Kharge: ಕುಟುಂಬದ ಭೂಮಿ ವಾಪಸ್! ಸಿದ್ದು ಮುಡಾ ನಿವೇಶನ ವಾಪಸ್ ಬೆನ್ನಿಗೆ
Team Udayavani, Oct 14, 2024, 7:04 AM IST
ಬೆಂಗಳೂರು: ರಾಜ್ಯದಲ್ಲಿ ನಿವೇಶನ ವಾಪಸಾತಿ ಸರಣಿ ಮುಂದು ವರಿದಿದ್ದು, ಮುಡಾ ಹಗರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮೈಸೂರಿನ ವಿಜಯನಗರ ಬಡಾವಣೆಯಲ್ಲಿದ್ದ 14 ನಿವೇಶನಗಳನ್ನು ಹಿಂದಿರುಗಿಸಿದರೆ, ಇತ್ತ ಸಚಿವ ಪ್ರಿಯಾಂಕ್ ಖರ್ಗೆ ಸಹೋದರ ರಾಹುಲ್ ಖರ್ಗೆ ಅಧ್ಯಕ್ಷರಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಕೂಡ ಬೆಂಗಳೂರಿನಲ್ಲಿ ಪಡೆ ದಿದ್ದ 5 ಎಕರೆ ನಾಗ ರಿಕ ಬಳಕೆ (ಸಿಎ) ನಿವೇಶನ ವನ್ನು ಕೆಐಎಡಿಬಿಗೆ ಮರಳಿಸಲು ನಿರ್ಧರಿಸಿದೆ.
ಈ ಬಗ್ಗೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಿಇಒಗೆ ಸೆ. 20ರಂದೇ 2 ಪುಟಗಳ ಪತ್ರ ಬರೆದಿರುವ ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ ಅವರು ದುರುದ್ದೇಶಪೂರಿತ, ನಿರಾಧಾರ ಮತ್ತು ರಾಜಕೀಯ ಪ್ರಚೋದಿತ ಆರೋಪಗಳ ನಡುವೆ ಶೈಕ್ಷಣಿಕ ಸಂಸ್ಥೆ ನಡೆಸಲು ಆಗುವುದಿಲ್ಲ ಎಂದಿದ್ದಾರೆ.
ಸಮಾಜ ಸೇವೆ ಮಾಡಬೇಕು ಎನ್ನುವ ಮಹತ್ತರ ಉದ್ದೇಶ ಮತ್ತು ಉನ್ನತ ಮೌಲ್ಯಗಳನ್ನು ಟ್ರಸ್ಟ್ ಹೊಂದಿದೆ. ಶಿಕ್ಷಣ ಮತ್ತು ಸಮಾಜ ಸೇವೆಯ ಮೂಲಕ ಅಬಲರನ್ನು ಸಶಕ್ತರನ್ನಾಗಿಸುವ ಪ್ರಾಥಮಿಕ ಮೂಲ ಉದ್ದೇಶದಿಂದ ವಿಷಯಾಂತರಿಸುವ ವಿವಾದಗಳಲ್ಲಿ ಸಿಲುಕಲು ನಾವು ಇಷ್ಟಪಡುವುದಿಲ್ಲ. ಹೀಗಾಗಿ ನಮ್ಮ ಪ್ರಸ್ತಾವನೆಯನ್ನು ಗೌರವಯುತವಾಗಿ ಹಿಂಪಡೆಯುತ್ತಿದ್ದೇವೆ. ಬಹುಕೌಶಲ ಅಭಿವೃದ್ಧಿ ಕೇಂದ್ರಕ್ಕಾಗಿ ಮಾಡಿದ್ದ ಹಂಚಿಕೆಯನ್ನು ರದ್ದುಪಡಿಸುವಂತೆ ಮನವಿ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಮುಂದಿನ ಪ್ರಕ್ರಿಯೆಗಳ ಬಗ್ಗೆ ಮಾರ್ಗದರ್ಶನ ಮಾಡುವಂತೆಯೂ ಕೋರುತ್ತೇವೆ ಎಂದಿದ್ದಾರೆ.
