ರಾಮುಲು ವಿರುದ್ಧ ಕರುಣಾಕರರೆಡ್ಡಿ ವಾಗ್ಧಾಳಿ
Team Udayavani, Feb 28, 2017, 9:42 AM IST
ಬಳ್ಳಾರಿ: “ನಾನು ಬಿಎಸ್ಆರ್ ಪಕ್ಷಕ್ಕೆ ಹೋಗಲಿಲ್ಲವೆಂದು ಬಿ.ಶ್ರೀರಾಮುಲು ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಜಾತಿ ನಿಂದನೆ ಕೇಸ್ ಹಾಕಿಸಿದ್ದಾರೆ ‘ ಎಂದು ಮಾಜಿ ಸಚಿವ
ಜಿ.ಕರುಣಾಕರರೆಡ್ಡಿ ಅವರು ಸಂಸದ ಬಿ.ಶ್ರೀರಾಮುಲು ವಿರುದ್ಧ ವಾಗ್ಧಾಳಿ ನಡೆಸಿದರು. ಸೋಮವಾರ ನಗರದ ತಮ್ಮ ನಿವಾಸದಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
“ಬಿ.ಶ್ರೀರಾಮುಲು ಅವರು, ನನ್ನ ಅನುಮತಿ ಪಡೆಯದೆ ಸುಷ್ಮಾ ಸ್ವರಾಜ್ ಕಾಲೋನಿಯ 10 ನಿವೇಶನ ಮಾರಾಟ
ಮಾಡಿದ್ದಾರೆ. ಹೀಗಾಗಿ ಬಳ್ಳಾರಿಯ ಸಿಜೆಎಂ ಕೋರ್ಟ್ನಲ್ಲಿ 10 ಕೇಸ್ ಹಾಕಿದ್ದೇನೆ’ ಎಂದರು. ಮುಂಬರುವ
ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಬಿ.ಶ್ರೀರಾಮುಲು ಟಿಕೆಟ್ ವಿಷಯದಲ್ಲಿ ಅಡ್ಡಗಾಲು ಹಾಕುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ನಾನೇ ಮೊದಲಿಗೆ ಬಿಜೆಪಿಯಲ್ಲಿ ರಾಮುಲುಗೆ ಟಿಕೆಟ್ ಕೊಡಿಸಿದ್ದು, ರಾಮುಲು ನನಗೆ ಟಿಕೆಟ್ ಕೊಟ್ಟಿಲ್ಲ.
ಹೈಕಮಾಂಡ್ ಇಲ್ಲಿ ಯಾರೋ ಹೇಳಿದ್ದಾರೆ ಎಂದು ನನಗೆ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ. ಕೆಲ ಮಾಧ್ಯಮಗಳಲ್ಲಿ
ವಿನಾಕಾರಣ ನನ್ನ ತೇಜೋವಧೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾಲವೇ ಉತ್ತರಿಸಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA CASE: ಮುಖ್ಯಮಂತ್ರಿ ಭಾವಮೈದನ ವಿಚಾರಣೆ
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್ಡಿಡಿ, ಎಚ್ಡಿಕೆ ಮಾತಾಡಿದ್ದಾರಾ?: ಸಿಎಂ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.