State Govt ಕಿಯೋನಿಕ್ಸ್‌ಗೆ ನೀಡಿದ್ದ 4ಜಿ ರದ್ದು: ತಾತ್ಕಾಲಿಕ ವೈಂಡ್ ಅಫ್?
ಯಾವುದೇ ಹೊಸ ವ್ಯವಹಾರ ನಡೆಸದಿರಲು ತೀರ್ಮಾನ -ಸಂಸ್ಥೆಗೆ ಹೊಸ ಸ್ವರೂಪ ನೀಡಲು ಈ ಕ್ರಮ
Team Udayavani, Nov 28, 2023, 6:50 AM IST
ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ(ಕಿಯೋನಿಕ್ಸ್)ಕ್ಕೆ ನೀಡಿದ್ದ 4(ಜಿ) ವಿನಾಯಿತಿಯನ್ನು ರಾಜ್ಯ ಸರಕಾರ ತಡೆಹಿಡಿದಿದ್ದು, ಈ ಸಂಸ್ಥೆಯ ಮೂಲಕ ಯಾವುದೇ ಹೊಸ ವ್ಯವಹಾರಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ.
ಕಿಯೋನಿಕ್ಸ್‌ಗೆ ನೀಡಿದ್ದ 4(ಜಿ) ವಿನಾಯಿತಿಯನ್ನು ರದ್ದುಗೊಳಿಸುವಂತೆ ಸಂಸ್ಥೆಯ ಉನ್ನತಾಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ನ. 22ರಂದೇ ಆದೇಶ ಪ್ರಕಟವಾಗಿದೆ. ಈ ಕುರಿತು ವಿಶೇಷ ರಾಜ್ಯಪತ್ರ ಪ್ರಕಟಿಸುವಂತೆ ರಾಜ್ಯಪತ್ರ ಇಲಾಖೆ ಜಂಟಿ ನಿರ್ದೇಶಕರಿಗೆ ಆದೇಶದ ಮುದ್ರಿತ ಪ್ರತಿಯನ್ನು ರವಾನಿಸಲಾಗಿದೆ. ಮಹಾಲೇಖಪಾಲರು, ಐಟಿಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಕಳುಹಿಸಲಾಗಿದೆ.
ಕಿಯೋನಿಕ್ಸ್‌ನಲ್ಲಿ ನಾಲ್ಕು ವರ್ಷಗಳಲ್ಲಿ ನಡೆದ ಅವ್ಯವಹಾರ ಹಾಗೂ ಮಹಾಲೇಖಪಾಲರ ವರದಿ ಆಧಾರದಲ್ಲಿ ಸಂಸ್ಥೆಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇತ್ತೀಚಿನ ಹಗರಣಗಳಿಂದ ಸಂಸ್ಥೆಯ ಮಾನ ಮೂರಾಬಟ್ಟೆಯಾಗಿದ್ದು, ಸಂಸ್ಥೆಗೆ ಹೊಸ ಸ್ವರೂಪ ನೀಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ ಬಳಿಕವೇ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
ಸಂಸ್ಥೆಗೆ ಬೀಗವೇ?
ಈ ಆದೇಶ ಪ್ರಕಟವಾಗುತ್ತಿದ್ದಂತೆ ಕಿಯೋನಿಕ್ಸ್‌ಗೆ ಬೀಗಮುದ್ರೆ ಹಾಕಲಾಗುತ್ತದೆ ಎಂಬ ಮಾತುಗಳು ವೆಂಡರ್ಗಳು, ಉಪಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮಧ್ಯೆ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಹಗರಣದ ಮೂಲ ಹುಡುಕುವಲ್ಲಿ ವಿಫಲವಾಗಿರುವ ಸರಕಾರ ಹತಾಶ ಪ್ರಯತ್ನವಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಆದರೆ ಸರಕಾರದ ಮೂಲಗಳ ಪ್ರಕಾರ ಕಿಯೋನಿಕ್ಸ್‌ಗೆ ಬೀಗ ಜಡಿಯುವ ಯಾವುದೇ ಪ್ರಸ್ತಾವ ಇಲ್ಲ. ಯಾಕೆಂದರೆ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಹೆಚ್ಚಿನ ಸಾಫ್ಟ್ವೇರ್ ಸಂಬಂಧಿ ಸೇವೆಗಳು, ಮಾನವ ಸಂಪನ್ಮೂಲ, ಖರೀದಿ, ನೇಮಕಗಳು ಕಿಯೋನಿಕ್ಸ್ ಮೂಲಕವೇ ನಡೆದಿದೆ. ಸಂಸ್ಥೆಗೆ ಬೀಗ ಮುದ್ರೆ ಹಾಕಿದರೆ ಇದೆಲ್ಲದಕ್ಕೂ ಸಮಸ್ಯೆಯಾಗುತ್ತದೆ. ಹೀಗಾಗಿ 4ಜಿ ವಿನಾಯಿತಿ ರದ್ದುಪಡಿಸುವುದಕ್ಕೆ ಮಾತ್ರ ನಿರ್ಧರಿಸಲಾಗಿದೆ. ಇದರಿಂದ ಕಿಯೋನಿಕ್ಸ್ ಮೂಲಕ ನಡೆಸುವ ಎಲ್ಲ ವ್ಯವಹಾರಗಳಿಗೂ ಟೆಂಡರ್ ಆಹ್ವಾನಿಸುವುದು ಅನಿವಾರ್ಯವಾಗಲಿದೆ. ಇದರಿಂದ ಅವೈಜ್ಞಾನಿಕ ದರ ನಿಗದಿಗೆ ಕಡಿವಾಣ ಹಾಕಲು ಸಾಧ್ಯ ಎಂಬುದು ಸರಕಾರದ ಲೆಕ್ಕಾಚಾರವಾಗಿದೆ.