ಏನಿದು ಪ್ರಕರಣ?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಕುಟುಂಬಕ್ಕೆ ಸೇರಿದ, ರಾಹುಲ್ ಖರ್ಗೆ ಅಧ್ಯಕ್ಷರಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿಯ ಸಿಎ ಸೈಟ್ ಹಂಚಿಕೆ ಯಾಗು ವಲ್ಲಿ ಸಚಿವರ ಪ್ರಭಾವ ಬಳಕೆಯಾಗಿದೆ ಎಂಬುದು ಒಂದು ಆರೋಪವಾದರೆ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರ ಒತ್ತಡವೂ ಇತ್ತು ಎನ್ನುವ ಆರೋಪಗಳು ಕೇಳಿಬಂದಿದ್ದವು. ಈ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬವರಿಂದ ರಾಜ್ಯಪಾಲರಿಗೂ ದೂರು ಸಲ್ಲಿಕೆಯಾಗಿತ್ತು. ರಾಜ್ಯಪಾಲರು ಸರಕಾರದಿಂದ ಸ್ಪಷ್ಟನೆಯನ್ನೂ ಬಯಸಿದ್ದರು. ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಇದೇ ಪ್ರಕರಣ ಇಟ್ಟುಕೊಂಡು ಸಚಿವರ ರಾಜೀನಾಮೆಗೂ ಆಗ್ರಹಿಸಿದ್ದರು.
ಕಲಬುರಗಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬೆಂಗಳೂರಿನಲ್ಲಿ ನೀಡಿದ ಭೂಮಿ ಯನ್ನು ವಾಪಸ್ ಮಾಡಿರುವುದು ನನಗೆ ಸಂಬಂಧಿಸಿಲ್ಲ. ಟ್ರಸ್ಟ್‌ನ ಅಧ್ಯಕ್ಷರು ಇದ್ದಾರೆ. ಅವರನ್ನೇ ಕೇಳಿ ತಿಳಿದುಕೊಳ್ಳಿ.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಇದು ಖಾಸಗಿ ಟ್ರಸ್ಟ್ ಅಲ್ಲ, ಸಾರ್ವಜನಿಕ ಟ್ರಸ್ಟ್. ಟ್ರಸ್ಟ್‌ಗೆ ಬಂದ ಹಣ ದುರುಪಯೋಗ ಆಗುವುದಿಲ್ಲ. ಲಾಭದ ಉದ್ದೇಶ ಇರಲಿಲ್ಲ. ತರಬೇತಿ ಕೊಡುವುದು ಮೂಲ ಉದ್ದೇಶವಾಗಿತ್ತು. ವೈಯಕ್ತಿಕವಾಗಿ ರಾಜಕೀಯ ಆರೋಪದಿಂದ ಬೇಸರವಾಗಿದೆ. ನೊಂದು ನಿವೇಶನ ಮರಳಿಸಿದ್ದಾರೆ. ಆ ರೀತಿ ಇಲ್ಲಿ ಅಕ್ರಮ ನಡೆದಿದ್ದರೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ನಮ್ಮನ್ನು ಸುಮ್ಮನೆ ಬಿಡುತ್ತಿದ್ದರಾ? ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಂತೂ ಕಲಬುರಗಿಗೆ ಪಾದಯಾತ್ರೆ ಮಾಡಿಬಿಡುತ್ತಿದ್ದರು.
