KEA ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ:ಆರ್‌.ಡಿ.ಪಾಟೀಲ್‌ ಸೇರಿ 12 ಮಂದಿ ವಿರುದ್ಧ ಕೋಕಾಸ್ತ್ರ

ಎಫ್ಡಿಎ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಬ್ಲೂಟೂತ್‌ ನೀಡಿ ಪರೀಕ್ಷೆಗೆ ನೆರವಾಗಿದ್ದ ಆರೋಪಿಗಳು

Team Udayavani, Dec 21, 2023, 5:19 AM IST

1-asdadasd

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹಾಗೂ ಪೊಲೀಸ್‌ ಇಲಾಖೆಯ ಪಿಎಸ್‌ಐ, ಕಾನ್‌ಸ್ಟೆàಬಲ್‌ ಸೇರಿ ರಾಜ್ಯ ಸರ್ಕಾರದ ಎಲ್ಲ ಸಂಸ್ಥೆಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗುತ್ತಿದ್ದ ಆರ್‌.ಡಿ.ಪಾಟೀಲ್‌ ಸೇರಿ 12 ಮಂದಿ ವಿರುದ್ಧ ಸಿಐಡಿ ಕೋಕಾಸ್ತ್ರ ಪ್ರಯೋಗಿಸಿದೆ.

ಇತ್ತೀಚೆಗೆ ಕರ್ನಾಟಕ ಪರೀûಾ ಪ್ರಾಧಿಕಾರ (ಕೆಇಎ)ದ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಮತ್ತು ರಾಜ್ಯ ಸರಕಾರದ ಇತರ ಸಂಸ್ಥೆಗಳ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆಯಲು ಬ್ಲೂಟೂತ್‌ ನೀಡಿ ಅಕ್ರಮ ಎಸಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ್‌ ಹಾಗೂ ಆತನ 11 ಮಂದಿ ಸಹಚರರ ವಿರುದ್ಧ ಸಿಐಡಿ ಪೊಲೀಸರು ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ(ಕೋಕಾ)-2000 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್‌.ಡಿ. ಪಾಟೀಲ್‌ ಹಾಗೂ ಇತರ ವಿರುದ್ಧ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಆರ್‌.ಡಿ.ಪಾಟೀಲ್‌, ಇದೇ ರೀತಿಯ ಪರೀûಾ ಅಕ್ರಮಗಳನ್ನು ಈ ಹಿಂದೆ ಪಿಎಸ್‌ಐ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿಯೂ ಸಹ ಎಸಗಿದ್ದ. ಕಳೆದ ಅಕ್ಟೋಬರ್‌ನಲ್ಲಿ ಕಲಬುರಗಿಯ ಶಾಲೆಯಲ್ಲಿ ನಡೆದ ಕೆಇಎ ಎಫ್ಡಿಎ ಪರೀಕ್ಷೆಯಲ್ಲಿ ಆರೋಪಿಗಳು, ಅಭ್ಯರ್ಥಿಗಳಿಗೆ ಬ್ಲೂಟೂತ್‌ ನೀಡಿ ಪರೀಕ್ಷೆಗೆ ನೆರವಾಗಿದ್ದರು. ಹೀಗಾಗಿ ಈತ ಮತ್ತು ಈತನ ಸಹಚರರ ವಿರುದ್ಧ ಕಲಬುರಗಿಯ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ಪ್ರಕರಣಕ್ಕೆ ಕೋಕಾ ಕಾಯ್ದೆ ಅಡಿ ಹೆಚ್ಚುವರಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಆರೋಪಿಗಳು ಬಹಳ ವರ್ಷಗಳಿಂದ ಸಂಘಟಿತವಾಗಿ ಒಂದೇ ಮಾದರಿಯ ಅಪರಾಧಗಳಲ್ಲಿ ತೊಡಗಿರುವುದು ಇದುವರೆಗೂ ಸಂಗ್ರಹಿಸಿರುವ ಸಾಕ್ಷಾ ಧಾರಗಳಿಂದ ಪತ್ತೆಯಾಗಿದೆ ಎಂದು ಸಿಐಡಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ್‌, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಶಾಲೆಯ ಪ್ರಾಂಶುಪಾಲರನ್ನು ಭೇಟಿಯಾಗಿದ್ದ ಸಂತೋಷ್‌ ಕೊಟ್ಟಳ್ಳಿ, ಬ್ಲೂಟೂತ್‌ಗಳನ್ನು ಅಭ್ಯರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದ ಶಿವಕುಮಾರ್‌, ಸಾಗರ್‌, ಸರಕಾರಿ ನೌಕರ ರುದ್ರಗೌಡ, ಶಾಲಾ ಕೇಂದ್ರ ಮುಖ್ಯಸ್ಥನಾಗಿದ್ದ ಚಂದ್ರಕಾಂತ್‌ ಬುರಕಲ್‌, ಕಸ್ಟೋಡಿಯನ್‌ ಬಸಣ್ಣ ಪೂಜಾರಿ, ಅಭ್ಯರ್ಥಿಗಳ ಜತೆ ವ್ಯವಹಾರ ಕುದುರಿ ಡೀಲ್‌ ಮಾಡುತ್ತಿದ್ದ ಶಿಶಿಧರ್‌ ಜಮಾದಾರ್‌, ಸಿದ್ರಾಮಾ ಕೋಳಿ, ರವಿಕುಮಾರ್‌, ರಹೀಂಚೌಧರಿ ಮತ್ತು ಬಸವರಾಜ ಎಳವರ ವಿರುದ್ದ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಆರ್‌.ಡಿ. ಪಾಟೀಲ್‌ ಮತ್ತು ತಂಡ ಈ ಹಿಂದೆ 545 ಪಿಎಸ್‌ಐ ಪರೀಕ್ಷೆ ಅಕ್ರಮ, ಲೋಕೋಪಯೋಗಿ ಇಲಾಖೆ ಪರೀಕ್ಷೆಗಳು, ನೀರಾವರಿ ಇಲಾಖೆ ಪರೀಕ್ಷೆಗಳು ಸೇರಿ ಕೆಇಎಯಿಂದ ನಡೆಸಿದ ಎಲ್ಲಾ ಪರೀಕ್ಷೆಗಳಲ್ಲೂ ಅಕ್ರಮ ಎಸಗಿದ್ದರು. ಈ ಹಿಂದೆ ಜಾಮೀನು ನೀಡಿದ್ದ ಕೋರ್ಟ್‌, ಮತ್ತೂಮ್ಮೆ ಇಂತಹ ಪ್ರಕರಣದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿತ್ತು. ಆದರೂ ಆರೋಪಿಗಳು ಅದೇ ಮಾದರಿಯ ಅಕ್ರಮದಲ್ಲಿ ತೊಡಗಿದ್ದಾರೆ. ಹೀಗಾಗಿ ಕೋಕಾ ಕಾಯ್ದೆ ಅಡಿ ಪ್ರಕರಣದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದರು.

