್ ನಾಗರಿಕರಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ನಮ್ಮನ್ನು ಉಕ್ರೇನಿನ ಸೈನಿಕರು ಹೊಡೆದು ಕೆಳಗಿಳಿಸುತ್ತಿದ್ದಾರೆ. ಎಂದರು.
ಸಿಗ್ನಲ್ ಹೆಚ್ಚಿದ್ದಲ್ಲಿ ದಾಳಿ :
ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ತೆರಳಬೇಕಾದರೆ ಎಲ್ಲ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನ ಇಂಟರ್ನೆಟ್, ಜಿಯೋ ಲೊಕೇಶನ್ ಅನ್ನು ಆಫ್ ಮಾಡಿಕೊಂಡು ಹೋಗುತ್ತೇವೆ. ಏಕೆಂದರೆ, ಹೆಚ್ಚು ಸಿಗ್ನಲ್ ಇರುವ ಕಡೆ ದಾಳಿ ಮಾಡುತ್ತಿದ್ದಾರೆ. ಆದ್ದರಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತೇವೆ.
ಕತ್ತಲೆಯಲ್ಲೆ ದಿನ :
ಹಾಸ್ಟೆಲ್‌ನ ದೀಪ ಆರಿಸಿ ಕೊಂಡು ಇರುವಂತೆ ತಿಳಿಸಿದಂತೆ ಹಾಗೆಯೇ ದಿನ ಕಳೆಯುತ್ತಿದ್ದೇವೆ ಎಂದರು.
ಉಕ್ರೇನ್‌ನಲ್ಲಿ ಸಿಲುಕಿರುವರ ಜತೆ ಸಿಎಂ ಮಾತುಕತೆ :
ಬೆಂಗಳೂರು: ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ದೂರವಾಣಿ ಮೂಲಕ ಮಾತನಾಡಿದರು. ಖಾರ್ಕಿವ್‌ನಿಂದ 30 ಕಿ.ಮೀ. ದೂರದ ಪ್ರದೇಶಕ್ಕೆ ನಾವು ನಡೆದುಕೊಂಡು ಬಂದಿದ್ದೇವೆ. ಸದ್ಯ ಸುರಕ್ಷಿತವಾಗಿದ್ದೇವೆ ಎಂದು ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಮುಖ್ಯಮಂತ್ರಿಗಳು, ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿ ಕಾರಿಗಳ ಜತೆ ನಮ್ಮ ಸರಕಾರ ನಿರಂತರ ಸಂಪರ್ಕದಲ್ಲಿದೆ. ನಿಮಗೆ ಎಲ್ಲ ರೀತಿಯ ಸಹಕಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ನಿಮ್ಮನ್ನು ಅಲ್ಲಿಂದ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸರ್ವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ರಾಜ್ಯದ 200 ಮಂದಿ ಖಾರ್ಕಿವ್‌ನಲ್ಲಿ ಇದ್ದಾರೆ :
ಅಂದಾಜು ರಾಜ್ಯದ 200 ವಿದ್ಯಾರ್ಥಿಗಳು ಖಾರ್ಕಿವ್‌ನಲ್ಲಿ ಬಾಕಿಯಾಗಿದ್ದಾರೆ. ಮಾತುಕತೆ ಸಂದರ್ಭ ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರು ಮುಖ್ಯಮಂತ್ರಿ ಜತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.