ತಾತ್ಕಾಲಿಕವೇ?
ಇನ್ನೊಂದು ಮೂಲದ ಪ್ರಕಾರ 4(ಜಿ) ವಿನಾಯಿತಿಯನ್ನು ತಡೆಹಿಡಿಯಲಾಗಿದೆಯೇ ಹೊರತು ರದ್ದು ಮಾಡಿಲ್ಲ ಎಂದು ಉಲ್ಲೇಖೀಸಿಲ್ಲ. ಹೀಗಾಗಿ ಕೆಲವು ದಿನಗಳ ಮಟ್ಟಿಗೆ ಮಾತ್ರ ಇದು ಮುಂದುವರಿಯಬಹುದು. ಹಳೆ ಪ್ರಕರಣದ ತನಿಖೆ ಮುಗಿದ ಬಳಿಕ ಹೊಸ ಆದೇಶ ಹೊರಡಿಸಬಹುದು ಎನ್ನಲಾಗುತ್ತಿದೆ. ಆದರೆ ಕೆಲವು ಪ್ರಕರಣಗಳಲ್ಲಿ 200ರಿಂದ 400 ಪಟ್ಟು ದರ ನಿಗದಿ ಮಾಡಿದ ಹಗರಣ ಪಾತಾಳ ಗರಡಿಯಂತಾಗಿದ್ದು, ಆರೋಪಿಗಳ ಪತ್ತೆ ಸವಾಲಾಗಿದೆ.
40 ಪರ್ಸೆಂಟ್ ತನಿಖಾ ವ್ಯಾಪ್ತಿಗೆ: ಖರ್ಗೆ
ಕಿಯೋನಿಕ್ಸ್ ಅವ್ಯವಹಾರವನ್ನು 40 ಪರ್ಸೆಂಟ್ ಕಮಿಷನ್ ಹಗರಣದ ತನಿಖೆ ನಡೆಸುತ್ತಿರುವ ನ್ಯಾ| ನಾಗಮೋಹನ್ ದಾಸ್ ಸಮಿತಿ ವ್ಯಾಪ್ತಿಗೆ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. 4(ಜಿ) ರದ್ದತಿಯನ್ನು ದೃಢಪಡಿಸಿರುವ ಅವರು, ಕಿಯೋನಿಕ್ಸ್ ಸಂಸ್ಥೆಯನ್ನು ಮುಚ್ಚುವ ಪ್ರಸ್ತಾವ ಸರಕಾರದ ಮುಂದಿಲ್ಲ. ಆದರೆ ಪಾರದರ್ಶಕ ಕಾಯ್ದೆ ಅನ್ವಯ ನೀಡಿದ್ದ ವಿನಾಯಿತಿ ರದ್ದುಪಡಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಕೆಲವು ವಾರಗಳು ಅಥವಾ ತಿಂಗಳು ಮಟ್ಟಿಗೆ ಇದು ಮುಂದುವರಿಯಬಹುದು. ವ್ಯವಸ್ಥೆಯನ್ನು ಹಳಿಗೆ ತರಬೇಕಿದ್ದರೆ ಇದು ಅನಿವಾರ್ಯ. ಕಿಯೋನಿಕ್ಸ್ ಸಿಬಂದಿ, ಅಧಿಕಾರಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಿಯೋನಿಕ್ಸ್ ಹಗರಣದಲ್ಲಿ ನನ್ನ ಪಾತ್ರವಿದೆ ಎಂದು ಬಿಜೆಪಿಯವರು ಕಪೋಲಕಲ್ಪಿತ ಆರೋಪ ಮಾಡಿದ್ದರು. ನನ್ನ ರಾಜೀನಾಮೆಗೂ ಆಗ್ರಹಿಸಿದ್ದರು. ಸತ್ಯ ಬಹಿರಂಗವಾದ ಬಳಿಕ ಸುಮ್ಮನಾಗಿದ್ದಾರೆ ಎಂದು ಅವರು “ಉದಯವಾಣಿ’ಗೆ ತಿಳಿಸಿದರು.
-ರಾಘವೇಂದ್ರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.