ತಿಂಗಳಾದ್ರೂ ಮೊಸರು ಕೆಡಲ್ಲ, ರೆಫ್ರಿಜರೇಟರ್ ಅಗತ್ಯವಿಲ್ಲ
Team Udayavani, Feb 15, 2017, 3:45 AM IST
ಬೆಂಗಳೂರು: ನೀವು ಎಷ್ಟು ದಿನ ಮೊಸರನ್ನು ಕೆಡದಂತೆ ಸಂರಕ್ಷಿಸಿ ಇಡಬಹುದು? ಎರಡು ದಿನ, ಅಬ್ಬಬ್ಟಾ ಎಂದರೆ ನಾಲ್ಕು ದಿನ. ಆದರೆ, ಈಗ ಯಾವುದೇ ರೆಫ್ರಿಜರೇಟರ್ ಸಹಾಯವಿಲ್ಲದೆ ತಿಂಗಳುಗಟ್ಟಲೆ ಇಟ್ಟು ಸೇವಿಸಬಹುದಾದ
ಮೊಸರು ಮಾರುಕಟ್ಟೆಗೆ ಬರಲಿದೆ.
ಹೌದು, ರಕ್ಷಣಾ, ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ತಿಂಗಳುಗಟ್ಟಲೆ ಇಟ್ಟರೂ ಕೆಡದಂತಹ ಮೊಸರು ತಯಾರಿಸುವ ಯಂತ್ರ ಪರಿಚಯಿಸಿದೆ.
ಗುಡ್ಡಗಾಡು, ಅತಿ ಬಿಸಿಲು ಅಥವಾ ಅತಿ ಶೀತ ಪ್ರದೇಶಗಳಲ್ಲಿ ಸೈನಿಕರು ವಾರಗಟ್ಟಲೆ ಕಳೆಯಬೇಕಾಗುತ್ತದೆ. ಅಂತಹ ಎಲ್ಲ ಪ್ರಕಾರದ ವಾತಾವರಣಕ್ಕೂ ಹೊಂದಿಕೊಳ್ಳುವಂತಹ ಬ್ಯಾಕ್ಟೀರಿಯಾಗಳನ್ನು ಗುರುತಿಸಿ, ಬೇರ್ಪಡಿಸಿ
ತಿಂಗಳುಗಟ್ಟಲೆ ಇಟ್ಟರೂ ಹುಳಿಯಾಗದಂತೆ ಅಥವಾ ಕೆಡದಂತಹ ಮೊಸರು ತಯಾರಿಸುವ ಯಂತ್ರವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ಯಂತ್ರವನ್ನು ವೈಮಾನಿಕ ಪ್ರದರ್ಶನದಲ್ಲಿ ಇಡಲಾಗಿದೆ.
ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ಪರಿಚಯಿಸಿದ ಈ ಯಂತ್ರದಲ್ಲಿ ಲ್ಯಾಕ್ಟಿಕ್ ಆ್ಯಸಿಡ್ ಎಂಬ ಬ್ಯಾಕ್ಟೀರಿಯಾ ಗುರುತಿಸುವ ಅಂಶ ಇದ್ದು, ಅದು ಆ ಬ್ಯಾಕ್ಟೀರಿಯಾವನ್ನು ಬೇರ್ಪಡಿಸುತ್ತದೆ. ಇದರಿಂದ ಮೊಸರು ಒಂದು ಹಂತ ತಲುಪಿದ ನಂತರ ಹುಳಿಯಾಗುವುದಿಲ್ಲ. ಯೋಧರಿಗಾಗಿ ಇದನ್ನು ಕಂಡು ಹಿಡಿದಿದ್ದರೂ, ಸಾಮಾನ್ಯ ಜನ ಕೂಡ
ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಪ್ರಯೋಗಾಲಯದ ತಾಂತ್ರಿಕ ಅಧಿಕಾರಿ ನಾಗರಾಜು ತಿಳಿಸಿದ್ದಾರೆ.
“ಗುಡ್ ಲೈಫ್’ ಮಾದರಿ ಮೊಸರು?: ಈ ಯಂತ್ರ ಕಂಡುಹಿಡಿದ ಉದ್ದೇಶ ದೇಶದ ಗಡಿ ಕಾಯುವ ಸೈನಿಕರು ವಿವಿಧ ಪ್ರಕಾರದ ವಾತಾವರಣದಲ್ಲಿ ಇರುತ್ತಾರೆ. ಅದೆಲ್ಲದಕ್ಕೂ ಹೊಂದಿಕೊಳ್ಳುವ ಮೊಸರನ್ನು ಪೂರೈಸುವುದಾಗಿದೆ. ಕಂಪೆನಿಗಳು ಯಾರಾದರೂ ಮುಂದೆ ಬಂದರೆ, ಅವರಿಗೆ ಈ ಯಂತ್ರವನ್ನು ಷರತ್ತುಗಳಡಿ ಪೂರೈಸಲಾಗುವುದು.