ಏನಿದು ಕೋಕಾ ಕಾಯ್ದೆ?

ಗುಂಪು ಕಟ್ಟಿಕೊಂಡು ಸಂಘಟಿತ ರೂಪದಲ್ಲಿ ಪದೇ ಪದೇ ಒಂದೇ ಮಾದರಿಯ ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದಾರೆ. ಹೀಗಾಗಿ ಎಲ್ಲ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ(ಕೋಕಾ)-2000 ಅಡಿ ಪ್ರಕರಣ ದಾಖಲಿಸಲಾಗಿದೆ. ಅದರಿಂದ ಪೊಲೀಸರಿಗೆ 90 ದಿನಕ್ಕೆ ಸಲ್ಲಿಸುವ ಆರೋಪಪಟ್ಟಿಯನ್ನು 180 ದಿನದೊಳಗೆ ಸಲ್ಲಿಸುವ ಅವಕಾಶ ಸಿಗುತ್ತದೆ. ಜತೆಗೆ ಆರೋಪಿಗಳನ್ನು ಹೆಚ್ಚು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯಲು ಅವಕಾಶವಿದೆ. ಒಂದು ವೇಳೆ ಆರೋಪ ಸಾಬೀತಾದರೆ ಐದು ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಬಹುದು. ಜತೆಗೆ ಒಂದು ಲಕ್ಷದಿಂದ ಐದು ಲಕ್ಷ ರೂ.ಗೂ ಅಧಿಕ ದಂಡ ವಿಧಿಸುವ ಸಾಧ್ಯತೆಯಿದೆ.

ಟಾಪ್ ನ್ಯೂಸ್

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.