KEA: ವೈದ್ಯಕೀಯ ಕೋರ್ಸ್ ನೋಂದಣಿಗೆ ಅಂತಿಮ ಅವಕಾಶ
Team Udayavani, Aug 17, 2024, 12:07 AM IST
ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳಿಗೆ ಅರ್ಹರಾಗಿರುವ ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಳ್ಳಲು ಮತ್ತು ಯುಜಿ ನೀಟ್ ರೋಲ್ ನಂಬರನ್ನು ನಮೂದಿಸಲು ಆ. 19ರ ಬೆಳಗ್ಗೆ 10ರ ವರೆಗೆ ಮತ್ತೂಮ್ಮೆ ಅವಕಾಶ ನೀಡಲಾಗಿದೆ. ಇದು ಅಂತಿಮ ಅವಕಾಶವಾಗಿದ್ದು, ಅರ್ಹರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ತಿಳಿಸಿದೆ.
ಇದುವರೆಗೂ ನೀಡಿದ್ದ ಅವಕಾಶಗಳನ್ನು ಬಳಸಿಕೊಳ್ಳದೆ ಇರುವವರು ಆನ್ಲೈನ್ ಮೂಲಕ ನೋಂದಾಯಿಸಿ, ಶುಲ್ಕವನ್ನು ಪಾವತಿಸಬಹುದು. ಮಾಹಿತಿಗೆ ಪ್ರಾಧಿಕಾರದ ಜಾಲತಾಣವನ್ನು ನೋಡಬಹುದು ಎಂದು ಹೇಳಿದೆ.
ಇದೇ ರೀತಿಯಲ್ಲಿ ಈಗಾಗಲೇ ಎರಡು ಹಂತಗಳಲ್ಲಿ ನಡೆದಿರುವ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗದಿದ್ದ ಎನ್ಆರ್ಐ/ವಿದೇಶಿ ವಿದ್ಯಾರ್ಥಿಗಳು ಮತ್ತು ಬೆಂಗಳೂರಿನ ಸೆಂಟ್ ಜಾನ್ಸ್ ಕಾಲೇಜಿನ ಕೆಟಗರಿ-2ರಿಂದ ಕೆಟಗರಿ-8ರ ವ್ಯಾಪ್ತಿಯ ವಿದ್ಯಾರ್ಥಿಗಳು ಆ.19ರ ಬೆಳಗ್ಗೆ 11ಕ್ಕೆ ಮೂಲ ಪ್ರಮಾಣಪತ್ರಗಳೊಂದಿಗೆ ಪ್ರಾಧಿಕಾರದ ಕಚೇರಿಗೆ ಹಾಜರಾಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.