ಆ ಮೂಲಕ ಸಾಮಾನ್ಯರಿಗೂ “ಗುಡ್ ಲೈಫ್’ ನಂದಿನಿ ಹಾಲಿನಂತೆಯೇ ದೀರ್ಘ ಬಾಳಿಕೆಯ ಮೊಸರು ಸವಿಯಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕಲಬೆರಕೆ ಹಾಲು ಪತ್ತೆಗೆ ಸ್ಟ್ರಿಪ್: ಕಲಬೆರಕೆ ಹಾಲು ಕಂಡುಹಿಡಿಯಲಿಕ್ಕೂ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ಹೊಸ ವಿಧಾನವನ್ನು ಕಂಡುಹಿಡಿದಿದೆ. ಒಂದೆರಡು ಇಂಚು ಉದ್ದದ ಹಾಳೆಯ ತುಣುಕಿನಿಂದ ಹಾಲಿನ ಗುಣಮಟ್ಟವನ್ನು ನಿರ್ಧರಿಸುವ ಸರಳ ವಿಧಾನವನ್ನು ಪ್ರಯೋಗಾಲಯದ ವಿಜ್ಞಾನಿಗಳು ಪರಿಚಯಿಸಿದ್ದಾರೆ.
“ಹಾಲು ಪರೀಕ್ಷಾ ಕಿಟ್’ನ್ನು ವಿಜ್ಞಾನಿಗಳು ಪರಿಚಯಿಸಿದ್ದು, ಅದರಲ್ಲಿ ಹಾಲಿನ ಗುಣಮಟ್ಟವನ್ನು ನಿರ್ಧರಿಸುವ ರಾಸಾಯನಿಕ ಪದಾರ್ಥ ಲೇಪಿತ ಸಣ್ಣ ಹಾಳೆಯ ತುಣುಕುಗಳಿರುತ್ತವೆ. ಹಾಲಿನ ಮಾದರಿಯನ್ನು ತೆಗೆದುಕೊಂಡು, ಅದರಲ್ಲಿ ಕಿಟ್‌ನಲ್ಲಿರುವ ಒಂದು “ಸ್ಟ್ರಿಪ್’ (ಹಾಳೆ ತುಣುಕು) ಅದ್ದಿದರೆ ಸಾಕು, ಹಾಲಿನ ನಿಜವಾದ ಬಣ್ಣ ಬಯಲಾಗುತ್ತದೆ ಎಂದು ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ ಅಧಿಕಾರಿ ಶ್ರೀಹರಿ ತಿಳಿಸಿದರು.
ನೀರೇ ಬೇಡ
ವಾಯುಪಡೆ ಯೋಧರಿಗೆ ತುರ್ತು ಸಂದರ್ಭದಲ್ಲಿ ಆಹಾರ ಒದಗಿಸುವ “ಎಮರ್ಜನ್ಸಿ ಫ್ಲೈಯಿಂಗ್ ರೇಷನ್’ನ್ನು
ಪರಿಚಯಿಸಲಾಗಿದೆ. ಚಾಕೊಲೇಟ್ ಮಾದರಿಯ ಆಹಾರ ಸೇವಿಸಿದ ನಂತರ ನೀರಿನ ಅವಶ್ಯಕತೆಯೇ ಬರುವುದಿಲ್ಲ.
ಯುದ್ಧ ವಿಮಾನ ಹಾರಾಟದ ಸಂದರ್ಭದಲ್ಲಿ ಈ ಆಹಾರವನ್ನು ಪೈಲಟ್ ಆಸನದ ಕೆಳಗೆ ಇಡಲಾಗಿರುತ್ತದೆ. ತುರ್ತು
ಸಂದರ್ಭದಲ್ಲಿ ನಾಲ್ಕು ದಿನಗಟ್ಟಲೆ ಎಲ್ಲೋ ದೂರದ ಪ್ರದೇಶಗಳಿಗೆ ಹೋಗಿಬಿಡಬಹುದು. ಅಲ್ಲಿ ನೀರಿನ ಲಭ್ಯತೆಯೂ ಇಲ್ಲದಿರಬಹುದು. ಅಂತಹ ಸನ್ನಿವೇಶದಲ್ಲಿ ಈ ಚಾಕೋಲೇಟ್ ಸೇವಿಸಿದರೆ ಸಾಕು, ನೀರೇ ಬೇಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.