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
ಆಧುನಿಕ ತಂತ್ರಜ್ಞಾನಗಳಿಗೆ ತಕ್ಕಂತೆ ಕೌಶಲಾಭಿವೃದ್ಧಿ ಮೂಲಕ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಉದ್ದೇಶವಾಗಿತ್ತು. ಇದೊಂದು ಸಾರ್ವಜನಿಕ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಚಾರಿಟೆಬಲ್ ಟ್ರಸ್ಟ್. ಖಾಸಗಿ ಅಥವಾ ಕುಟುಂಬಕ್ಕೆ ಸೇರಿದ ಟ್ರಸ್ಟ್ ಅಲ್ಲ. ಲಾಭ ಗಳಿಕೆಯ ಉದ್ದೇಶದಿಂದ ಇದನ್ನು ಕಟ್ಟಿಲ್ಲ. ಸಾರ್ವಜನಿಕ ಟ್ರಸ್ಟ್ ಆಗಿರುವ ಇದರ ಆಸ್ತಿ ಅಥವಾ ಆದಾಯದಲ್ಲಿ ಪ್ರತ್ಯಕ್ಷವಾಗಿ ಆಗಲಿ, ಪರೋಕ್ಷವಾಗಿಯೇ ಆಗಲಿ ಯಾವ ಟ್ರಿಸ್ಟಿಯೂ ಲಾಭ ಪಡೆಯಲಾಗುವುದಿಲ್ಲ.
– ರಾಹುಲ್ ಖರ್ಗೆ, ಸಿದ್ಧಾರ್ಥ ವಿಹಾರ ಟ್ರಸ್ಟ್ ಅಧ್ಯಕ್ಷ
ಸಚಿವ ಪ್ರಿಯಾಂಕ್ ಖರ್ಗೆ ಅವರು ಕೆಐಎಡಿಬಿ ಭೂ ಹಗರಣದ ನಿವೇಶನ ಗಳನ್ನು ಹಿಂದಿರುಗಿಸುವುದು ಸಿಎಂ ಸಿದ್ದರಾಮಯ್ಯರ ಮುಡಾ ಹಗರಣದ ಅನಂತರ ಕಾಂಗ್ರೆಸ್ ಸರಕಾರದ ಮತ್ತೂಂದು ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಇದು ನ್ಯಾಯಕ್ಕೆ ಸಿಕ್ಕ ಗೆಲುವು. ಕಾಂಗ್ರೆಸ್ ಸರಕಾರದ ವಿರುದ್ಧದ ನಮ್ಮ ಹೋರಾಟ ಸಫಲ ವಾಗಿದೆ. ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ರಾಜೀನಾಮೆ ಯಾವಾಗ? ಸಚಿವ ಎಂ.ಬಿ. ಪಾಟೀಲರು ತನಿಖೆ ಮಾಡಿಸಿ, ಅಧಿಸೂಚನೆ ರದ್ದುಗೊಳಿಸಲಿ. ನೈತಿಕ ಹೊಣೆ ಹೊತ್ತು ರಾಜೀ ನಾಮೆ ಕೊಡಲಿ.
– ಚಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿಪಕ್ಷ ನಾಯಕ
ನಾನು ಅಂದು ಹೇಳಿದ್ದಕ್ಕೆ ಇಂದು ಸಮರ್ಥನೆ ಸಿಕ್ಕಿದೆ ಎಂದು ಭಾವಿಸುತ್ತೇನೆ. ಕೆಐಎಡಿಬಿಯಲ್ಲಿ ಅಕ್ರಮವಾಗಿ ಮಂಜೂರು ಮಾಡಿದ್ದ 5 ಎಕರೆ ಜಮೀನನ್ನು ಖರ್ಗೆ ಕುಟುಂಬ ಹಿಂದಿರುಗಿಸಿದೆ. ಅಂದು ನಾನು ಈ ವಿಷಯವನ್ನು ಪ್ರಸ್ತಾವಿಸಿ ದಾಗ ಜೂನಿಯರ್ ಖರ್ಗೆ ಮತ್ತು ಅವರ ಆಪ್ತರಿಂದ ನನಗೆ ಬೆದರಿಕೆ ಮತ್ತು ನಿಂದನೆಗಳು ಲಭಿಸಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಇದು ಮುಖ್ಯಮಂತ್ರಿ ಕುರ್ಚಿ ಪಡೆಯುವ ತಂತ್ರಗಾರಿಕೆ ನಡೆ ಆಗಿರಬಹುದು.
– ಲೆಹರ್ ಸಿಂಗ್, ಬಿಜೆಪಿ ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.